Student beat teacher: ಕಡಿಮೆ ಮಾರ್ಕ್ಸ್ ಕೊಟ್ಟಿದ್ದಕ್ಕೆ ಶಿಕ್ಷಕರನ್ನ ಮರಕ್ಕೆ ಕಟ್ಟಿ ಥಳಿಸಿದ ಸ್ಟೂಡೆಂಟ್ಸ್

ರಾಂಚಿ : Student beat teacher ಕಳೆದ ಕೆಲ ದಿನಗಳಿಂದ ಒಂದಾದ ಮೇಲೊಂದರಂತೆ ಅಪರಾಧ ಸುದ್ದಿಗಳಿಂದ ಸದ್ದು ಮಾಡುತ್ತಿರುವ ಜಾರ್ಖಂಡನಲ್ಲಿ ಮತ್ತೊಂದು ಘಟನೆ ನಡೆದಿದೆ. ಪರೀಕ್ಷೆಯಲ್ಲಿ ಕಡಿಮೆ ಮಾರ್ಕ್ಸ್ ಕೊಟ್ಟಿದ್ದಕ್ಕೆ ವಿದ್ಯಾರ್ಥಿಗಳು ಶಿಕ್ಷಕರನ್ನೇ ಮರಕ್ಕೆ ಕಟ್ಟಿ ಥಳಿಸಿದ್ದಾರೆ.

ಜಾರ್ಖಂಡ್ ನ ಧುಮ್ಕಾ ಜಿಲ್ಲೆಯಲ್ಲಿ ನಡೆದಿರೋ ಈ ಘಟನೆಯ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಧುಮ್ಕಾ ಜಿಲ್ಲೆಯಲ್ಲಿ ಸರ್ಕಾರಿ ಕಾಲೇಜಿನ 11ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರ್ಯಾಕ್ಟಿಕಲ್ ಪರೀಕ್ಷೆ ನಡೆಸಲಾಗಿತ್ತು. ಆದ್ರೆ ಪ್ರ್ಯಾಕ್ಟಿಕಲ್ ಪರೀಕ್ಷೆಯಲ್ಲಿ ಅಂಕಗಳನ್ನ ಕಡಿಮೆ ಕೊಟಿದ್ದಾರೆ ಅಂತಾ ವಿದ್ಯಾರ್ಥಿಗಳ ತಂಡವೊಂದು ರೊಚ್ಚಿಗೆದ್ದಿದೆ. 10 ವಿದ್ಯಾರ್ಥಿಗಳು ಶಿಕ್ಷಕರು ಕಡಿಮೆ ಅಂಕಗಳನ್ನ ನೀಡಿದ್ದಕ್ಕಾಗಿಯೇ ಫೇಲ್ ಆಗಿದ್ದಾರೆ ಅಂತಾ ವಿದ್ಯಾರ್ಥಿಗಳು ಆರೋಪಿಸಿದ್ರು.

ಪ್ರಾಯೋಗಿಕ ಪರೀಕ್ಷೆಯ ಅಂಕಗಳನ್ನ ನೀಡದೇ ಶಿಕ್ಷಕರು ನಮ್ಮ ಜೀವನದ ಜೊತೆ, ಭವಿಷ್ಯದ ಜೊತೆ ಚೆಲ್ಲಾಟವಾಡ್ತಿದ್ದಾರೆ ಅಂತಾ ಶಾಲೆ ಶಿಕ್ಷಕ ಕುಮಾರ ಸುಮನ್, ಶಾಲೆಯ ಕ್ಲರ್ಕ್ ಸೋನೆ ರಾಮ್ ಬಳಿ ಹೋಗಿದ್ರು. ಪ್ರ್ಯಾಕ್ಟಿಕಲ್ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನ ತೋರಿಸುವಂತೆ ಕ್ಲರ್ಕ್ ಬಳಿ ಕೇಳಿಕೊಂಡಿದ್ರು. ಆದ್ರೆ ಕ್ಲರ್ಕ್ ಮತ್ತು ಶಿಕ್ಷಕ ಪ್ರ್ಯಾಕ್ಟಿಕಲ್ ಪರೀಕ್ಷೆಯ ಅಂಕಗಳನ್ನ ತೋರಿಸದೇ ಇದ್ದಾಗ ವಿದ್ಯಾರ್ಥಿಗಳು ಮೂವರನ್ನೂ ಶಾಲೆಯ ಮರಕ್ಕೆ ಕಟ್ಟಿದ್ದಾರೆ. ಅಷ್ಟೇ ಅಲ್ಲ ದೊಣ್ಣೆಗಳಿಂದ ಥಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಶಿಕ್ಷಕ ಕುಮಾರ ಸುಮನ್,ಪ್ರ್ಯಾಕ್ಟಿಕಲ್ ಅಂಕಗಳನ್ನ ಕೊಡುವ ಅಧಿಕಾರ ನನಗಿಲ್ಲ.. ಪರೀಕ್ಷೆಯ ಫಲಿತಾಂಶದಲ್ಲಿ ಕೆಲ ಮಕ್ಕಳ ಪ್ರ್ಯಾಕ್ಟಿಕಲ್ ಪರೀಕ್ಷೆಯ ಅಂಕಗಳನ್ನ ಸೇರಿಸಿಲ್ಲ.. ಹೀಗಾಗಿ ಇದ್ರಲ್ಲಿ ನನ್ನ ತಪ್ಪೇನು ಇಲ್ಲ ಎಂದಿದ್ದಾರೆ. ಸದ್ಯ ಪ್ರಕರಣ ಸಂಬಂಧ ಸ್ಥಳೀಯ ಶಿಕ್ಷಣ ಅಧಿಕಾರಿಗಳು ವಿಚಾರಣೆ ನಡೆಸ್ತಿದ್ದಾರೆ.ಏನೇ ಹೇಳಿ ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರ ಅನ್ನೋ ಕಾಲ ಹೋಗಿ, ಅಂಕ ಕೊಡದೇ ಇದ್ದುದಕ್ಕೆ ಶಿಕ್ಷಕರನ್ನೇ ಮರಕ್ಕೆ ಕಟ್ಟಿ ಥಳಿಸುವಷ್ಟರ ಮಟ್ಟಕ್ಕೆ ಹೋಗಿರೋದು ದುರಂತವೇ ಸರಿ.

The children beat up the teacher- beaten over poor marks in Jharkhand’s Dumka

Comments are closed.