Vice President Jagdeep Dhankhar : ವಕೀಲ ವೃತ್ತಿಯಿಂದ ಉಪರಾಷ್ಟ್ರಪತಿ : ಜಗದೀಪ್ ಧಂಕರ್ ಹಿನ್ನೆಲೆ ನಿಮಗೆ ಗೊತ್ತಾ ?

ನವದೆಹಲಿ : ಭಾರತದ 14ನೇ ಉಪರಾಷ್ಟ್ರಪತಿಯಾಗಿ ಎನ್‌ಡಿಎ ಅಭ್ಯರ್ಥಿ ಜಗದೀಪ್‌ ದಂಕರ್‌ (Vice President Jagdeep Dhankhar) ಅವರು ಆಯ್ಕೆಯಾಗಿದ್ದಾರೆ. ವಕೀಲರಾಗಿ ಸೇವೆ ಆರಂಭಿಸಿದ್ದ ದಂಕರ್‌ ನಂತರ ಸಂಸದರಾಗಿ, ಶಾಸಕರಾಗಿ, ರಾಜ್ಯಪಾಲರಾಗಿ ಇದೀಗ ಭಾರತದ ಉಪರಾಷ್ಟ್ರಪತಿಯಾಗಿ ನೇಮಕವಾಗಿದ್ದಾರೆ. ಅಷ್ಟಕ್ಕೂ ಜಗದೀಪ್‌ ದಂಕರ್‌ ಯಾರು, ಅವರ ಹಿನ್ನೆಲೆ ಏನು ಅನ್ನೋ ಮಾಹಿತಿ ಇಲ್ಲಿದೆ.

ಜಗದೀಪ್‌ ಧಂಕರ್ ಅವರು ರಾಜಸ್ಥಾನದ ಜುಂಜುನು ಜಿಲ್ಲೆಯ ಕಿಥಾನಾದ ಸಣ್ಣ ಹಳ್ಳಿಯೊಂದರಲ್ಲಿ ಮೇ 18, 1951 ರಂದು ಜನಿಸಿದವರು. ಚಿತ್ತೋರ್ಗಢದ ಸೈನಿಕ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಪಡೆದು ನಂತರದಲ್ಲಿ ಜೈಪುರದ ರಾಜಸ್ಥಾನ ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿಗೆ ಪ್ರವೇಶ ಪಡೆದರು ಮತ್ತು ಭೌತಶಾಸ್ತ್ರದಲ್ಲಿ B.Sc ಪದವಿ ಪಡೆದರು ಮತ್ತು ನಂತರ 1978 ರಲ್ಲಿ ರಾಜಸ್ಥಾನ ವಿಶ್ವವಿದ್ಯಾಲಯದಲ್ಲಿ ಎಲ್ಎಲ್ಬಿ ಕೋರ್ಸ್ ಪಡೆದರು ಮತ್ತು 1979 ರಲ್ಲಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದರು.

ರಾಜಸ್ಥಾನದ ಬಾರ್ ಕೌನ್ಸಿಲ್ ಸದಸ್ಯತ್ವವನ್ನು ಪಡೆಯುವ ಮೂಲಕ ವಕೀಲ ವೃತ್ತಿಯನ್ನು ಆರಂಭಿಸಿದ್ದರು. ಸರ್ವೋಚ್ಚ ನ್ಯಾಯಾಲಯಲ್ಲಿಯೂ ವಕೀಲರಾಗಿ ಸೇವೆ ಸಲ್ಲಿಸಿದ್ದು, ರಾಜಸ್ಥಾನ ಹೈಕೋರ್ಟ್ ಬಾರ್ ಅಸೋಸಿಯೇಷನ್ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. 1989 ರಲ್ಲಿ ಲೋಕಸಭಾ ಕ್ಷೇತ್ರ ಜುಂಜುನುದಿಂದ ಸಂಸದರಾಗಿ ಮತ್ತು 1990 ರಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದರು. 1993 ರಲ್ಲಿ, ಅವರು ಅಜ್ಮೀರ್ ಜಿಲ್ಲೆಯ ರಾಜಸ್ಥಾನದ ಕಿಶನ್ಗಢದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 1993 ರಿಂದ 1998 ರವರೆಗೆ, ಧಂಕರ್ ಕಿಶನ್ಗಢ ಕ್ಷೇತ್ರದಿಂದ ರಾಜಸ್ಥಾನ ವಿಧಾನಸಭೆಯ ಸದಸ್ಯರಾಗಿದ್ದರು. ಅವರು 2003 ರಲ್ಲಿ ಭಾರತೀಯ ಜನತಾ ಪಕ್ಷವನ್ನು ಸೇರ್ಪಡೆಯಾಗಿದ್ದರು. ಜುಲೈ 30, 2019 ರಂದು, ಧಂಕರ್ ಅವರನ್ನು ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ನೇಮಿಸಲಾಯಿತು. ಈ ಹುದ್ದೆಯನ್ನು ಅವರು ಜುಲೈ 17, 2022 ರವರೆಗೆ ಹೊಂದಿದ್ದರು.

ಜಗದೀಪ್‌ ದಂಕರ್‌ ಅವರು ಎನ್‌ಡಿಎ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಧುಮುಕಿದ್ದರು. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಂದ ತೆರವಾಗಲಿರುವ ಉಪರಾಷ್ಟ್ರಪತಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ದಂಕರ್‌ ಅವರು ವಿರೋಧ ಪಕ್ಷದ ಅಭ್ಯರ್ಥಿಯಾಗಿರುವ ಮಾರ್ಗರೇಟ್‌ ಆಳ್ವ ಅವರ ವಿರುದ್ದ ಭರ್ಜರಿ ಗೆಲುವು ಸಾಧಿಸಿದ್ದಾರೆ. 725 ಸಂಸದರು ಮತ ಚಲಾಯಿಸಿದ್ದು, 50ಕ್ಕೂ ಹೆಚ್ಚು ಅಭ್ಯರ್ಥಿಗಳು ಮತದಾನ ಮಾಡಿಲ್ಲ.

780 ಸಂಸದರ ಪೈಕಿ 725 ಮಂದಿ ಮತ ಚಲಾಯಿಸಿದ್ದರು. ಈ ಪೈಕಿ 528 ಮತಗಳನ್ನು ಪಡೆಯುವ ಮೂಲಕ ಧಂಕರ್ ಪ್ರಚಂಡ ಬಹುಮತದೊಂದಿಗೆ ಜಯಗಳಿಸಿದ್ದಾರೆ. ಚುನಾವಣೆಯಲ್ಲಿ 725 ಸಂಸದರು ತಮ್ಮ ಮತಗಳನ್ನು ಚಲಾಯಿಸಿದ್ದು, ಉಪರಾಷ್ಟ್ರಪತಿ ಚುನಾವಣೆಯಲ್ಲಿ ಶೇ.92.9 ರಷ್ಟು ಮತದಾನವಾಗಿದೆ. ಅಲ್ಲದೇ 15 ಮತಗಳು ಅಸಿಂಧುವಾಗಿವೆ ಎಂದು ಚುನಾವಣಾಧಿಕಾರಿ ಟಿ.ಕೆ.ವಿಶ್ವನಾಥನ್ ಘೋಷಿಸಿದ್ದಾರೆ.

ಇದನ್ನೂ ಓದಿ : Rahul Dravid Son : ದ್ರಾವಿಡ್ ಹೆಮ್ಮೆಯಿಂದ ಆಡಿದ್ದು BUCC ಕ್ಲಬ್‌ಗೆ ; ಮಗನಿಗೇಕೆ ವಲ್ಟರ್ಸ್ ಕ್ಲಬ್ ? ಪುತ್ರನ ಭವಿಷ್ಯಕ್ಕಾಗಿ ಈ ಅಚ್ಚರಿಯ ನಿರ್ಧಾರ

ಇದನ್ನೂ ಓದಿ : Vice-Presidential Poll : ಭಾರತದ 16ನೇ ಉಪ ರಾಷ್ಟ್ರಪತಿಯಾಗಿ ಜಗದೀಪ್​ ಧನಕರ್​ ಆಯ್ಕೆ

Advocate to Vice President Do you know the background of Jagdeep Dhankhar

Comments are closed.