Nashik Bus accident: ಯಾತ್ರಾರ್ಥಿಗಳಿದ್ದ ಬಸ್ಸು ಟ್ರಕ್‌ಗೆ ಢಿಕ್ಕಿ: 10 ಸಾವು, ಹಲವರಿಗೆ ಗಾಯ

ಮಹಾರಾಷ್ಟ್ರ: (Nashik Bus accident) ಮಹಾರಾಷ್ಟ್ರದ ನಾಸಿಕ್‌- ಶಿರಡಿ ಹೆದ್ದಾರಿಯಲ್ಲಿ ಬಸ್ಸೊಂದು ಟ್ರಕ್‌ ಢಿಕ್ಕಿ ಹೊಡೆದ ಪರಿಣಾಮ 10 ಮಂದಿ ಸಾವನ್ನಪ್ಪಿದ್ದು, 34ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಸಿನ್ನಾರ್-ಶಿರಡಿ ಹೆದ್ದಾರಿಯ ಪತ್ತಾರೆ ಗ್ರಾಮದ ಬಳಿ ಶುಕ್ರವಾರ ಬೆಳಗ್ಗೆ ಈ ಅಪಘಾತ ಸಂಭವಿಸಿದೆ.

ಮಹಾರಾಷ್ಟ್ರದ ಅಹಮದ್‌ ನಗರದಲ್ಲಿರುವ ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಯಾತ್ರಾರ್ಥಿಗಳನ್ನು ಬಸ್‌ ಹೊತ್ತೊಯ್ಯುತ್ತಿದ್ದು, ಈ ವೇಳೆ ನಾಸಿಕ್‌ ಹಾಗೂ ಶಿರಡಿ ಹೆದ್ದಾರಿಯಲ್ಲಿ ಬಸ್‌ ಟ್ರಕ್‌ ಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಹತ್ತು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಉಲ್ಲಾಸನಗರದಿಂದ ಸಾಯಿ ದರ್ಶನಕ್ಕೆ ಹೊರಟಿದ್ದ ಹದಿನೈದು ಬಸ್‌ ಗಳಲ್ಲಿ ಇದೂ ಒಂದು ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೂ ಘಟನೆ(Nashik Bus accident)ಯಲ್ಲಿ ಐವರು ಮಹಿಳೆಯರು, ಮೂವರು ಪುರುಷರು ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿದ್ದು, ಗಾಯಗೊಂಡವರನ್ನು ನಾಸಿಕ್‌ ಜಿಲ್ಲಾ ಆಸ್ಪತ್ರೆಗೆ ಹಾಗೂ ಕೆಲವರನ್ನು ಖಾಸಗಿ ಆಸ್ಪತ್ರೆಗೆ ಹಾಗೂ ಇನ್ನೂ ಕೆಲವರನ್ನು ಸಿನ್ನಾರ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನೂ ನಾಸಿಕ್-ಶಿರಡಿ ಹೆದ್ದಾರಿಯಲ್ಲಿ ಸಂಭವಿಸಿದ ಬಸ್‌ ಅಪಘಾತದಲ್ಲಿ ಸಂಭವಿಸಿದ ಸಾವಿನ ಬಗ್ಗೆ ಮಹಾರಾಷ್ಟ್ರದ ಸಿಎಂ ಏಕನಾಥ್‌ ಶಿಂಧೆ ಅಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ. ಇನ್ನೂ ಘಟನೆಯ ಕುರಿತಂತೆ ತನಿಖೆ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಿಎಂ ಆದೇಶ ನೀಡಿದ್ದಾರೆ.

ಇದನ್ನೂ ಓದಿ : Bengaluru road collapse : ಬೆಂಗಳೂರಿನಲ್ಲಿ ಮತ್ತೊಂದು ಅವಾಂತರ: ರಸ್ತೆ ಕುಸಿದು ಬಿದ್ದು ಯುವಕ ಗಂಭೀರ ಗಾಯ

ಇದನ್ನೂ ಓದಿ : Mother got suicide with childrens: 3 ಹೆಣ್ಣು ಮಕ್ಕಳಿಗೆ ವಿಷವುಣಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ

ಇದನ್ನೂ ಓದಿ : Mangaluru hindu worker death: ನೇತ್ರಾವತಿ ನದಿಯಲ್ಲಿ ಹಿಂದೂ ಕಾರ್ಯಕರ್ತನ ಶವ ಪತ್ತೆ: ಸಾವಿನ ಸುತ್ತ ಹಲವು ಶಂಕೆ

ಘಟನೆಯ ಕುರಿತಂತೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಎಂ ಆದೇಶದಂತೆ ತನಿಖೆ ಮುಂದುವರಿಸಲಾಗಿದೆ.

Nashik Bus accident: Pilgrim bus collides with truck: 10 dead, many injured

Comments are closed.