Lumpy skin disease: 8 ರಾಜ್ಯಗಳಲ್ಲಿ ಜಾನುವಾರಗಳ ಜೀವ ಹಿಂಡುತ್ತಿದೆ ಚರ್ಮ ರೋಗ

ಅಲಹಾಬಾದ್ : Lumpy skin disease ಉತ್ತರ ಪ್ರದೇಶ, ಗುಜರಾತ್ ಸೇರಿದಂತೆ ಒಟ್ಟು 8 ರಾಜ್ಯಗಳಲ್ಲಿ ಜಾನುವಾರುಗಳಲ್ಲಿ ವಿಚಿತ್ರ ಚರ್ಮ ರೋಗ ಕಾಣಿಸಿಕೊಂಡಿದೆ. ಇದು ಗ್ರಾಮೀಣ ಪ್ರದೇಶಗಳಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

ಮನುಷ್ಯರಲ್ಲಿ ಕಾಣಿಸಿಕೊಳ್ಳುವ ಚಿಕನ್ ಫಾಕ್ಸ್ ರೀತಿಯಲ್ಲಿ ಪ್ರಾಣಿಗಳ ಚರ್ಮದ ಮೇಲೆ ದದ್ದುಗಳು ಏಳುತ್ತಿವೆ. ಈಗಾಗಲೇ ದೇಶಾದ್ಯಂತ 7 ಸಾವಿರಕ್ಕೂ ಅಧಿಕ ಜಾನುವಾರುಗಳು ಮೃತಪಟ್ಟಿವೆ. ಅದರಲ್ಲೂ ಉತ್ತರ ಪ್ರದೇಶದಲ್ಲಿ ಅತಿ ಜಾನುವಾರುಗಳಿಗೆ ವಿಶೇಷವಾಗಿ ಹಸುಗಳಲ್ಲಿ ಈ ಚರ್ಮದ ರೋಗ ಕಾಣಿಸಿಕೊಳ್ತಿದೆ.  

2019ರಲ್ಲಿ ಬಾಂಗ್ಲಾದೇಶದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದ  ಈ ರೋಗ ಏಷ್ಯಾದಲ್ಲಿ ವ್ಯಾಪಕವಾಗಿ ಸಾಂಕ್ರಾಮಿಕ ರೋಗವಾಗಿ ಹರಡುತ್ತಿದೆ. ಭಾರತದಲ್ಲಿ ಮೊದಲು ಗುಜರಾತ್ ನಲ್ಲಿ ಈ ವಿಚಿತ್ರ ಚರ್ಮ ರೋಗ ಕಾಣಿಸಿಕೊಂಡಿರೋ ಬಗ್ಗೆ ವರದಿಯಾಗಿದೆ.

ಮೂಲಗಳ ಪ್ರಕಾರ ಇದುವರೆಗೂ ಗುಜರಾತ್, ಉತ್ತರ ಪ್ರದೇಶ, ಜಮ್ಮು ಕಾಶ್ಮೀರ, ಹರಿಯಾಣ, ದೆಹಲಿ ಸೇರಿದಂತೆ 8ಕ್ಕೂ ಹೆಚ್ಚು ರಾಜ್ಯಗಳಲ್ಲಿ ಈ ವಿಚಿತ್ರ ಚರ್ಮ ರೋಗ ಕಾಣಿಸಿಕೊಂಡಿದೆ ಅಂತಾ ಹೇಳಲಾಗ್ತಿದೆ.  ಈ ಪೈಕಿ, ಪಂಜಾಬ್ ನಲ್ಲಿ 58,546 ಪ್ರಾಣಿಗಳಲ್ಲಿ ಈ ಚರ್ಚ ರೋಗ ಕಾಣಿಸಿಕೊಂಡಿದೆ. ಗುಜರಾತ್ ನಲ್ಲಿ 43.962 ಪ್ರಕರಣಗಳು ವರದಿಯಾಗಿವೆ. ಇನ್ನು ರಾಜಸ್ಥಾನದಲ್ಲಿ 6,385 ಪ್ರಕರಣ, ಜಮ್ಮು ಮತ್ತು ಕಾಶ್ಮೀರದಲ್ಲಿ 1300 ಕೇಸ್ ಗಳು ವರದಿಯಾಗಿವೆ.

ಈ ಚರ್ಮ ರೋಗ ಸೊಳ್ಳೆ ಮತ್ತು ನೊಣಗಳಂಥಹ ಕೀಟಗಳಿಂದ ಹರಡುತ್ತೆ ಅಂತಾ ಹೇಳಲಾಗ್ತಿದೆ. ಆದ್ರೆ ಕರ್ನಾಟಕದಲ್ಲಿ ಇದುವರೆಗೂ ಇಂಥ ಚರ್ಮ ರೋಗ ವರದಿಯಾದ ಬಗ್ಗೆ ಮಾಹಿತಿ ದೊರೆತಿಲ್ಲ. ಆದರೂ, ಗ್ರಾಮೀಣ ಭಾಗದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಹಸು, ಎತ್ತುಗಳ ಚರ್ಮದ ಮೇಲೆ ದದ್ದುಗಳು ಏಳ್ತಾ ಇದ್ರೆ ನಿರ್ಲಕ್ಷ್ಯ ಮಾಡದೇ ಪಶು ವೈದ್ಯರಲ್ಲಿ ಪರೀಕ್ಷೆ ಮಾಡಿಸುವಂತಯೂ ಹೇಳಲಾಗಿದೆ.

ಇದನ್ನೂ ಓದಿ : Food to Increase Vitamin B-12 : ವಿಟಮಿನ್‌ ಬಿ–12 ಹೆಚ್ಚಿಸುವ ಆಹಾರಗಳು : ನಿಮ್ಮ ನಿಶ್ಯಕ್ತಿಯ ಸಮಸ್ಯೆಗೆ ಇಲ್ಲಿದೆ ಪರಿಹಾರ

ಇದನ್ನೂ ಓದಿ : Murugha Seer in Jail : ಜೈಲು ಸೇರಿದ ಮುರುಘಾ ಶ್ರೀ

Lumpy skin disease-7,300 animals dead so far-skin disease in cattle spreads to over 8 states

Comments are closed.