Asia Cup 2022 : ಭಾರತ Vs ಪಾಕ್ ಮೆಗಾ ಫೈಟ್, ಸೇಡಿನ ಪಂದ್ಯಕ್ಕೆ ಟೀಮ್ ಇಂಡಿಯಾ ಪ್ಲೇಯಿಂಗ್ XI ಔಟ್

ದುಬೈ: ಇಡೀ ಕ್ರಿಕೆಟ್ ಜಗತ್ತಿನ ಗಮನವೀಗ ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಪಂದ್ಯದ ಮೇಲೆ ನೆಟ್ಟಿದೆ. ಸೂಪರ್ ಸಂಡೇ (ಆಗಸ್ಟ್ 18) ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಮೆಗಾ ಫೈಟ್’ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು (India vs Pakistan) ಏಷ್ಯಾ ಕಪ್‌ನ (Asia Cup 2022) ಎರಡನೇ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಪಾಕಿಸ್ತಾನ ವಿರುದ್ಧ ಭಾರತಕ್ಕಿದು ಸೇಡಿನ ಪಂದ್ಯ. ಕಳೆದ ವರ್ಷ ನಡೆದ ಐಸಿಸಿ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕ್ ವಿರುದ್ಧ ಅನುಭವಿಸಿದ್ದ ಸೋಲಿಗೆ ಟೀಮ್ ಇಂಡಿಯಾ ಸೇಡು ತೀರಿಸಿಕೊಳ್ಳುವ ಪಣ ತೊಟ್ಟಿದೆ. ಈ ಸೇಡಿನ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ ಎಂಬುದು ದೊಡ್ಡ ಕುತೂಹಲ.

Asia Cup 2022: ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI

ರೋಹಿತ್ ಶರ್ಮಾ (ನಾಯಕ), 2. ಕೆ.ಎಲ್ ರಾಹುಲ್ (ಉಪನಾಯಕ), 3. ವಿರಾಟ್ ಕೊಹ್ಲಿ, 4. ಸೂರ್ಯಕುಮಾರ್ ಯಾದವ್, 5. ಹಾರ್ದಿಕ್ ಪಾಂಡ್ಯ, 6. ರಿಷಭ್ ಪಂತ್/ದಿನೇಶ್ ಕಾರ್ತಿಕ್, 7. ರವೀಂದ್ರ ಜಡೇಜ, 8. ಭುವನೇಶ್ವರ್ ಕುಮಾರ್, 9. ಯುಜ್ವೇಂದ್ರ ಚಹಲ್, 10. ಆರ್.ಅಶ್ವಿನ್/ರವಿ ಬಿಷ್ಣೋಯ್, 11. ಅರ್ಷದೀಪ್ ಸಿಂಗ್.

ಪಂದ್ಯ ಆರಂಭ: ರಾತ್ರಿ 7.30ಕ್ಕೆ (ಭಾರತೀಯ ಕಾಲಮಾನ)
ಸ್ಥಳ: ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್’ವರ್ಕ್
Live ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

ಏಷ್ಯಾ ಕಪ್’ನಲ್ಲಿ ಇದುವರೆಗೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಒಟ್ಟು 14 ಬಾರಿ ಮುಖಾಮುಖಿಯಾಗಿದ್ದು ಭಾರತ 8 ಪಂದ್ಯಗಳಲ್ಲಿ ಗೆದ್ದಿದ್ರೆ ಪಾಕಿಸ್ತಾನ 5 ಪಂದ್ಯಗಳನ್ನು ಗೆದ್ದಿದೆ. 1 ಪಂದ್ಯದಲ್ಲಿ ಫಲಿತಾಂಶ ಬಂದಿಲ್ಲ.

ಏಷ್ಯಾ ಕಪ್: ಭಾರತ Vs ಪಾಕಿಸ್ತಾನ ಮುಖಾಮುಖಿ
ಪಂದ್ಯ: 14
ಭಾರತ ಗೆಲುವು: 08
ಪಾಕಿಸ್ತಾನ ಗೆಲುವು: 05
ನೋ ರಿಸಲ್ಟ್: 01

ಏಷ್ಯಾ ಕಪ್: ಭಾರತ Vs ಪಾಕಿಸ್ತಾನ ಮುಖಾಮುಖಿ

  1. ಏಪ್ರಿಲ್ 13, 1984; ಭಾರತಕ್ಕೆ 54 ರನ್ ಜಯ (ಏಕದಿನ; ಸ್ಥಳ: ಶಾರ್ಜಾ)
  2. ಅಕ್ಟೋಬರ್ 31, 1988; ಭಾರತಕ್ಕೆ 4 ವಿಕೆಟ್ ಜಯ (ಏಕದಿನ; ಸ್ಥಳ: ಢಾಕಾ
  3. ಏಪ್ರಿಲ್ 07, 1995; ಪಾಕಿಸ್ತಾನಕ್ಕೆ 97 ರನ್ ಜಯ (ಏಕದಿನ; ಸ್ಥಳ: ಶಾರ್ಜಾ)
  4. ಜುಲೈ 20, 1997; ಫಲಿತಾಂಶವಿಲ್ಲ (ಏಕದಿನ; ಸ್ಥಳ: ಕೊಲೊಂಬೊ)
  5. ಜೂನ್ 03, 2000; ಪಾಕಿಸ್ತಾನಕ್ಕೆ 44 ರನ್ ಜಯ (ಏಕದಿನ; ಸ್ಥಳ: ಢಾಕಾ)
  6. ಜುಲೈ 25, 2004; ಪಾಕಿಸ್ತಾನಕ್ಕೆ 59 ರನ್ ಜಯ (ಏಕದಿನ; ಸ್ಥಳ: ಕೊಲಂಬೊ)
  7. ಜೂನ್ 26, 2008; ಭಾರತಕ್ಕೆ 6 ವಿಕೆಟ್ ಜಯ (ಏಕದಿನ; ಸ್ಥಳ: ಕರಾಚಿ)
  8. ಜುಲೈ 02, 2008; ಪಾಕಿಸ್ತಾನಕ್ಕೆ 8 ವಿಕೆಟ್ ಜಯ (ಏಕದಿನ; ಸ್ಥಳ: ಕರಾಚಿ)
  9. ಜೂನ್ 19, 2010; ಭಾರತಕ್ಕೆ 3 ವಿಕೆಟ್ ಜಯ (ಏಕದಿನ; ಸ್ಥಳ: ದಾಂಬುಲ)
  10. ಮಾರ್ಚ್ 18, 2012; ಭಾರತಕ್ಕೆ 6 ರನ್ ಜಯ (ಏಕದಿನ; ಸ್ಥಳ: ಮೀರ್’ಪುರ್)
  11. ಮಾರ್ಚ್ 02, 2014; ಭಾರತಕ್ಕೆ 1 ವಿಕೆಟ್ ಜಯ (ಏಕದಿನ; ಸ್ಥಳ: ಮೀರ್’ಪುರ್)
  12. ಫೆಬ್ರವರಿ 27, 2016; ಭಾರತಕ್ಕೆ 5 ವಿಕೆಟ್ ಜಯ (ಟಿ20; ಸ್ಥಳ: ಮೀರ್’ಪುರ್)
  13. ಸೆಪ್ಟೆಂಬರ್ 19, 2018; ಭಾರತಕ್ಕೆ 8 ವಿಕೆಟ್ ಜಯ (ಏಕದಿನ; ಸ್ಥಳ: ದುಬೈ)
  14. ಸೆಪ್ಟೆಂಬರ್ 23, 2018; ಭಾರತಕ್ಕೆ 9 ರನ್ ಜಯ (ಏಕದಿನ; ಸ್ಥಳ: ದುಬೈ)

ಇದನ್ನೂ ಓದಿ : Virat Kohli 100 T20 Match : ಪಾಕಿಸ್ತಾನ ವಿರುದ್ಧದ ಏಷ್ಯಾ ಕಪ್ ಪಂದ್ಯದಲ್ಲಿ ಈ ಮಹೋನ್ನತ ದಾಖಲೆ ಬರೆಯಲಿದ್ದಾರೆ ಕಿಂಗ್ ಕೊಹ್ಲಿ

ಇದನ್ನೂ ಓದಿ : Virat Kohli not touch bat : “10 ವರ್ಷಗಳಲ್ಲಿ ಮೊದಲ ಬಾರಿ ಒಂದು ತಿಂಗಳು ಬ್ಯಾಟ್ ಮುಟ್ಟಲೇ ಇಲ್ಲ”

India vs Pakistan : Pakistan’s Playing XI Against India, Asia Cup 2022

Comments are closed.