UAE New Travel Rules : ಯುಎಇ ಪ್ರಯಾಣಕ್ಕೆ ಹೊಸ ರೂಲ್ಸ್ : ಪಾಸ್‌ಪೋರ್ಟ್‌ನಲ್ಲಿ ಒಂದೇ ಹೆಸರಿದ್ರೆ ನೀವು ಏರುವಂತಿಲ್ಲ ವಿಮಾನ

ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (UAE)ಗಳಿಗೆ ಪ್ರಯಾಣಿಕರು ಪ್ರವಾಸ ಅಥವಾ ವೃತ್ತಿಪರ ಪ್ರವಾಸ ಕೈಗೊಳ್ಳುವುದು ಸಾಮಾನ್ಯ. (UAE New Travel Rules )ಆದರೆ ಯುನೈಟೆಡ್ ಅರಬ್ ಎಮಿರೇಟ್ಸ್ ಇನ್ನು ಮುಂದೆ ಒಂದೇ ಹೆಸರಿನ ಪ್ರಯಾಣಿಕರ ಪ್ರವಾಸಕ್ಕೆ ಅನುಮತಿ ನೀಡುವುದಿಲ್ಲ ಎಂದು ಎಮಿರೇಟ್ ಹೊರಡಿಸಿದ ಹೊಸ ಮಾರ್ಗಸೂಚಿಗಳ ಆಧಾರದ ಮೇಲೆ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೀಡಿದ ಸಲಹೆಯನ್ನು ತಿಳಿಸಿದೆ.

ನವೆಂಬರ್ 21 ರಿಂದ ಜಾರಿಗೆ ಬರುವಂತೆ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ತನ್ನ ಪ್ರವೇಶ ನಿಯಮವನ್ನು ಬದಲಾವಣೆ ಮಾಡಿದೆ. ತನ್ನ ಸಾಮಾಜಿಕ ಜಾಲತಾನದಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ, ಒಂದೇ ಹೆಸರಿನ ಯಾವುದೇ ಪಾಸ್‌ಪೋರ್ಟ್ ಹೊಂದಿರುವವರಿಗೆ ಯುಎಇಗೆ ಪ್ರವೇಶಿಸಲು ಅನುಮತಿ ನೀಡಲಾಗುವುದಿಲ್ಲ ಎಂದು ಏರ್ ಇಂಡಿಯಾ ಹೇಳಿದೆ. ಈ ಹೊಸ ನಿಯಮವು ಭೇಟಿ ವೀಸಾ, ಆಗಮನದ ವೀಸಾ, ಉದ್ಯೋಗ ಮತ್ತು ತಾತ್ಕಾಲಿಕ ವೀಸಾ ಹೊಂದಿರುವ ಪ್ರಯಾಣಿಕರಿಗೆ ಮಾತ್ರ ಅನ್ವಯಿಸುತ್ತದೆ. ಅಸ್ತಿತ್ವದಲ್ಲಿರುವ ಯುಎಇ ನಿವಾಸಿ ಕಾರ್ಡ್ ಹೊಂದಿರುವವರಿಗೆ ಈ ನಿಯಮ ಅನ್ವಯಿಸುವುದಿಲ್ಲ.

ಉಪನಾಮ ಅಥವಾ ಕೊಟ್ಟಿರುವ ಹೆಸರಿನಲ್ಲಿ ಒಂದೇ ಹೆಸರಿನ (ಪದ) ಯಾವುದೇ ಪಾಸ್‌ಪೋರ್ಟ್ ಹೊಂದಿರುವವರನ್ನು ಯುಎಇ ವಲಸೆ ಸ್ವೀಕರಿಸುವುದಿಲ್ಲ. ಪ್ರಯಾಣಿಕರನ್ನು ಐಎನ್‌ಎಡಿ (Approved) ಎಂದು ಪರಿಗಣಿಸಲಾಗುತ್ತದೆ” ಎಂದು ಅದು ಹೇಳಿದೆ. ಒಬ್ಬ ವ್ಯಕ್ತಿಯು ಪಾಸ್‌ಪೋರ್ಟ್‌ನಲ್ಲಿ ಮೊದಲ ಅಥವಾ ಕೊನೆಯ ಹೆಸರನ್ನು ಹೊಂದಿದ್ದರೆ, ಅಂತಹ ಪ್ರಯಾಣಿಕರಿಗೆ ವೀಸಾವನ್ನು ನೀಡಲಾಗುವುದಿಲ್ಲ. ವೀಸಾವನ್ನು ಈ ಹಿಂದೆ ನೀಡಿದ್ದರೆ ಅವರನ್ನು ವಲಸೆ ಇಲಾಖೆಯಿಂದ ಒಪ್ಪಿಕೊಳ್ಳಲಾಗುವುದಿಲ್ಲ ಎಂದು ಏರ್‌ಲೈನ್ಸ್ ಹೇಳಿದೆ.

ಇದನ್ನೂ ಓದಿ : Dubai Hindu Temple : ದುಬೈನಲ್ಲಿ ಹಿಂದೂ ದೇವಾಲಯ ಉದ್ಘಾಟನೆ : ದೇವರ ದರ್ಶನಕ್ಕೆ ಬೇಕು ಅಪಾಯಿಂಟ್‌ಮೆಂಟ್‌

ಇದನ್ನೂ ಓದಿ : Qatar : ಜನ್ಮ ದಿನದಂದೇ ಶಾಲಾ ಬಸ್​ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದ ಬಾಲಕಿ

ಇದನ್ನೂ ಓದಿ : Afghanistan earthquake : ಅಪ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ : 255ಕ್ಕೂ ಅಧಿಕ ಮಂದಿ ಸಾವು

ಪ್ರವಾಸಿ, ಭೇಟಿ ಅಥವಾ ಇತರ ಯಾವುದೇ ರೀತಿಯ ವೀಸಾದಲ್ಲಿ ಪ್ರಯಾಣಿಸುವ ತಮ್ಮ ಪಾಸ್‌ಪೋರ್ಟ್‌ಗಳಲ್ಲಿ ಒಂದೇ ಹೆಸರನ್ನು ಹೊಂದಿರುವ ಪ್ರಯಾಣಿಕರಿಗೆ ಯುಎಇಗೆ ಅಥವಾ ಅಲ್ಲಿಂದ ಪ್ರಯಾಣಿಸಲು ಅನುಮತಿಸಲಾಗುವುದಿಲ್ಲ ಎಂದು ಇಂಡಿಗೋ ಹೇಳಿಕೆಯನ್ನು ನೀಡಿದೆ. “ಯುಎಇ ಅಧಿಕಾರಿಗಳ ಸೂಚನೆಗಳ ಪ್ರಕಾರ, ನವೆಂಬರ್ 21, 2022 ರಿಂದ ಜಾರಿಗೆ ಬರುವಂತೆ, ಪ್ರವಾಸಿ, ಭೇಟಿ ಅಥವಾ ಇತರ ಯಾವುದೇ ರೀತಿಯ ವೀಸಾದಲ್ಲಿ ಪ್ರಯಾಣಿಸುವ ತಮ್ಮ ಪಾಸ್‌ಪೋರ್ಟ್‌ಗಳಲ್ಲಿ ಒಂದೇ ಹೆಸರನ್ನು ಹೊಂದಿರುವ ಪ್ರಯಾಣಿಕರಿಗೆ ಯುಎಇಗೆ ಅಥವಾ ಯುಎಇನಿಂದ ಪ್ರಯಾಣಿಸಲು ಅನುಮತಿಸಲಾಗುವುದಿಲ್ಲ” ಎಂದು ತಿಳಿಸಿದೆ.

UAE New Travel Rules: passengers with single name on passport not allowed to enter

Comments are closed.