The worst natural disaster: ಈ ಶತಮಾನದಲ್ಲಿ ಕಂಡ ಅತ್ಯಂತ ಭೀಕರ ನೈಸರ್ಗಿಕ ವಿಕೋಪ ದುರಂತ

(The worst natural disaster) ಟರ್ಕಿ ಹಾಗೂ ಸಿರಿಯಾ ದೇಶಗಳಲ್ಲಿ ಸೋಮವಾರ ಸಂಭವಿಸಿದ ಭೂಕಂಪಕ್ಕೆ ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಸತತ ನಾಲ್ಕು ಬಾರಿ ಭೂಕಂಪ ಸಂಭವಿಸಿದ್ದು, ಈ ಭೂಕಂಪಕ್ಕೆ ಎರಡು ದೇಶಗಳು ನಲುಗಿಹೋಗಿವೆ. ಟರ್ಕಿಯಲ್ಲಿ ಮೂರು ಸಾವಿರ ಮಂದಿ ಭೂಕಂಪಕ್ಕೆ ಬಲಿಯಾಗಿದ್ದು, ಸಿರಿಯಾದಲ್ಲಿ ಒಂದೂವರೆ ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.

ಟರ್ಕಿ ದೇಶದ ಇತಿಹಾಸದಲ್ಲಿ ಸಂಭವಿಸಿದ ಅತ್ಯಂತ ಭೀಕರ ಭೂಕಂಪಗಳಲ್ಲಿ ಇದು ಒಂದು. ಮೂವತ್ತು ದಶಕದ ಬಳಿಕ ಅತಿಘೋರ ಭೂಕಂಪ ಇದಾಗಿದ್ದು, ಈ ಪ್ರದೇಶಗಳು ಭೂಕಂಪೊದ ಸೂಕ್ಷ್ಮ ಸ್ಥಳಗಳಲ್ಲಿ ಇರುವ ಕಾರಣ ಇಲ್ಲಿ ಭೂಮಿ ಕಂಪಿಸುವುದು ಸಾಮಾನ್ಯ. ಸಾವಿನ ಪ್ರಮಾಣದ ದೃಷ್ಟಿಯಿಂದ ಈ ಶತಮಾನದ ಅತ್ಯಂತ ಘೋರ ಭೂಕಂಪಗಳೆಂದರೇ 2004 ರಲ್ಲಿ ಇಂಡೋನೇಷ್ಯಾದ ಬಂದಾ ಆಚೆ ಹಾಗೂ 2010 ರಲ್ಲಿ ಹೈಟಿಯಲ್ಲಿ ಸಂಭವಿಸಿದ ಭೂಕಂಪ. ಈ ಎರಡು ಭೂಕಂಪಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.

ಆಫ್ರಿಕಾ ಖಂಡದ ಹೈಟಿಯಲ್ಲಿ 2010 ರಲ್ಲಿ ನಡೆದ ಭೂಕಂಪಕ್ಕೆ ಮೂರು ಲಕ್ಷಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ರಿಕ್ಟರ್‌ ಮಾಪಕದಲ್ಲಿ 7.0 ತೀವ್ರತೆಯಲ್ಲಿ ಭೂಮಿ ಕಂಪಿಸಿದ್ದು, ನಗರ ಭಾಗಗಳಲ್ಲಿ ಕಂಪನ ಕೇಂದ್ರಿತವಾದ್ದರಿಂದ ಸಾವು ನೋವುಗಳು ಅಧಿಕವಾಗಿತ್ತು. ಇನ್ನೂ 2004 ರಲ್ಲಿ ಇಂಡೋನೇಷ್ಯಾದ ಬಂಡಾ ಆಚೆ ಎಂಬಲ್ಲಿ ನಡೆದ ಭೂಕಂಪವನ್ನು ಮರೆಯಲು ಸಾಧ್ಯವಿಲ್ಲ. ತಮಿಳುನಾಡು, ಶ್ರೀಲಂಕಾ ಸೇರಿದಂತೆ ಹನ್ನೆರಡಕ್ಕೂ ಹೆಚ್ಚು ದೇಶಗಳ ಕಡಲತೀರಗಳಲ್ಲಿ ಸುನಾಮಿ ಅಲೆ ಅಪ್ಪಳಿಸಿ ಎರಡು ಲಕ್ಷಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.

ಈ ಶತಮಾನದಲ್ಲಿ ಸಂಭವಿಸಿದ ಅತ್ಯಂತ ಭೀಕರ ಭೂಕಂಪಗಳ ಪಟ್ಟಿ

  • 2022, ಜೂನ್‌ 22: ಅಫ್ಘಾನಿಸ್ತಾನದಲ್ಲಿ 6.1 ತೀವ್ರತೆಯಲ್ಲಿ ಭೂಕಂಪ : 1,100 ಮಂದಿ ಬಲಿ
  • 2021, ಅಗಸ್ಟ್‌ 14: ಆಫ್ರಿಕಾ ಖಂಡದ ಹೈಟಿ ನಗರದಲ್ಲಿ 7.2 ತೀವ್ರತೆಯಲ್ಲಿ ಭೂಕಂಪ: 2,200 ಮಂದಿ ಬಲಿ
  • 2018, ಸೆ. 28 : ಇಂಡೋನೇಷ್ಯಾದಲ್ಲಿ 7.5 ತೀವ್ರತೆಯಲ್ಲಿ ಭೂಕಂಪ: 4,300 ಕ್ಕೂ ಹೆಚ್ಚು ಮಂದಿ ಬಲಿ
  • 2016, ಅ. 24: ಇಟಲಿಯಲ್ಲಿ 6.2 ತೀವ್ರತೆಯಲ್ಲಿ ಭೂಕಂಪ: 300 ಕ್ಕೂ ಹೆಚ್ಚು ಮಂದಿ ಸಾವು
  • 2015, ಏ. 25: ನೇಪಾಳ, 7.8 ತೀವ್ರತೆಯಲ್ಲಿ ಭೂಕಂಪ: 8,800 ಕ್ಕೂ ಹೆಚ್ಚು ಮಂದಿ ಸಾವು
  • 2011, ಮಾ. 11: ಪಾಕಿಸ್ತಾನ, 7.7 ತೀವ್ರತೆಯಲ್ಲಿ ಭೂಕಂಪ: 20 ಸಾವಿರಕ್ಕೂ ಹೆಚ್ಚು ಮಂದಿ ಸಾವು
  • 2010, ಜ. 12: ಹೈಟಿಯಲ್ಲಿ 7.0 ತೀವ್ರತೆಯಲ್ಲಿ ಭೂಕಂಪ: 3 ಲಕ್ಷಕ್ಕೂ ಹೆಚ್ಚು ಮಂದಿ ಸಾವು
  • 2008, ಮೇ. 12: ಚೀನಾದ ಸಿಚುವಾನ್‌ ನಲ್ಲಿ 7.9 ತೀವ್ರತೆಯ ಭೂಕಂಪ: 87,500 ಮಂದಿ ಸಾವು
  • 2005, ಮಾ.28: ಇಂಡೋನೇಷ್ಯಾ ಸುಮಾತ್ರ ದ್ವೀಪದಲ್ಲಿ 8.9 ತೀವ್ರತೆಯಲ್ಲಿ ಭೂಕಂಪ:1,300 ಕ್ಕೂ ಹೆಚ್ಚು ಮಂದಿ ಸಾವು
  • 2004 ಡಿ. 26: ಇಂಡೋನೇಷ್ಯಾದಲ್ಲಿ 9.1 ತೀವ್ರತೆಯಲ್ಲಿ ಭೂಕಂಪ: 2.3 ಲಕ್ಷಕ್ಕೂ ಹೆಚ್ಚು ಮಂದಿ ಸಾವು
  • 2003, ಡಿ. 26: ಇರಾನ್‌ ನಲ್ಲಿ 6.6 ತೀವ್ರತೆಯ ಭೂಕಂಪ: 50 ಸಾವಿರಕ್ಕೂ ಹೆಚ್ಚು ಮಂದಿ ಸಾವು

ಇದನ್ನೂ ಓದಿ : UAE New Travel Rules : ಯುಎಇ ಪ್ರಯಾಣಕ್ಕೆ ಹೊಸ ರೂಲ್ಸ್ : ಪಾಸ್‌ಪೋರ್ಟ್‌ನಲ್ಲಿ ಒಂದೇ ಹೆಸರಿದ್ರೆ ನೀವು ಏರುವಂತಿಲ್ಲ ವಿಮಾನ

The worst natural disaster: The worst natural disaster seen in this century

Comments are closed.