Mysore Dasara Jamboo Savari : ವಿಶ್ವವಿಖ್ಯಾತ ಜಂಬೂ ಸವಾರಿಗೆ ಕ್ಷಣಗಣನೆ.. ಮೈಸೂರಲ್ಲಿ ಇಂದು ಏನೆಲ್ಲ ಕಾರ್ಯಕ್ರಮ ಇವೆ

ಮೈಸೂರು :Mysore Dasara Jamboo Savari : ವಿಶ್ವವಿಖ್ಯಾತ ನಾಡಹಬ್ಬ, ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ನಡೆಯಲು ಕ್ಷಣಗಣನೆ ಆರಂಭವಾಗಿದೆ. ನಾಡ ದೇವಿ ಚಾಮುಂಡೇಶ್ವರಿಯನ್ನ ಚಿನ್ನದ ಅಂಬಾರಿಯಲ್ಲಿ ಹೊರಲು ಅಭಿಮನ್ಯು ಬಳಗ ಸಜ್ಜಾಗಿದೆ.

ನವರಾತ್ರಿಯ 10ನೇ ದಿನವಾದ ಇಂದು ಅರಮನೆಯಲ್ಲಿ ಸಾಂಪ್ರದಾಯಿಕ ವಿಜಯದಶಮಿ ಆಚರಣೆ ನೆರವೇರಲಿದೆ. ಬೆಳಗ್ಗೆ 9.45 ಕ್ಕೆ ಪಟ್ಟದ ಆನೆ, ಕುದುರೆ, ಒಂಟೆ, ಹಸು ಆನೆ ಅರಮನೆ ಬಾಗಿಲಿಗೆ ಬರುತ್ತದೆ. ಅಲ್ಲಿ ಅವುಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಬೆಳಗ್ಗೆ 10.15 ಕ್ಕೆ ವಜ್ರಮುಷ್ಠಿ ಕಾಳಗ ನಡೆಯಲಿದ್ದು, ನಂತರ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿಜಯ ಯಾತ್ರೆಯನ್ನು ಮಾಡಿ ಬನ್ನಿ ಮರಕ್ಕೆ ಶಮಿ ಪೂಜೆ ಸಲ್ಲಿಸುತ್ತಾರೆ. ವಿಜಯಯಾತ್ರೆ ಮುಗಿದ ನಂತರ ಅರಮನೆಗೆ ವಾಪಸ್ ಆಗಿ ಚಾಮುಂಡೇಶ್ವರಿ ಪೂಜೆ ಸಲ್ಲಿಸುತ್ತಾರೆ. ಆ ಮೂಲಕ ವಿಜಯದಶಮಿಗೆ ಸಾಂಪ್ರದಾಯಿಕವಾಗಿ ಕೊನೆಗೊಳ್ಳುತ್ತದೆ.

ಇಂದು ಮಧ್ಯಾಹ್ನ ಅರಮನೆಯ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನಂದಿಧ್ವಜಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಗಜಪಡೆಯ ಅರ್ಜುನ ನಿಶಾನೆ ಆನೆಯಾಗಿ ದಸರಾ ಮೆರವಣಿಗೆಯನ್ನು ಮುನ್ನಡೆಸಲಿದ್ದಾನೆ. ಸಂಜೆ 5.7ರಿಂದ 5.18ರ ನಡುವಿನ ಮೀನ ಲಗ್ನದಲ್ಲಿ ಜಂಬೂಸವಾರಿ ಮೆರವಣಿಗೆಗೆ ಸಿಎಂ ಬೊಮ್ಮಾಯಿ, ಸೇರಿದಂತೆ ಗಣ್ಯರು ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ.

https://www.youtube.com/watch?v=S6y5Cth0Ako

2019ರಲ್ಲಿ ಅಂಬಾರಿ ಹೊರುವ ಆನೆ ಅರ್ಜುನ ನಿವೃತ್ತಿ ಹೊಂದಿತ್ತು. ಹೀಗಾಗಿ ಅಭಿಮನ್ಯುವಿಗೆ ಅಂಬಾರಿ ಹೊರುವ ಅವಕಾಶ ಸಿಕ್ಕಿತ್ತು. ಇದೀಗ ಮೂರನೇ ಬಾರಿ ಅಭಿಮನ್ಯು 750 ಕೆ.ಜಿ ತೂಕದ ಅಂಬಾರಿಯನ್ನ ಹೊರಲಿದ್ದಾನೆ. ಕಳೆದ ಎರಡು ವರ್ಷದಿಂದ ಕೊರೊನಾ ಕಾರಣದಿಂದ ಅರಮನೆಯ ಆವರಣದಲ್ಲಿ ಮಾತ್ರ ಜಂಬೂ ಸವಾರಿ ನಡೆದಿತ್ತು. ಆದ್ರೆ ಈ ಬಾರಿ ಬನ್ನಿಮಂಟಪದವರೆಗೆ ಅಭಿಮನ್ಯು ಅಂಬಾರಿ ಹೊರಲಿದ್ದಾನೆ.

ಅಭಿಮನ್ಯವಿನ ಜತೆಗೆ ಹದಿಮೂರು ಆನೆಗಳು, ಅಶ್ವಪಡೆಗಳು, 43 ಸ್ತಬ್ಧಚಿತ್ರಗಳು, ಜಾನಪದ ತಂಡಗಳು ಇರಲಿವೆ. ಅರಮನೆ ಆವರಣದಲ್ಲಿ 50 ಸಾವಿರ ಮಂದಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಗೋಲ್ಡ್‌ ಕಾರ್ಡ್‌, ವಿವಿಐಪಿ, ವಿಐಪಿ ಪಾಸ್‌ ಇರುವವರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗುತ್ತದೆ. ನಾಡದೇವತೆ ಚಾಮುಂಡೇಶ್ವರಿ ಮೂರ್ತಿ ಇರುವ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತು ಸಾಗುವ ಜಂಬೂಸವಾರಿ ಮತ್ತು ನಾಡಿನ ಕಲೆ ಸಾಂಸ್ಕೃತಿಕ ವೈಭವ ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ಕಾತರಾಗಿದ್ದಾರೆ. ಸಂಜೆ 7.30ಕ್ಕೆ ಬನ್ನಿಮಂಟಪದ ಮೈದಾನದಲ್ಲಿ ಪಂಜಿನ ಕವಾಯತು ಜರುಗಲಿದೆ. ಇದರೊಂದಿಗೆ ಸಂಭ್ರಮದ ನಾಡಹಬ್ಬಕ್ಕೆ ತೆರೆ ಬೀಳಲಿದೆ.

ಇದನ್ನೂ ಓದಿ: Kodi mutt sree:ರಾಜ್ಯಕ್ಕೆ ಕಾದಿದೆ ದೊಡ್ಡ ಅವಘಡ,ಕುಡಿಯೋಕೆ ನೀರು ಸಿಗದ ಪರಿಸ್ಥಿತಿ ಬರುತ್ತೆ : ಕೋಡಿಮಠದ ಸ್ವಾಮೀಜಿ ಭವಿಷ್ಯ

Mysore Dasara Jamboo Savari The countdown has started for the main attraction of Mysore Dussehra Jamboo Ride

Comments are closed.