ICC T20 World Cup : ಇದೇ ಟೀಮ್ ಇಂಡಿಯಾದ ಬೆಸ್ಟ್ ಪ್ಲೇಯಿಂಗ್ XI ; ಇದು NewsNext ಚಾಯ್ಸ್

ಬೆಂಗಳೂರು: ಭಾರತ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಗೆಲ್ಲದೇ 15 ವರ್ಷಗಳೇ ಕಳೆದು ಹೋಗಿವೆ. 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಎಂ.ಎಸ್ ಧೋನಿ ನಾಯಕತ್ವದ ತಂಡ ಚಾಂಪಿಯನ್ ಆಗಿದ್ದೇ ಕೊನೆ. ನಂತರ ಭಾರತ ಒಮ್ಮೆಯೂ ಚುಟುಕು ವಿಶ್ವಕಪ್ ಗೆದ್ದಿಲ್ಲ.

15 ವರ್ಷಗಳಿಂದ ಮರೀಚಿಕೆಯಾಗುತ್ತಾ ಬಂದಿರುವ ಐಸಿಸಿ ಟಿ20 ವಿಶ್ವಕಪ್ ಟ್ರೋಫಿಯನ್ನು ಈ ಬಾರಿ ಭಾರತ ಗೆದ್ದೇ ಗೆಲ್ಲುವ ಉತ್ಸಾಹದಲ್ಲಿದೆ. ಆಸ್ಟ್ರೋಲಿಯಾದಲ್ಲಿ ಇದೇ ವರ್ಷದ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದ್ದು, ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಭಾರತವೂ ಒಂದು. ಹಾಗಾದ್ರೆ ಭಾರತಕ್ಕೆ ವಿಶ್ವಕಪ್ ಗೆದ್ದುಕೊಡಬಲ್ಲ ಆಟಗಾರರು ಯಾರು? ಭಾರತದ ಪ್ಲೇಯಿಂಗ್ XIನಲ್ಲಿ ಆಡುವ ಆಟಗಾರರು ಯಾರ್ಯಾರು? ಈ ಬಗ್ಗೆ ಮಾಜಿ ಕ್ರಿಕೆಟಿಗರು, ಕ್ರಿಕೆಟ್ ಪಂಡಿತರು ತಮ್ಮದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ : ಯುವರಾಜ್ ಸಿಂಗ್ ಮಗನಿಗೆ ನಾಮಕರಣ ; ಸಿಕ್ಸರ್ ಸಿಂಗ್ ಪುತ್ರನ ಹೆಸರೇನು ಗೊತ್ತಾ?

ಇದನ್ನೂ ಓದಿ : ICC T20 WC ಟಿ20 ವಿಶ್ವಕಪ್ : ಭಾರತ ತಂಡದ ‘ಫಸ್ಟ್ ಚಾಯ್ಸ್’ ಆಟಗಾರ ಇವನೇ !

News Next ಕೂಡ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಲಿರುವ ಭಾರತದ ಪ್ಲೇಯಿಂಗ್ XI ಹೆಸರಿಸಿದ್ದು, 11 ಆಟಗಾರರ ಪಟ್ಟಿ ಇಲ್ಲಿದೆ.

ಆರಂಭಿಕರು: ರೋಹಿತ್ ಶರ್ಮಾ(ನಾಯಕ), ಕೆ.ಎಲ್ ರಾಹುಲ್(ಉಪನಾಯಕ)
ಮಧ್ಯಮ ಕ್ರಮಾಂಕ (3 ಹಾಗೂ 4): ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್.
ವಿಕೆಟ್ ಕೀಪರ್: ದಿನೇಶ್ ಕಾರ್ತಿಕ್.
ಆಲ್ರೌಂಡರ್ಸ್: ಹಾರ್ದಿಕ್ ಪಾಂಡ್ಯ (ಬ್ಯಾಟ್/ಸೀಮ್ ಬೌಲಿಂಗ್), ರವೀಂದ್ರ ಜಡೇಜ(ಬ್ಯಾಟ್/ಎಡಗೈ ಸ್ಪಿನ್).
ಸ್ಪಿನ್ನರ್: ಯುಜ್ವೇಂದ್ರ ಚಹಲ್(ಲೆಗ್ ಸ್ಪಿನ್)
ಸೀಮ್ ಬೌಲಿಂಗ್: ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ.

ಇದನ್ನೂ ಓದಿ : IND vs SA 5th T20 ಮಳೆಗೆ ಬಲಿ : 50% ಟಿಕೆಟ್ ಹಣ ವಾಪಸ್, KSCA ಮಹತ್ವದ ನಿರ್ಧಾರ

ಇದನ್ನೂ ಓದಿ : ಭಾರತ ತಂಡಕ್ಕೆ ದಿನೇಶ್ ಕಾರ್ತಿಕ್ ಆಯ್ಕೆ, ಆಶಿಶ್‌ ನೆಹ್ರಾ ಮಹತ್ವದ ಘೋಷಣೆ

ICC T20 World Cup Best Playing XI Choice News Next

Comments are closed.