MakaraJyoti :ಶಬರಿ ಮಲೆಯಲ್ಲಿ ಮಕರ ಜ್ಯೋತಿ ದರ್ಶನ

MakaraJyoti : ಅಯ್ಯಪ್ಪಸ್ವಾಮಿ ಭಕ್ತರಿಗೆ ಸಂಕ್ರಾಂತಿ ಹಬ್ಬದ ಶುಭದಿನದಂದು ಮಕರ ಜ್ಯೋತಿಯ ದರ್ಶನವಾಗಿದೆ. ಸಂಜೆ 6:30 ರಿಂದ 6:45ರ ವೇಳೆಯಲ್ಲಿ ಅಯ್ಯಪ್ಪನಿಗೆ ಪೂಜೆ ಸಲ್ಲುತ್ತಿದ್ದ ವೇಳೆಯಲ್ಲಿ ಪಂದಳಕಂದನ ಭಕ್ತರು ಮಕರವಿಳಕ್ಕು ದರ್ಶನವನ್ನು ಪಡೆದುಕೊಂಡಿದ್ದಾರೆ.


ಕೋವಿಡ್ ಸಂಕಷ್ಟದ ನಡುವೆಯೂ ಗುರುವಾರ ಸಂಜೆಯಿಂದ ಮಕರವಿಳಕ್ಕು ಪೂಜೆ ಹಾಗೂ ಯಾತ್ರೆಗೆಂದು ಶಬರಿ ಮಲೆ ದೇಗುಲದ ಬಾಗಿಲನ್ನು ಭಕ್ತರಿಗಾಗಿ ತೆರೆಯಲಾಗಿತ್ತು. ಅಯ್ಯಪ್ಪನಿಗೆ ಮಹಮಂಗಳಾರತಿ ನಡೆಯುತ್ತಿದ್ದ ವೇಳೆಯಲ್ಲಿ ಪೊನ್ನಂಬಲ ಮೇಡು ಬೆಟ್ಟದಲ್ಲಿ ಭಕ್ತರಿಗೆ ಮಕರ ಜ್ಯೋತಿಯ ದರ್ಶನವಾಗಿದೆ. ಈ ವೇಳೆಯಲ್ಲಿ ಸ್ವಾಮಿಯೇ ಶರಣಂ ಅಯ್ಯಪ್ಪ ಎಂಬ ಘೋಷ ಎಲ್ಲೆಡೆ ಮೊಳಗಿದೆ.


ಜ್ಯೋತಿಯ ರೂಪದಲ್ಲಿ ಪಂದಳಕಂದನ ದರ್ಶನ ಪಡೆದ ಭಕ್ತರು ಪುನೀತರಾಗಿದ್ದಾರೆ. ಮತ್ತೆ ಇದೇ ವೈಭವವನ್ನು ಕಣ್ತುಂಬಿಕೊಳ್ಳಬೇಕು ಅಂದರೆ ಅಯಪ್ಪನ್ನ ಭಕ್ತರು ಇನ್ನೊಂದು ಮಕರ ಸಂಕ್ರಾತಿಗೆ ಕಾಯಬೇಕು.


ಕೋವಿಡ್​ ಸಂಕಷ್ಟದ ನಡುವೆಯೇ ಶಬರಿ ಮಲೆಯಲ್ಲಿ ಮಕರವಿಳಕ್ಕು ಆಚರಣೆ ನಡೆಯುತ್ತಿದೆ. ಕೊರೊನಾ ಸೋಂಕಿಗೆ ಒಳಗಾಗಿದ್ದವರಿಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದ ಹಿನ್ನೆಲೆಯಲ್ಲಿ ದೇಗುಲದ ಮುಖ್ಯ ಅರ್ಚಕರು ಕ್ವಾರಂಟೈನ್​ಗೆ ಒಳಗಾಗಿದ್ದರು. ದೇವಸ್ಥಾನದಲ್ಲಿ ಈ ಬಾರಿ ಕೇವಲ 5000 ಭಕ್ತರಿಗೆ ಮಾತ್ರ ಅವಕಾಶ ನೀಡಲಾಗಿದೆ. ಜನವರಿ 20ರಂದು ದೇವಸ್ಥಾನದ ಬಾಗಿಲು ಭಕ್ತರಿಗೆ ಮುಚ್ಚಲಿದೆ.

makara jyoti seen at sabarimala

ಇದನ್ನು ಓದಿ : Nannamma Super Star samanvi : ನಟಿ ಅಮೃತಾ ನಾಯ್ಡು ಬಾಳಲ್ಲಿಇದೆಂತಾ ದುರಂತ : 2 ನೇ ಮಗು ಸಮನ್ವಿಯನ್ನು ಕಳೆದುಕೊಂಡ ಕಿರುತೆರೆ ನಟಿ

ಇದನ್ನೂ ಓದಿ : Coronavirus pandemic Updates : ದೇಶದಲ್ಲಿ ಒಂದೇ ದಿನ 2.47 ಲಕ್ಷ ಹೊಸ ಕೋವಿಡ್​ ಪ್ರಕರಣ ವರದಿ

Comments are closed.