Kantara “Varaha Rupam” Controversy : ಕಾಂತಾರ “ವರಾಹ ರೂಪಂ” ವಿವಾದ : ಮೇಲ್ಮನವಿ ಅರ್ಜಿ ವಜಾ ಮಾಡಿದ ಕೇರಳ ಹೈಕೋರ್ಟ್

ಕಾಂತಾರ ಸಿನಿಮಾವು ದೇಶ ವಿದೇಶಗಳಲ್ಲಿ ಸಿನಿಪ್ರೇಕ್ಷಕರನ್ನು ಮೋಡಿ ಮಾಡಿದೆ. ಸಾಕಷ್ಟು ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಮಾಡುವ ಮೂಲಕ ಯಶಸ್ಸಿನ ಉತ್ತುಂಗದಲ್ಲಿರುವ (Kantara “Varaha Rupam” Controversy) ಕಾಂತಾರ ಸಿನಿಮಾ ಅಷ್ಟೇ ವಿವಾದಕ್ಕೂ ಗುರಿಯಾಗಿದೆ.ಈ ಸಿನಿಮಾದ ಹಾಡುಗಳಲ್ಲಿ “ವರಾಹ ರೂಪಂ” ಹಾಡು ವಿವಾದಕ್ಕೆ ಗುರಿಯಾಗಿದೆ. ಈಹಾಡಿನಲ್ಲಿ ಮೂಡಿ ಬಂದ ಟ್ಯೂನ್‌ ಮೇಲೆ ಕೃತಿಚೌರ್ಯ ಆರೋಪವನ್ನು ಹೊರಿಸಲಾಗಿದೆ. ಇದರಿಂದಾಗಿ ಮಲಯಾಳಂನ ಖ್ಯಾತ ಮ್ಯೂಸಿಕ್‌ ಬ್ಯಾಂಡ್‌ “ತೈಕ್ಕುಡಂ ಬ್ರಿಡ್ಜ್”‌ ಕೋರ್ಟ್‌ ಮೆಟ್ಟಿಲು ಏರಿದೆ.

ಕೇರಳದ ಕೋಯಿಕ್ಕೋಡ್‌ ಹಾಗೂ ಪಾಲಕ್ಕಾಡ್‌ ಜಿಲ್ಲ ನ್ಯಾಯಲಗಳು ಅರ್ಜಿ ವಿಚಾರಣೆ ನಡೆಸಿ, ಹಾಡನ್ನು ಒಪ್ಪಿಗೆ ಇಲ್ಲದೆ ಪ್ರಸಾರ ಮಾಡಬಾರದು ಎಂದು ಆದೇಶವನ್ನು ನೀಡಿದೆ. ಈ ಕುರಿತು ಕಾಂತಾರ ಸಿನಿಮಾದ ನಿರ್ಮಾಣ ಸಂಸ್ಥೆಯಾದ “ಹೊಂಬಾಳೆ ಫಿಲ್ಮ್ಸ್‌” ಈ ಆದೇಶವನ್ನು ಕೇರಳದ ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದೆ. ಆದರೆ ಕೋರ್ಟ್‌ ಈ ಅರ್ಜಿಯನ್ನು ತಿರಸ್ಕರಿಸಿದ್ದು, “ಅದೀನ ನ್ಯಾಯಾಲಗಳ ಕಾರ್ಯನಿರ್ವಹಣೆಯಲ್ಲಿ ಮಧ್ಯ ಪ್ರವೇಶಿಸಿದರೆ ಅರ್ಜಿದಾರರ ಶಾಸನಬದ್ಧ ಹಕ್ಕುಗಳಿಗೆ ಚ್ಯುತಿಯಾಗುತ್ತದೆ” ಎಂದು ಅಭಿಪ್ರಾಯ ಪಟ್ಟಿದೆ. ಹೈಕೋರ್ಟ್‌ ನಿರ್ದೇಶನವನ್ನು,”ನ್ಯಾಯಲಯದಿಂದ ಹೊರಗೆ ಈ ಪ್ರಕರಣವನ್ನು ಇತ್ಯರ್ಥ ಮಾಡಿಕೊಳ್ಳಿ” ಎನ್ನುವುದು ಪರೋಕ್ಷ ಸೂಚನೆ ಎಂಬಂತೆ ಹಲವಾರು ವ್ಯಾಖ್ಯಾನಿಸುತ್ತಿದ್ದಾರೆ.

ಕೇಳುಗರ ಪ್ರಕಾರ “ನವರಸಂ..” ಹಾಡಿನಲ್ಲಿರುವ ಟ್ಯೂನ್‌ ಕಾಂತಾರ ಸಿನಿಮಾದ “ವರಾಹ ರೂಪಂ..” ಹಾಡಿನಲ್ಲಿ ಬಳಕೆ ಆಗಿದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತಾಗಿ “ತೈಕ್ಕುಡಂ ಬ್ರಿಡ್ಜ್”‌ ಗಂಭೀರವಾಗಿ ಪರಿಗಣಿಸಿ ದೂರು ದಾಖಲು ಮಾಡಿದೆ. ಹಾಗಾಗಿ ಕೇರಳದ ಸ್ಥಳೀಯ ಕೋರ್ಟ್‌ ” ವರಾಹ ರೂಪಂ..” ಹಾಡಿಗೆ ತಡೆಯಾಜ್ಞೆಯನ್ನು ನೀಡಿದೆ. ಇದರ ಬಗ್ಗೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ ಸಿನಿಮಾ ನಿರ್ಮಾಣ ಸಂಸ್ಥಯಾದ “ಹೊಂಬಾಳೆ ಫಿಲ್ಮ್ಸ್‌ಗೆ ಬಾರಿ ಹಿನ್ನಡೆ ಆಗಿದೆ. ಕೇರಳ ಹೈಕೋರ್ಟ್‌ನ ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಸಿ.ಎಸ್.‌ ದಿಯಾಸ್‌ ಅವರು ಅರ್ಜಿಯನ್ನು ವಜಾ ಮಾಡಿದ್ದಾರೆ. ಅಷ್ಟೇ ಅಲ್ಲದೇ ಪರ್ಯಾಯ ಕಾನೂನು ಪರಿಹಾರ ತೆಗೆದುಕೊಳ್ಳುವಂತೆ ಅವಕಾಶ ನೀಡಿದ್ದಾರೆ.

ಇದನ್ನೂ ಓದಿ : Kamal Haasan : ಖ್ಯಾತ ನಟ ಕಮಲ್‌ ಹಾಸನ್‌ ಆಸ್ಪತ್ರೆಗೆ ದಾಖಲು

ಇದನ್ನೂ ಓದಿ : Priyanka Chopra Daughter: ಮೊದಲ ಬಾರಿಗೆ ಮುದ್ದು ಮಗಳ ಫೋಟೋ ಹಂಚಿಕೊಂಡ ನಟಿ ಪ್ರಿಯಾಂಕಾ ಛೋಪ್ರಾ; ಎಷ್ಟು ಮುದ್ದಾಗಿದೆ ಅಂದ್ರು ಅಭಿಮಾನಿಗಳು

ಇದನ್ನೂ ಓದಿ : Kantara Daiva Disguise : ಕಾಂತಾರ ಸಿನಿಮಾದ ದೈವದ ವೇಷದಲ್ಲಿ ಮಿಂಚಿದ ಪೊಲೀಸ್‌ ಸಿಬ್ಬಂದಿ

“ಅಧೀನ ನ್ಯಾಯಲಗಳು ಹೊರಡಿಸಿದ ಎಲ್ಲಾ ಆದೇಶಗಳಲ್ಲಿ ನಾವು ಮಧ್ಯ ಪ್ರವೇಶಿಸಬಾರದು. ಹಾಗೆ ಮಾಡಿದರೆ ಅಧೀನ ನ್ಯಾಯಲಯ ಬಲಗುಂದಿದಂತೆ ಆಗುತ್ತದೆ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದ್ದು, ಎಲ್ಲಾ ಮೇಲ್ಮನವಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ. ಹಾಗೆ ಮಾಡಿದರೆ ಕೋರ್ಟ್‌ನಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತದೆ” ಎಂದು ಹೈಕೋರ್ಟ್‌ ಹೇಳಿದೆ. ಈ ಮೂಲಕ ಅರ್ಜಿಯನ್ನು ವಜಾ ಮಾಡಿದೆ. ಇದರಿಂದಾಗಿ “ಹೊಂಬಾಳೆ ಫಿಲ್ಮ್ಸ್”‌ ಗೆ ಹಿನ್ನಡೆ ಆಗಿದೆ. ಹಾಗಾಗಿ “ಹೊಂಬಾಳೆ ಫಿಲ್ಮ್ಸ್” ಈ ವಿಚಾರದಲ್ಲಿ ಮುಂದೆ ಯಾವ ನಿರ್ಧಾರವನ್ನು ಕೈಗೊಳ್ಳುತ್ತದೆ ಎಂದು ಕೂತೂಹಲ ಮೂಡಿದೆ.

Kantara Varaha Rupam Controversy: Kerala High Court Dismisses Appeal Petition

Comments are closed.