Tomato Flu 100 cases : ಟೊಮ್ಯಾಟೊ ಜ್ವರ ಭೀತಿ: ಭಾರತದಲ್ಲಿ 9 ವರ್ಷದೊಳಗಿನ ಮಕ್ಕಳಲ್ಲಿ 100 ಪ್ರಕರಣ

ನವದೆಹಲಿ : ಕೊರೊನಾ ವೈರಸ್‌ ಸೋಂಕು ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ಭಾರತದಲ್ಲೀಗ ಟೊಮ್ಯಾಟೋ ಜ್ವರ ಭೀತಿ ಶುರುವಾಗಿದೆ. ಕೇರಳ, ಒಡಿಶಾ, ಹರಿಯಾಣ, ತಮಿಳುನಾಡು ರಾಜ್ಯಗಳಲ್ಲಿ ಜ್ವರದ ಪ್ರಕರಣ ಹೆಚ್ಚುತ್ತಿದೆ. ಭಾರತದಲ್ಲಿ 9 ವರ್ಷದೊಳಗಿನ ಮಕ್ಕಳಲ್ಲಿ 100 ಪ್ರಕರಣ (Tomato Flu 100 cases) ದಾಖಲಾಗಿದೆ. ಈ ಹಿನ್ನೆಲೆಯಲ್ಲೀಗ ಆರೋಗ್ಯ ಇಲಾಖೆ ಅಲರ್ಟ್‌ ಆಗಿದೆ.

ಟೊಮ್ಯಾಟೋ ಜ್ವರ ಒಂದು ವೈರಲ್ ಜ್ವರವಾಗಿದೆ. ಮಕ್ಕಳಲ್ಲಿಯೇ ಟೊಮ್ಯಾಟೋ ಪ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಪ್ರಮುಖವಾಗಿ ಟೊಮ್ಯಾಟೋ ಪ್ಲೂ ಸೋಂಕಿಗೆ ತುತ್ತಾದ ಮಕ್ಕಳಲ್ಲಿ ದೇಹದ ಹಲವು ಭಾಗಗಳಲ್ಲಿ ಟೊಮ್ಯಾಟೋ ಆಕಾರದ ಗುಳ್ಳೆಗಳು, ಜ್ವರ, ದದ್ದುಗಳು ಮತ್ತು ಕೀಲುಗಳಲ್ಲಿನ ನೋವು ಕಾಣಿಸಿಕೊಳ್ಳಲಿದೆ. ಅಲ್ಲದೇ ಆಯಾಸ, ವಾಕರಿಕೆ, ವಾಂತಿ, ಅತಿಸಾರ, ಜ್ವರ, ನಿರ್ಜಲೀಕರಣ, ಕೀಲುಗಳ ಊತ, ದೇಹದ ನೋವು ಸಾಮಾನ್ಯವಾದ ಲಕ್ಷಣಗಳಾಗಿವೆ.

ಭಾರತದಲ್ಲಿ ಪ್ರಮುಖವಾಗಿ ಕೇರಳ, ತಮಿಳುನಾಡು, ಹರಿಯಾಣ ಮತ್ತು ಒಡಿಶಾದಲ್ಲಿ ಹೆಚ್ಚು ಪ್ರಕರಣ ಪತ್ತೆಯಾಗಿದೆ. ಇದುವರೆಗೆ ಭಾರತದಲ್ಲಿ 9 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ 100 ಕ್ಕೂ ಮಕ್ಕಳಿಗೆ ಟೊಮ್ಯಾಟೋ ಜ್ವರ ಬಾಧಿಸಿದೆ. ಟೊಮ್ಯಾಟೋ ಜ್ವರ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಕೇಂದ್ರ ಆರೋಗ್ಯ ಸಚಿವಾಲಯವು ಕೈ ಕಾಲು ಮತ್ತು ಬಾಯಿ ರೋಗ (HFMD) ಎಂದೂ ಕರೆಯಲ್ಪಡುವ ಟೊಮ್ಯಾಟೋ ಜ್ವರದ ಬಗ್ಗೆ ಸಲಹೆಯನ್ನು ನೀಡಿದೆ. ಶಾಲೆಗೆ ಹೋಗುವ ಮಕ್ಕಳಲ್ಲಿ ಸೋಂಕು ಸಾಮಾನ್ಯವಾಗಿದೆ ಎಂದು ಗಮನಿಸಿ ರೋಗ ಲಕ್ಷಣಗಳು, ಚಿಕಿತ್ಸೆ ಮತ್ತು ತಡೆಗಟ್ಟುವಿಕೆಯ ಕುರಿತು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆಯನ್ನು ನೀಡಿದೆ.

ಕೇರಳವನ್ನು ಕಾಡುತ್ತಿದೆ ಟೊಮ್ಯಾಟೋ ಜ್ವರ
ಕೇರಳದಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಟೊಮ್ಯಾಟೋ ಜ್ವರ ಪ್ರಕರಣ ಕಂಡು ಬರುತ್ತಿದೆ. ಕಳೆದ ಮೇ ತಿಂಗಳಲ್ಲಿ, ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಟೊಮ್ಯಾಟೋ ಜ್ವರವನ್ನು ಮೊದಲು ಪತ್ತೆಯಾಗಿತ್ತು. ಜುಲೈ 26 ರವರೆಗೆ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ 82 ಕ್ಕೂ ಹೆಚ್ಚು ಮಕ್ಕಳು ಸೋಂಕು ಕಂಡುಬಂದಿತ್ತು. ಕೇರಳದ ಆಂಚಲ್, ಆರ್ಯಂಕವು ಮತ್ತು ನೆಡುವತ್ತೂರ್ ಪ್ರದೇಶಗಳನ್ನು ಟೊಮ್ಯಾಟೋ ಜ್ವರ ಪೀಡಿತ ಪ್ರದೇಶಗಳು ಎಂದು ಗುರುತಿಸಲಾಗಿದೆ.

ಕರ್ನಾಟಕದಲ್ಲಿ ಹೈ ಅಲರ್ಟ ಘೋಷಣೆ
ನೆರೆಯ ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಟೊಮ್ಯಾಟೋ ಪ್ಲೂ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆಯ ಕರ್ನಾಟಕದಲ್ಲಿಯೂ ಎಚ್ಚರಿಕೆಯನ್ನು ವಹಿಸುವಂತೆ ಸೂಚನೆಯನ್ನು ನೀಡಿದೆ. ಈ ಹಿಂದೆ ಕೋವಿಡ್‌ ಸೋಂಕಿತ ಪ್ರಕರಣಗಳು ಮುಂಬೈ, ಕೇರಳದಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಪತ್ತೆಯಾಗಿತ್ತು. ನಂತರದಲ್ಲಿ ಕರ್ನಾಟಕದಲ್ಲಿ ವ್ಯಾಪಕವಾಗಿ ಹರಡಿತ್ತು. ಇದೀಗ ಟೊಮ್ಯಾಟೋ ಜ್ವರ ಕೂಡ ಇದೆ ರೀತಿಯಲ್ಲಿ ವ್ಯಾಪಕವಾಗಿ ಹರಡುವ ಆತಂಕ ಎದುರಾಗಿದೆ.

ಸಾಮಾನ್ಯವಾಗಿ ರೋಗ ಲಕ್ಷಣಗಳನ್ನು ಹೊಂದಿರುವ ಮಕ್ಕಳಲ್ಲಿ, ಡೆಂಗ್ಯೂ, ಚಿಕೂನ್‌ಗುನ್ಯಾ, ಝಿಕಾ ವೈರಸ್, ವರಿಸೆಲ್ಲಾ-ಜೋಸ್ಟರ್ ವೈರಸ್ ಮತ್ತು ಹರ್ಪಿಸ್‌ಗಳ ರೋಗ ನಿರ್ಣಯಕ್ಕಾಗಿ ಆಣ್ವಿಕ ಮತ್ತು ಸಿರೊಲಾಜಿಕಲ್ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಒಂದೊಮ್ಮೆ ಇದ್ಯಾವುದೂ ಸೋಂಕು ಪತ್ತೆಯಾಗದೆ ಇದ್ರೆ, ಅಂತಹ ಪ್ರಕರಣಗಳನ್ನು ಟೊಮ್ಯಾಟೋ ಜ್ವರದ ರೋಗದ ಲಕ್ಷಣಗಳು ಎಂದು ಪರಿಗಣಿಸಲಾಗುತ್ತದೆ. ಹೆಚ್ಚಾಗಿ 1-10 ವರ್ಷ ವಯಸ್ಸಿನ ಚಿಕ್ಕ ಮಕ್ಕಳಲ್ಲಿಯೇ ಹೆಚ್ಚಾಗಿ ಕಂಡು ಬರುತ್ತಿದೆ. ಕೇವಲ ಮಕ್ಕಳಲ್ಲಿ ಮಾತ್ರವಲ್ಲದೆ ರೋಗ ನಿರೋಧಕ ಶಕ್ತಿಯನ್ನು ಕಳೆದುಕೊಂಡಿರುವ ವೃದ್ದರಲ್ಲಿಯೂ ಕೂಡ ಕಂಡು ಬರುವ ಸಾಧ್ಯತೆಯಿದೆ.

ಇದನ್ನೂ ಓದಿ : Student Kills Friend : ಶಾಲೆ ಹೋಗುವುದರಿಂದ ತಪ್ಪಿಸಿಕೊಳ್ಳಲು ಸ್ನೇಹಿತನನ್ನೇ ಕೊಂದು ಜೈಲು ಸೇರಿದ ಬಾಲಕ

ಇದನ್ನೂ ಓದಿ : Ganesh festival in Shimoga : ಶಿವಮೊಗ್ಗದಲ್ಲಿ ಗಣೇಶೋತ್ಸವಕ್ಕೂ ಮುನ್ನ ಗಲಭೆ ನಡೆಸಲು ಹುನ್ನಾರ : ಸಂಚಲನ ಮೂಡಿಸಿದ ಅನಾಮಧೇಯ ಪತ್ರ

Tomato Flu 100 cases reported in children below 9 years in India

Comments are closed.