man returns home : ಕುಟುಂಬಸ್ಥರು ಅಂತ್ಯಕ್ರಿಯೆ ನಡೆಸಿದ 24 ಗಂಟೆಗಳ ಬಳಿಕ ಮನೆಗೆ ಮರಳಿದ ವ್ಯಕ್ತಿ!

ಚೆನ್ನೈ : ತಂದೆ ಮೃತಪಟ್ಟಿದ್ದಾರೆಂದು ಪುತ್ರ ಅಂತ್ಯಕ್ರಿಯೆ ನಡೆಸಿದರೆ ಮಾರನೇ ದಿನ ಬೆಳಗ್ಗೆ ತಂದೆಯೇ ಮನೆ ಮುಂದೆ ಪ್ರತ್ಯಕ್ಷವಾದಂತಹ (man returns home) ವಿಚಿತ್ರ ಘಟನೆ ಯೊಂದು ತಮಿಳುನಾಡಿನ (Tamil Nadu) ಈರೋಡ್​ ಬಳಿಯ ಬನಗಲಾದಪುರದಲ್ಲಿ ನಡೆದಿದೆ. ದಿನಗೂಲಿ ಕಾರ್ಮಿಕರಾಗಿದ್ದ ತಂದೆ ಮೃತಪಟ್ಟಿದ್ದಾರೆಂದು ಪುತ್ರ ಮೃತದೇಹವನ್ನು ಮಣ್ಣು ಮಾಡಿದ್ದರು.

ಕಬ್ಬು ಕಟಾವು ಮಾಡಲೆಂದು 55 ವರ್ಷದ ಮೂರ್ತಿ ಕೆಲವು ದಿನಗಳ ಹಿಂದೆ ತಿರುಪುರಕ್ಕೆ ತೆರಳಿದ್ದರು. ಆದರೆ ಪುತ್ರ ಕಾರ್ತಿಗೆ ನಿಮ್ಮ ತಂದೆ ಬಸ್​ ನಿಲ್ದಾಣದಲ್ಲಿ ಶವವಾಗಿ ಮಲಗಿದ್ದಾರೆ ಎಂಬ ವಾರ್ತೆ ಬರಸಿಡಿಲಿನಂತೆ ಬಂದೆರಗಿತ್ತು. ಕಾಲ್​ ಬರುತ್ತಿದ್ದಂತೆಯೇ ಹತ್ತಿರದ ಬಸ್​ ನಿಲ್ದಾಣಕ್ಕೆ ತೆರಳಿದ ಕಾರ್ತಿ ಇದು ನಮ್ಮ ತಂದೆಯ ಶವ ಎಂದು ಗುರುತಿಸಿದ್ದಾರೆ. ಇದೇ ವೇಳೆ ಸ್ಥಳಕ್ಕೆ ಆಗಮಿಸಿದ್ದ ಸತ್ಯಮಂಗಳಂ ಠಾಣಾ ಪೊಲೀಸರು ಶವವನ್ನು ಕಾರ್ತಿಗೆ ಕುಟುಂಬಕ್ಕೆ ಹಸ್ತಾಂತರಿಸಿದ್ದರು. ಸಂಬಂಧಿಕರ ಸಮ್ಮುಖದಲ್ಲಿ ಕಾರ್ತಿ ತಂದೆಯದ್ದು ಎನ್ನಲಾದ ಮೃತದೇಹವನ್ನು ಭಾನುವಾರ ಸಂಜೆ ಮಣ್ಣು ಮಾಡಿದ್ದರು.

ಆದರೆ ಸೋಮವಾರ ಬೆಳಗ್ಗೆ ಹೊಸದೊಂದು ಟ್ವಿಸ್ಟ್​ ಎದುರಾಗಿತ್ತು. ಕಬ್ಬು ಕಟಾವು ಕಾರ್ಯ ಮುಗಿಸಿ ತಂದೆ ಮೂರ್ತಿ ತಿರುಪುರದಿಂದ ಮನೆಗೆ ಮರಳಿದ್ದಾರೆ. ಮೂರ್ತಿಯನ್ನು ಕಳೆದುಕೊಂಡಿದ್ದ ದುಃಖದಲ್ಲಿದ್ದ ಕುಟುಂಬವು ಮೂರ್ತಿ ಜೀವಂತವಾಗಿದ್ದನ್ನು ಕಂಡು ಶಾಕ್​ ಆಗಿದೆ. ನನ್ನ ತಂದೆ ಸತ್ತಿದ್ದಾರೆ ಎಂದು ಕರೆ ಬಂದಾಗ ನನಗೆ ಎಷ್ಟು ಆಘಾತವಾಗಿತ್ತೋ ಈಗ ತಂದೆಯನ್ನು ನೋಡಿ ನನಗೆ ಅಷ್ಟೇ ಆಘಾತವಾಗಿದೆ . ನನ್ನ ಕಣ್ಣುಗಳನ್ನು ನನಗೇ ನಂಬಲಾಗುತ್ತಿಲ್ಲವೆಂದು ಪುತ್ರ ಕಾರ್ತಿ ಹೇಳಿದರು.

ಮೂರ್ತಿ ಮನೆಗೆ ಮರಳಿದ ಬಳಿಕ ಇದೀಗ ಮಣ್ಣು ಮಾಡಲಾದ ಶವ ಯಾರದ್ದು ಎಂಬ ಅನುಮಾನ ಶುರುವಾಗಿದೆ. ಹೀಗಾಗಿ ಅಂತ್ಯಕ್ರಿಯೆ ನಡೆದ ಸ್ಥಳಕ್ಕೆ ತೆರಳಿದ ಪೊಲೀಸರು ಶವವನ್ನು ಹೊರತೆಗೆಸಿದ್ದಾರೆ. ಸರ್ಕಾರಿ ವೈದ್ಯರ ಸಮ್ಮುಖದಲ್ಲಿ ಅಲ್ಲಿಯೇ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ಹೆಚ್ಚಿನ ತನಿಖೆಯ ಮೂಲಕ ಮೃತದೇಹದ ಗುರುತನ್ನು ಪೊಲೀಸರು ಪತ್ತೆ ಮಾಡಬೇಕಿದೆ.

ಇದನ್ನು ಓದಿ : Lockdown Again : ಮತ್ತೆ ಜಾರಿಯಾಗುತ್ತಾ ಲಾಕ್‌ಡೌನ್‌ : ಭಾರತದಲ್ಲಿ ಪತ್ತೆಯಾಯ್ತು ಅಪಾಯಕಾರಿ ಕೊರೊನಾ ವೈರಸ್

ಇದನ್ನೂ ಓದಿ : Photoshoot Dead : ಪೋಸ್ಟ್‌ ವೆಡ್ಡಿಂಗ್‌ ಪೋಟೋ ಶೂಟ್‌ ವೇಳೆ ದುರಂತ : ಮದುಮಗ ಸಾವು

Tamil Nadu man returns home alive 24 hours after relatives ‘buried’ his body

Comments are closed.