Threatening call for mumbai airport: ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ : ಹೈಅಲರ್ಟ್ ಘೋಷಣೆ

ಮುಂಬೈ: (Threatening call for mumbai airport) ನಗರದಲ್ಲಿ ಭಯೋತ್ಪಾದಕ ದಾಳಿ ನಡೆಸುವುದಾಗಿ ವ್ಯಕ್ತಿಯೊಬ್ಬರಿಂದ ಬೆದರಿಕೆ ಕರೆ ಬಂದಿದ್ದು, ಮುಂಬೈ ಪೊಲೀಸರು ಅಲರ್ಟ್ ಆಗಿದ್ದಾರೆ. ಬೆದರಿಕೆ ಕರೆ ಹಿನ್ನೆಲೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಮಹಾರಾಷ್ಟ್ರದ ವಿವಿಧ ನಗರಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕರೆ ಮಾಡಿದ ವ್ಯಕ್ತಿ ತನ್ನನ್ನು ಇರ್ಫಾನ್ ಅಹ್ಮದ್ ಶೇಖ್ ಎಂದು ಪರಿಚಯಿಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಸೋಮವಾರ ಮುಂಬೈ ವಿಮಾನ ನಿಲ್ದಾಣಕ್ಕೆ ರಾತ್ರಿ ವೇಳೆ ಕರೆ ಬಂದಿದ್ದು, ಕರೆ ಮಾಡಿದ ವ್ಯಕ್ತಿ ತನ್ನನ್ನು ತಾನು ಇರ್ಫಾನ್ ಅಹ್ಮದ್ ಶೇಖ್ ಎಂದು ಪರಿಚಯಿಸಿಕೊಂಡಿದ್ದು, ತಾನು ಭಯೋತ್ಪಾದನ ಸಂಘಟನೆ ಇಂಡಿಯನ್‌ ಮುಜಾಹಿದೀನ್‌ ಸದಸ್ಯ ಎಂದು ಹೇಳಿಕೊಂಡಿದ್ದಾನೆ. ನಂತರ ಕೆಲವು ಕೋಡ್‌ ಪದಗಳನ್ನು ಬಳಸಿ ಅನುಮಾನಸ್ಪದ ವಿಷಯಗಳ ಬಗ್ಗೆ ಮಾತನಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಮಾನ ನಿಲ್ದಾಣದ ಅಧಿಕಾರಿಗಳು ತಕ್ಷಣ ಮುಂಬೈ ಪೊಲೀಸರಿಗೆ ಕರೆ ಕುರಿತು ಮಾಹಿತಿ ನೀಡಿದ್ದು, ಪೊಲೀಸರು ಆ ವ್ಯಕ್ತಿಯ ವಿರುದ್ದ ಐಪಿಸಿ ಸೆಕ್ಷನ್‌ ೫೦೫(೧) ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಸಮಗ್ರವಾಗಿ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಇದರ ಮಧ್ಯೆ ಮುಂಬೈ ಪೊಲೀಸರು ಹಾಗೂ ಇತರ ತನಿಖಾ ದಳಗಳು ಅಲರ್ಟ್‌ ಆಗಿದ್ದು, ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಮಹಾರಾಷ್ಟ್ರದ ವಿವಿಧ ನಗರಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಒಂದು ವಾರದೊಳಗೆ ಮುಂಬೈಗೆ ಬಂದ ಎರಡನೇ ಬೆದರಿಕೆ ಕರೆ ಇದಾಗಿದೆ. ಕೆಲವು ದಿನಗಳ ಹಿಂದೆ, ಮುಂಬೈನಲ್ಲಿ ಭಯೋತ್ಪಾದಕ ದಾಳಿ ನಡೆಸುವುದಾಗಿ ಬೆದರಿಕೆ ಹಾಕುವ ತಾಲಿಬಾನಿ ಸದಸ್ಯ ಎಂದು ಹೇಳಿಕೊಳ್ಳುವ ಅಪರಿಚಿತ ವ್ಯಕ್ತಿಯಿಂದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಗೆ ಮೇಲ್ ಬಂದಿತ್ತು. ಜನವರಿಯಲ್ಲಿ ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ ಶಿಕ್ಷಣ ಸಂಸ್ಥೆಯನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದರು. ಕರೆ ಮಾಡಿದವರು ಶಾಲೆಯಲ್ಲಿ ಟೈಮ್ ಬಾಂಬ್ ಇಟ್ಟಿರುವುದಾಗಿಯೂ ಹೇಳಿಕೊಂಡಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಗರದ ವಿವಿಧೆಡೆ ಬಾಂಬ್‌ಗಳನ್ನು ಇರಿಸಿರುವ ಬಗ್ಗೆ ಮಾಹಿತಿ ನೀಡುವ ರೀತಿಯಲ್ಲಿ ಕರೆ ಬಂದಿತ್ತು. ಮುಂಬೈ ಪೊಲೀಸರಿಗೆ ‘ಅನುಮಾನಾಸ್ಪದ’ ಕರೆ ಬಂದಿದ್ದು, ನಗರದಾದ್ಯಂತ ಹಲವು ಪ್ರಮುಖ ಸ್ಥಳಗಳಲ್ಲಿ ಬಾಂಬ್‌ಗಳನ್ನು ಇರಿಸಲಾಗಿದೆ ಎಂದು ತಿಳಿಸಿದ್ದರು.

ಇದನ್ನೂ ಓದಿ : Uniform mandatory for auto drivers: ಆಟೋ, ಟ್ಯಾಕ್ಸಿ ಚಾಲಕರಿಗೆ ಸಮವಸ್ತ್ರ ಕಡ್ಡಾಯ: ಉಲ್ಲಂಘಿಸಿದ್ರೆ 10,000 ರೂ ದಂಡ ಖಚಿತ

ಇದನ್ನೂ ಓದಿ : Kerala student died: ಚಲಿಸುತ್ತಿದ್ದ ಬಸ್‌ ನಿಂದ ಬಿದ್ದು ವಿದ್ಯಾರ್ಥಿ ಸಾವು

Threatening call for mumbai airport: Threatening call for Mumbai International Airport: High alert announcement

Comments are closed.