Dalit Girl Tortured :ದಲಿತ ಅಪ್ರಾಪ್ತ ಬಾಲಕಿಯ ಮೇಲೆ ವ್ಯಕ್ತಿಯೊಬ್ಬ ನಿರ್ದಾಕ್ಷಿಣ್ಯವಾಗಿ ಹಲ್ಲೆ ನಡೆಸುತ್ತಿರುವ ಆಘಾತಕಾರಿ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಉತ್ತರ ಪ್ರದೇಶದ ಅಮೇಥಿಯಲ್ಲಿ ಈ ಬೆಚ್ಚಿ ಬೀಳಿಸುವ ಘಟನೆಯೊಂದು ವರದಿಯಾಗಿದೆ.
ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಹದಿಹರೆಯದ ಬಾಲಕಿಯನ್ನು ನೆಲದ ಮೇಲೆ ಮಲಗಿಸಿ ಪುರುಷನೊಬ್ಬ ಕೋಲಿನಿಂದ ಥಳಿಸಿದ್ದಾನೆ. ವಿಡಿಯೋದಲ್ಲಿ ಒಟ್ಟು ಮೂವರು ಪುರುಷರು ಹಾಗೂ ಮೂವರು ಮಹಿಳೆಯರೂ ಸಹ ಇರೋದನ್ನು ಕಾಣಬಹುದಾಗಿದೆ. ಆಕೆಯನ್ನು ನೆಲೆದ ಮೇಲೆ ಮಲಗಿಸಿದ ದುಷ್ಕರ್ಮಿಗಳು ಅಂಗಾಲಿನ ಮೇಲೆ ಕೋಲಿನಿಂದ ಬಾರಿಸಿದ್ದಾರೆ. ವಿಡಿಯೋದಲ್ಲಿ ಹುಡುಗಿಯ ಮೇಲೆ ಯಾವುದೋ ಕಳ್ಳತನದ ಆರೋಪ ಇರುವಂತೆ ಕಾಣುತ್ತಿದ್ದು ಅಲ್ಲೇ ಇದ್ದ ಮಹಿಳೆಯರು ಆಕೆಯ ಕಳ್ಳತನದ ಬಗ್ಗೆ ಪ್ರಶ್ನೆ ಮಾಡುತ್ತಿರೋದನ್ನು ಕಾಣಬಹುದಾಗಿದೆ.
ಆಕೆಯ ನೋವಿನಿಂದ ಕಿರುಚಿದರೂ, ಅಂಗಾಲಿಗೆ ಹೊಡೆಯದಂತೆ ಕೈ ಅಡ್ಡ ತಂದರೂ ಸಹ ಕ್ಯಾರೇ ಎನ್ನದ ದುಷ್ಕರ್ಮಿಗಳು ಆಕೆಗೆ ನಿರಂತರವಾಗಿ ಕೋಲಿನಿಂದ ಬಾರಿಸಿದ್ದಾರೆ. ಆಕೆಗೆ ಥಳಿಸಿದ್ದು ಮಾತ್ರವಲ್ಲದೇ ಕೂದಲನ್ನು ಹಿಡಿದು ಎಳೆದಾಡುತ್ತಿರೋದನ್ನು ಕಾಣಬಹುದಾಗಿದೆ .
अमेठी में दलित बच्ची को निर्ममता से पीटने वाली ये घटना निंदनीय है। @myogiadityanath जी आपके राज में हर रोज दलितों के खिलाफ औसतन 34 अपराध की घटनाएं होती हैं, और 135 महिलाओं के ख़िलाफ़, फिर भी आपकी कानून व्यवस्था सो रही है।…1/2 pic.twitter.com/mv1muAMxkr
— Priyanka Gandhi Vadra (@priyankagandhi) December 29, 2021
ಈ ವಿಡಿಯೋವನ್ನು ಪ್ರಿಯಾಂಕಾ ಗಾಂಧಿ ವಾದ್ರಾ ಶೇರ್ ಮಾಡಿದ್ದು ಅಮೇಥಿಯಲ್ಲಿ ದಲಿತ ಬಾಲಕಿಯ ಮೇಲೆ ಹಲ್ಲೆ ನಡೆಸುತ್ತಿರೋದು ಖಂಡನೀಯವಾಗಿದೆ.ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರೇ, ನಿಮ್ಮ ರಾಜ್ಯದಲ್ಲಿ ದಲಿತರ ಮೇಲೆ ಪ್ರತಿನಿತ್ಯ ದಬ್ಬಾಳಿಕೆ ನಡೆಯುತ್ತಿದೆ.ಆದರೂ ಸಹ ನಿಮ್ಮ ಕಾನೂನು ಕಣ್ಮುಚ್ಚಿ ಮಲಗಿದೆ ಎಂದು ಟ್ವೀಟಾಯಿಸಿದ್ದಾರೆ.
थानाक्षेत्र अमेठी के कस्बा अमेठी में नाबालिक लड़की को मारने पीटने वाले अभियुक्त की गिरफ्तारी के संबंध में क्षेत्राधिकारी अमेठी श्री अर्पित कपूर द्वारा दी गई बाइट pic.twitter.com/g2QhNovgxA
— AMETHI POLICE (@amethipolice) December 28, 2021
ಅಮೇಥಿ ಪೊಲೀಸ್ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸರ್ಕಲ್ ಆಫೀಸರ್ ಅರ್ಪಿತ್ ಕಪೂರ್ ಹೇಳಿಕೆ ನೀಡಿದ್ದು, ಆರೋಪಿಗಳ ವಿರುದ್ಧ ಪೊಸ್ಕೋ ಕಾಯ್ದೆ, ಎಸ್ಎಸ್ಟಿ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಹಾಗೂ ಪ್ರಕರಣ ಸಂಬಂಧ ನಮನ್ ಸೋನಿ ಎಂಬಾತನನ್ನು ಬಂಧಿಸಲಾಗಿದೆ ಮತ್ತು ಈತ ನೀಡಿರುವ ಹೇಳಿಕೆ ಆಧರಿಸಿ ಇನ್ನಿತರ ಆರೋಪಿಗಳನ್ನೂ ಬಂಧಿಸೋದಾಗಿ ಹೇಳಿದ್ದಾರೆ.
ಕೇಂದ್ರ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಸ್ಮೃತಿ ಇರಾನಿ ಕೂಡ ಈ ವಿಚಾರವಾಗಿ ಕಿಡಿಕಾರಿದ್ದಾರೆ ಎನ್ನಲಾಗಿದೆ.
Video: Dalit Girl Tortured By A Family, Accused Of Theft In Amethi Shocker
ಇದನ್ನು ಓದಿ :KGF Yash New Project : ಕೆಜಿಎಫ್ 2 ನಂತರ ಯಶ್ ಏನು ಮಾಡ್ತಾರೆ ?
ಇದನ್ನೂ ಓದಿ : Surya Namaskar Yoga : ಪಿಯು ಕಾಲೇಜಿನಲ್ಲಿ ಸೂರ್ಯನಮಸ್ಕಾರ ಯೋಗಾಭ್ಯಾಸ: ಕೇಂದ್ರ ಶಿಕ್ಷಣ ಸಚಿವಾಲಯದ ಆದೇಶ