Uttarakhand avalanche: ಉತ್ತರಾಖಂಡ ಹಿಮಪಾತದಲ್ಲಿ ಸಿಲುಕಿದ ಕನ್ನಡಿಗರು

ಉತ್ತರ ಕಾಶಿ/ಉತ್ತರಾಖಂಡ್ : Uttarakhand avalanche ಮಂಗಳವಾರ ಉತ್ತರಾಖಂಡ್ ನ ಉತ್ತರ ಕಾಶಿ ಜಿಲ್ಲೆಯಲ್ಲಿ ಸಂಭವಿಸಿದ ಹಿಮಪಾತ ದುರಂತದಲ್ಲಿ ಕರ್ನಾಟಕದ ಮೂಲದ ಇಬ್ಬರು ಸಿಲುಕಿದ್ದಾರೆ ಅಂತಾ ಸುದ್ದಿ ಸಂಸ್ಥೆ ANI ವರದಿ ಮಾಡಿದೆ. ಇಬ್ಬರ ಹೆಸರನ್ನ ಮಾತ್ರ ಬಿಡುಗಡೆ ಮಾಡಲಾಗಿದ್ದು, ಕರ್ನಾಟಕದ ಮೂಲದ ಆ ಇಬ್ಬರು ಎಲ್ಲಿಯವರು ಅನ್ನೋದು ಇನ್ನಷ್ಟೇ ತಿಳಿಯಬೇಕಿದೆ.

ಮಂಗಳವಾರ ಉತ್ತರ ಕಾಶಿ ಜಿಲ್ಲೆಯ ದ್ರೌಪದಿ ಕಾ ದಂಡ-2 ಹಿಮ ಶಿಖರದಲ್ಲಿ ಹಿಮುಕುಸಿತವಾಗಿತ್ತು ಈವೇಳೆ ನೆಹರು ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್‌ನ 41 ಸದಸ್ಯರ ಪರ್ವತಾರೋಹಿಗಳ ತಂಡ ಸಿಕ್ಕಿಬಿದ್ದಿತ್ತು. ಈ ಹಿಮ ದುರಂತದಲ್ಲಿ 10 ಮಂದಿ ಮೃತಪಟ್ಟಿದ್ದಾರೆ ಅಂತಾ ಮೂಲಗಳು ತಿಳಿಸಿವೆ. ಈ ಮಧ್ಯೆ ಉತ್ತರಾಖಂಡ್ ಪೊಲೀಸರು 28 ಪರ್ವತಾರೋಹಿಗಳ ಹೆಸರಿನ ಪಟ್ಟಿಯನ್ನ ಬಿಡುಗಡೆ ಮಾಡಿದ್ದಾರೆ. ಇದ್ರಲ್ಲಿ ನಂಬರ್ 8 ರಲ್ಲಿರುವ ವಿಕ್ರಮ್ ಎಂ. ಮತ್ತು ನಂಬರ್ 20ರಲ್ಲಿ ಇರುವ ರಕ್ಷಿತ್ ಕೆ ಅನ್ನೋರು ಕರ್ನಾಟಕ ಮೂಲದವರು ಅಂತಾ ಉಲ್ಲೇಖಿಸಿದ್ದಾರೆ

Uttarakhand avalanche : ಮುಂದುವರಿದ ರಕ್ಷಣಾ ಕಾರ್ಯ

ಹಿಮಪಾತದಲ್ಲಿ ಸಿಲುಕಿರುವ ಪರ್ವತಾರೋಹಿಗಳ ರಕ್ಷಣಾ ಕಾರ್ಯ ಮುಂದುವರಿದಿದೆ. ಉತ್ತರ ಪ್ರದೇಶದ ಸರ್ಸಾವಾದಲ್ಲಿರುವ ಭಾರತೀಯ ವಾಯುಪಡೆಯ ಬೇಸ್ ಕ್ಯಾಂಪ್‌ನಿಂದ ಎರಡು ಹೆಲಿಕಾಪ್ಟರ್‌ಗಳು ಹರ್ಷಿಲ್ ಹೆಲಿಪ್ಯಾಡ್‌ಗೆ ಹಿಂದಿರುಗುವ ಮೊದಲು ಹಿಮಕುಸಿತ ಸ್ಥಳದ ಮರುಪರಿಶೀಲನೆಯನ್ನು ನಡೆಸಿವೆ. ಉತ್ತರಕಾಶಿ ಮೂಲದ ಎನ್‌ಐಎಂನಿಂದ 34 ತರಬೇತಿ ಪರ್ವತಾರೋಹಿಗಳು ಮತ್ತು ಏಳು ಬೋಧಕರ ತಂಡವು ಪರ್ವತವನ್ನ ಇಳಿಯುತ್ತಿದ್ದಾಗ ಬೆಳಿಗ್ಗೆ 8.45 ರ ಸುಮಾರಿಗೆ ಸುಮಾರು 17,000 ಅಡಿ ಎತ್ತರದಲ್ಲಿ ಹಿಮಕುಸಿತ ಸಂಭವಿಸಿದೆ ಎಂದು ಪ್ರಾಂಶುಪಾಲ ಕರ್ನಲ್ ಅಮಿತ್ ಬಿಶ್ತ್ ಹೇಳಿದ್ದಾರೆ. ಹಿಮಕುಸಿತದ ನಂತರ ತಂಡದ ಸದಸ್ಯರು ಬಿರುಕುಗಳಲ್ಲಿ ಸಿಲುಕಿಕೊಂಡರು ಎಂದು ಕರ್ನಲ್ ಬಿಶ್ತ್ ಹೇಳಿದರು. ಕತ್ತಲೆ ಮತ್ತು ಪ್ರತಿಕೂಲ ವಾತಾವರಣದಿಂದಾಗಿ ರಕ್ಷಣಾ ಕಾರ್ಯಾಚರಣೆಯನ್ನು ರಾತ್ರಿಯವರೆಗೆ ಸ್ಥಗಿತಗೊಳಿಸಲಾಗಿದೆ. ಬುಧವಾರ ಬೆಳಗ್ಗೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಬ್ಯಾರೆಲಿಯ ಏರ್ ಫೋರ್ಸ್ ಸ್ಟೇಷನ್‌ನಿಂದ ಆರ್ಮಿ ಎಎಲ್‌ಹೆಚ್ ಹೆಲಿಕಾಪ್ಟರ್ ತೆರಳಿದೆ.

https://twitter.com/vineetsharma94/status/1577269526239973376

ಘಟನೆ ಕುರಿತು ಟ್ವೀಟ್ ಮಾಡಿರೋ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಮೂಲ್ಯ ಜೀವಗಳ ನಷ್ಟದಿಂದ ತೀವ್ರ ದುಃಖಿತನಾಗಿದ್ದೇನೆ ಎಂದು ಸಂತಾಪ ಸೂಚಿಸಿದ್ದಾರೆ. ಅಲ್ದೆ ರಕ್ಷಣಾ ಕಾರ್ಯಕ್ಕೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ : Bus Falls In Gorge: ಪ್ರಪಾತಕ್ಕೆ ಬಿದ್ದ ಬಸ್.. 25ಕ್ಕೂ ಹೆಚ್ಚು ಬಲಿ.. ಮದುವೆ ಖುಷಿಯಲ್ಲಿದ್ದವರು ಮಸಣಕ್ಕೆ

Uttarakhand avalanche At least 10 mountaineers killed, Two people hailing from Karnataka were trapped

Comments are closed.