ಅಬುಧಾಬಿಯಲ್ಲಿ ಮಿತಿಮೀರಿದ ಮಂಜಿನ ಕಾಟ : ದೇಶದ ಹಲವೆಡೆ ರೆಡ್​ ಅಲರ್ಟ್​ ಘೋಷಣೆ

ಅಬು ದಾಬಿಯ ನಿವಾಸಿಗಳಿಗೆ ಇಂದು ಮಂಜಿನ ಮುಂಜಾವು ಕಾಣಸಿಕ್ಕಿದೆ. ಇತ್ತ ದುಬೈ ಹಾಗೂ ಶಾರ್ಜಾದಲ್ಲಿ ಇಂದು ಭಾಗಶಃ ಮಂಜು ಮುಸುಕಿದ ವಾತಾವರಣ ಕಂಡು ಬಂದಿದೆ.ಮಂಜಿನ ಸ್ಥಿತಿಗತಿಗಳನ್ನು ಅವಲೋಕಿಸಿರುವ ರಾಷ್ಟ್ರೀಯ ಹವಾಮಾನ ಇಲಾಖೆಯು ಕೆಂಪು ಹಾಗೂ ಹಳದಿ ಫಾಗ್​ ಅಲರ್ಟ್​ ಘೋಷಣೆ(UAE Red alert) ಮಾಡಿದೆ. ಕರಾವಳಿ ಪ್ರದೇಶಗಳಲ್ಲಿ ಅದರಲ್ಲೂ ವಿಶೇಷವಾಗಿ ಪಶ್ಚಿಮ ಭಾಗಗಳಲ್ಲಿ ಮಂಜಿನ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹವಾಮಾನ ಇಲಾಖೆಯು ಅಲರ್ಟ್​ ಘೋಷಣೆ ಮಾಡಿದೆ.

ಅಬುಧಾಬಿಯ ಅಲ್​ಹಫರ್​, ರಜೀನ್​ ಅರ್ಜನ್​, ಅಬು ಅಲ್​ ಅಬ್ಯದ್​, ತಾಲ್​ ಅಲ್​ ಸರಬ್​, ಅಲ್​ ದಫ್ರಾ ಪ್ರದೇಶಗಳಲ್ಲಿ ದಟ್ಟವಾದ ಮಂಜು ಆವರಿಸಿದೆ. ಮಂಜಿನಿಂದಾಗಿ ರಸ್ತೆಗಳಲ್ಲಿ ಗೋಚರತೆ ಕಡಿಮೆ ಇರುವ ಹಿನ್ನೆಲೆಯಲ್ಲಿ ವಾಹನ ಚಾಲಕರಿಗೆ ನಿಧಾನವಾಗಿ ಹಾಗೂ ಎಚ್ಚರಿಕೆಯಿಂದ ವಾಹನ ಚಲಾಯಿಸಲು ಸೂಚನೆ ನೀಡಲಾಗಿದೆ. ದೇಶದಲ್ಲಿ ಗರಿಷ್ಠ ತಾಪಮಾನವು 22 ಡಿಗ್ರಿಯಿಂದ 27 ಡಿಗ್ರಿ ಸೆಲ್ಸಿಯಸ್​ ನಡುವೆ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಕನಿಷ್ಟ ತಾಪಮಾನವು 9 ರಿಂದ 15 ಡಿಗ್ರಿ ಸೆಲ್ಸಿಯಸ್​ ನಡುವೆ ಇರಲಿದೆ. ಯುಎಇ ಸ್ಥಳೀಯ ಕಾಲಮಾನದಲ್ಲಿ ರಕ್ನಾಹ್​ನಲ್ಲಿ 7.4 ಡಿಗ್ರಿ ಸೆಲ್ಸಿಯಸ್​ ದಾಖಲಾಗಿದ್ದು ಇದು ದೇಶಾದ್ಯಂತ ದಾಖಲಾದ ಅತ್ಯಂತ ಕಡಿಮೆ ತಾಪಮಾನವಾಗಿದೆ.

ಇಂದು ರಾತ್ರಿ ಹಾಗೂ ಶನಿವಾರ ಬೆಳಗ್ಗೆ ಕೂಡ ಮಂಜು ಆವರಿಸುವ ಸಾಧ್ಯತೆಗಳು ಇವೆ. ಕೆಲವು ಆಂತರಿಕ ಹಾಗೂ ಕರಾವಳಿ ಪ್ರದೇಶಗಳಲ್ಲಿ ಮಂಜು ರಚನೆಯಾಗುವ ಸಾಧ್ಯತೆಗಳು ದಟ್ಟವಾಗಿದೆ ಎಂದು ಹವಾಮಾನ ಇಲಾಖೆಯು ಹೇಳಿದೆ.

ಹಣದಾಸೆಗಾಗಿ ಎಟಿಎಂ ಯಂತ್ರವನ್ನೇ ಮುರಿಯಲು ಹೊರಟಿದ್ದವನ ಬಂಧನ

ಎಟಿಎಂ ಮಷಿನ್​​ಗಳನ್ನು ದೋಚುವ ಯತ್ನದಲ್ಲಿ ವಿಫಲನಾದ ಸುಡಾನ್​ ವಲಸಿಗನನ್ನು ಸೌದಿ ಅರೇಬಿಯಾದಲ್ಲಿ ಪೊಲೀಸರು ಬಂಧಿಸಿದ್ದಾರೆ. ಕಳ್ಳತನ ಯತ್ನದಲ್ಲಿ ಈತ ಎಟಿಎಂ ಯಂತ್ರಕ್ಕೆ ಹಾನಿ ಮಾಡಿದ್ದಾನೆ ಎನ್ನಲಾಗಿದೆ.ಮಧ್ಯ ಸೌದಿ ಅರೇಬಿಯಾದ ಬುರೈದಾ ನಗರದಲ್ಲಿ ಆರೋಪಿಯು ಎಟಿಎಂ ಯಂತ್ರದಿಂದ ಹಣವನ್ನು ಕದಿಯಲು ಯತ್ನಿಸಿದ್ದ. ಇದಕ್ಕಾಗಿ ಆತ ವಿದ್ಯುತ್​ ಗರಗಸವನ್ನು ಬಳಸಿದ್ದಾನೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.ಈತನ ವಿರುದ್ಧ ಕಾನೂನು ಕ್ರಮಗಳನ್ನು ಜರುಗಿಸಲಾಗಿತ್ತಿದೆ. ಮತ್ತು ಈತನ ವಿರುದ್ಧ ಸಾರ್ವಜನಿಕ ಕಾನೂನು ಕ್ರಮಕ್ಕೆ ಉಲ್ಲೇಖಿಸಲಾಗಿದೆ ಎಂದು ಪೊಲೀಸ್​ ಇಲಾಖೆಯು ಮಾಹಿತಿ ನೀಡಿದೆ.

ಸೌದಿ ಅರೇಬಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಎಟಿಎಂ ಧ್ವಂಸ ಪ್ರಕರಣಗಳು ಹೆಚ್ಚುತ್ತಿವೆ. ಎಟಿಎಂ ಯಂತ್ರಗಳನ್ನು ಧ್ವಂಸಗೊಳಿಸಲು ಯತ್ನಿಸಿದ ಆರೋಪದ ಅಡಿಯಲ್ಲಿ ಸೌದಿ ಪೊಲೀಸರು ಹಲವಾರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.
ಕಳೆದ ವರ್ಷದ ಅಕ್ಟೋಬರ್​ ತಿಂಗಳಿನಲ್ಲಿ ಸೌದಿ ಪೊಲೀಸರು ದಕ್ಷಿಣ ಗಡಿ ಪ್ರದೇಶವಾದ ಅಸಿರ್​ನಲ್ಲಿ ಹಣವನ್ನು ದೋಚುವ ಸಲುವಾಗಿ ಎಟಿಎಂ ಯಂತ್ರ ಹಾನಿಗೊಳಿಸಿದ್ದ ಇಬ್ಬರನ್ನು ಬಂಧಿಸಿದ್ದರು.2020ರ ಮಾರ್ಚ್​ ತಿಂಗಳಲ್ಲಿ ಸೌದಿ ಪೊಲೀಸರು ರಾಜಧಾನಿ ರಿಯಾದ್​​ನಲ್ಲಿ ಎಟಿಎಂ ಯಂತ್ರವನ್ನು ಸ್ಫೋಟಗೊಳಿಸಲು ಮುಂದಾಗಿದ್ದ 11 ಸದಸ್ಯರನ್ನು ಬಂಧಿಸಿದ್ದರು .

ಇದನ್ನು ಓದಿ : ಮತ್ತೆ ಬಣ್ಣ ಹಚ್ಚಲು ಸಿದ್ಧವಾದ್ರು ರಮ್ಯ : ಮಾರ್ಚ್ ನಲ್ಲಿ ಅನೌನ್ಸ್ ಆಗುತ್ತೆ ಸ್ಯಾಂಡಲ್ ವುಡ್ ಕ್ವಿನ್ ಸಿನಿಮಾ

ಇದನ್ನೂ ಓದಿ : ನಿರ್ಮಾಣ ಹಂತದ ಕಟ್ಟದ ಕುಸಿದು 7 ಮಂದಿ ಕಾರ್ಮಿಕರು ದುರ್ಮರಣ

UAE: Red alert as monster fog covers Abu Dhabi, partly cloudy in Dubai and Sharjah

Comments are closed.