TET : ಅರ್ಹತಾ ಪ್ರಮಾಣ ಪತ್ರ ಜೀವಿತಾವಧಿವರೆಗೆ ಮಾನ್ಯ : ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್

ನವದೆಹಲಿ : ಟಿಇಟಿ (ಶಿಕ್ಷಕರ ಅರ್ಹತಾ ಪರೀಕ್ಷೆ ) ಅರ್ಹತಾ ಪ್ರಮಾಣಪತ್ರಗಳ ಸಿಂಧುತ್ವ ಏಳು ವರ್ಷಗಳ ವರೆಗೆ ಚಾಲ್ತಿಯಲ್ಲಿದ್ದು, ಇದೀಗ  ಜೀವಿತಾವಧಿಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್’ ತಿಳಿಸಿದ್ದಾರೆ.

ಶಾಲಾ ಶಿಕ್ಷಕರಾಗಿ ನೇಮಕಾತಿಗೆ ಟಿಇಟಿ ಅರ್ಹತಾ ಪ್ರಮಾಣಪತ್ರವನ್ನು ಹೊಂದಿರುವರಿಗೆ ಮಾತ್ರವೇ ಅರ್ಹತೆ ನೀಡಲಾಗುತ್ತದೆ. ಶಿಕ್ಷಕರ ಅರ್ಹತಾ ಪರೀಕ್ಷಾ ಅರ್ಹತಾ ಪ್ರಮಾಣಪತ್ರಗಳ ಸಿಂಧುತ್ವದ ಅವಧಿ ಯನ್ನು 7 ವರ್ಷಗಳ ವರೆಗೆ ಚಾಲ್ತಿಯಲ್ಲಿದ್ದು, ಮತ್ತೆ ಪರೀಕ್ಷೆ ಯನ್ನು ಎದುರಿಸ ಬೇಕಾಗಿತ್ತು. ಆದರೆ ಇದೀಗ  2021 ರಿಂದ ಪೂರ್ವಾನ್ವಯ ಪರಿಣಾಮದೊಂದಿಗೆ ಏಳು ವರ್ಷಗಳಿಂದ ಜೀವಿತಾವಧಿಗೆ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ ಎಂದಿದ್ದಾರೆ.

ಹೊಸ‌ ಆದೇಶದಿಂದಾಗಿ ಶಿಕ್ಷಕ ವೃತ್ತಿಗೆ ಸೇರ್ಪಡೆಗೊಳ್ಳುವವರಿಗೆ ಅನುಕೂಲವಾಗಲಿದೆ. ಏಳು ವರ್ಷಗಳ ಅವಧಿ ಈಗಾಗಲೇ ಮುಗಿದಿ ರುವ ಅಭ್ಯರ್ಥಿಗಳಿಗೆ ಮರು ಮೌಲ್ಯೀಕರಿಸಲು ಮತ್ತು ಹೊಸ ಟಿಇಟಿ ಪ್ರಮಾಣ ಪತ್ರಗಳನ್ನು ನೀಡಲು ಆಯಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪಕ್ಷಗಳು ಅಗತ್ಯ ಕ್ರಮ ತೆಗೆದುಕೊಳ್ಳುತ್ತವೆ‌ ಎಂದಿದ್ದಾರೆ.

Comments are closed.