Kinder Surprise :ಕಿಂಡರ್​ ಉತ್ಪನ್ನ ಸೇವನೆಯಿಂದ ಬರುತ್ತೆ ಕಾಯಿಲೆ:ಎಚ್ಚರಿಕೆ ನೀಡಿದ ಬ್ರಿಟನ್​

ಕಿಂಡರ್​​ ಉತ್ಪನ್ನಗಳು ಅಂದರೆ ಮಕ್ಕಳಿಗೆ ತುಂಬಾನೇ ಅಚ್ಚುಮೆಚ್ಚು. ತಿಂಡಿಯ ಜೊತೆಗೆ ಆಟಿಗೆ ಸಾಮಗ್ರಿಗಳನ್ನೂ ಹೊಂದಿರುವ ಕಿಂಡರ್​ ಜಾಯ್​ಗಳು ಬಹುಬೇಗನೇ ಮಕ್ಕಳ ಗಮನವನ್ನು ಸೆಳೆದು ಬಿಡುತ್ತವೆ.ಆದರೆ ಇಟಲಿ ಮೂಲದ ಪೆರ್ರೆರೋ ಕಂಪನಿಗೆ ಸೇರಿದ ಈ ಕಿಂಡರ್​ ಉತ್ಪನ್ನಗಳನ್ನು ಸೇವಿಸಬೇಡಿ ಎಂದು ಬ್ರಿಟನ್​ನ ಆಹಾರ ಗುಣಮಟ್ಟದ ಏಜೆನ್ಸಿಯು ಮಹತ್ವದ ಮಾಹಿತಿಯನ್ನು ನೀಡಿದೆ.


ಈ ಕಿಂಡರ್​​ ಉತ್ಪನ್ನಗಳಲ್ಲಿ ಗಂಭೀರ ಕಾಯಿಲೆಗಳನ್ನು ಉಂಟು ಮಾಡಬಲ್ಲ ಸಾಲ್ಮೋನೆಲ್ಲಾ ಬ್ಯಾಕ್ಟೀರಿಯಾ ಪತ್ತೆಯಾದ ಹಿನ್ನೆಲೆಯಲ್ಲಿ ಬ್ರಿಟನ್​ ಆಹಾರ ಗುಣಮಟ್ಟದ ಏಜೆನ್ಸಿಯು ಈ ಎಚ್ಚರಿಕೆಯನ್ನು ನೀಡಿದೆ . 2020ರ ಜುಲೈ​ 11 ರಿಂದ 2022ರ ಅಕ್ಟೋಬರ್​ 7ರವರೆಗೆ ಬಳಕೆ ಮಾಡಬಹುದಾದ ಕಿಂಡರ್​ ಎಗ್​ ಸಪ್ರೈಸ್​ ಸೇವಿಸಬೇಡಿ ಎಂದು ಎಫ್​ಎಸ್​ಐ ಸೂಚನೆ ನೀಡಿದೆ.


ಬ್ರಿಟನ್​ನಲ್ಲಿ ಕಳೆದ ಕೆಲವು ದಿನಗಳಿಂದ ಸಾಲ್ಮೊನೆಲ್ಲಾ ಪ್ರಕರಣಗಳು ವರದಿಯಾಗುತ್ತಿದೆ. ಈಗಾಗಲೇ 63ಕ್ಕೂ ಅಧಿಕ ಪ್ರಕರಣಗಳು ಧೃಡಪಟ್ಟಿವೆ. ಆರೋಗ್ಯ ಭದ್ರತಾ ಏಜೆನ್ಸಿಯು ನಡೆಸಿದ ಸಂಶೋಧನೆಯಲ್ಲಿ ಈ ಕಾಯಿಲೆಗಳು ಉಂಟಾಗಲು ಕಿಂಡರ್​​ ಉತ್ಪನ್ನಗಳು ಕಾರಣ ಎಂಬ ಬೆಚ್ಚಿ ಬೀಳಿಸುವ ಅಂಶ ಬಟಾ ಬಯಲಾಗಿದೆ.


ಸಾಲ್ಮೋನೆಲ್ಲಾ ಎಂಬುದು ಒಂದು ರೀತಿಯ ಬ್ಯಾಕ್ಟಿರೀಯಾ ಆಗಿದ್ದು ಇದು ಮನುಷ್ಯನಲ್ಲಿ ಅತಿಸಾರ, ಹೊಟ್ಟೆ ನೋವು, ವಾಂತಿ , ಜ್ವರ ಹಾಗೂ ವಾಕರಿಕೆಯನ್ನು ಉಂಟು ಮಾಡುತ್ತದೆ.

ಇದನ್ನು ಓದಿ : Karnataka Cabinet Expansion : ಮತ್ತೊಮ್ಮೆ ಸಂಪುಟ ಸರ್ಕಸ್ : ಯಾರು ಇನ್ ಯಾರು ಔಟ್ ಇಲ್ಲಿದೆ ಡಿಟೇಲ್ಸ್

ಇದನ್ನೂ ಓದಿ : Sri Lanka : ಶ್ರೀಲಂಕಾದಲ್ಲಿ 36 ಗಂಟೆಗಳ ಕರ್ಫ್ಯೂ : ಟ್ವೀಟರ್‌, ಫೇಸ್‌ಬುಕ್‌, ವಾಟ್ಸಾಪ್‌ ಬ್ಯಾನ್‌

Kinder Surprise Linked For Spreading Disease

Comments are closed.