Bachpan Ka Pyaar : ಅಪಘಾತಕ್ಕೊಳಗಾದ ಬಚ್​​ಪನ್​​ ಕಾ ಪ್ಯಾರ್​ ಖ್ಯಾತಿಯ ಬಾಲಕನ ಸ್ಥಿತಿ ಗಂಭೀರ

Bachpan Ka Pyaar : ಜಾನೆ ಮೇರೆ ಜಾನೇಮನ್​ ಬಚ್​ಪನ್​ ಕಾ ಪ್ಯಾರ್​ ಮೇರಾ ಬೂಲ್​ ನಹಿ ಜಾನಾ ರೇ ಎಂದು ಬಾಲಕನೊಬ್ಬ ಹಾಡುತ್ತಿರುವ ಹಾಡೊಂದು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಈ ಹಾಡು ಎಷ್ಟರ ಮಟ್ಟಿಗೆ ಜನಪ್ರಿಯತೆ ಗಳಿಸಿತ್ತು ಅಂದರೆ ಈ ಹಾಡನ್ನು ಹಾಡಿದ್ದ ಬಾಲಕ ರಾತ್ರೋರಾತ್ರಿ ಫೇಮಸ್​ ಆಗಿದ್ದ. ಬಳಿಕ ಬಾಲಿವುಡ್​​ ಖ್ಯಾತ ರ್ಯಾಪರ್​​ ಬಾದ್​ಶಾ ಈ ಹಾಡನ್ನು ಹಾಗೂ ಬಾಲಕನನ್ನೇ ಬಳಸಿ ಆಲ್ಬಂ ಸಾಂಗ್​ ಒಂದನ್ನು ರಿಲೀಸ್​ ಮಾಡಿದ್ದರು.

ಒಂದೇ ಒಂದು ಹಾಡಿನ ಮೂಲಕ ಇಷ್ಟೊಂದು ಖ್ಯಾತಿಯನ್ನು ಗಳಿಸಿದ್ದ ಪುಟ್ಟ ಬಾಲಕ ಸಹದೇವ್​ ದಿರ್ಡೋ ಮಂಗಳವಾರ ರಸ್ತೆ ಅಪಘಾತಕ್ಕೆ ಒಳಗಾಗಿದ್ದಾನೆ. ಛತ್ತೀಸಗಢ ಸುಕ್ಮಾ ಜಿಲ್ಲೆಯಲ್ಲಿ ತನ್ನ ತಂದೆಯೊಂದಿಗೆ ಮೋಟಾರ್​ ಬೈಕ್​​ನಲ್ಲಿ ತೆರಳುತ್ತಿದ್ದ ವೇಳೆಯಲ್ಲಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ತಂದೆಯೊಂದಿಗೆ ತನ್ನ ಗ್ರಾಮಕ್ಕೆ ತೆರಳುತ್ತಿದ್ದ ವೇಳೆಯಲ್ಲಿ ಈ ಅವಘಡ ಸಂಭವಿಸಿದ್ದು ಬಾಲಕ ಸಹದೇವ್​ ಬೈಕ್​ನಿಂದ ಕೆಳಗೆ ಬಿದ್ದ ಪರಿಣಾಮ ಆತನ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು ತೀವ್ರವಾದ ರಕ್ತಸ್ರಾವ ಉಂಟಾಗಿದೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಹದೇವ್​ನನ್ನು ಹತ್ತಿರದ ಜಿಲ್ಲಾಸ್ಪತ್ರೆಗೆ ಮೊದಲು ದಾಖಲು ಮಾಡಲಾಗಿತ್ತು. ಇಲ್ಲಿ ಆತನಿಗೆ ಪ್ರಥಮ ಚಿಕಿತ್ಸೆಯನ್ನು ನೀಡಲಾಗಿತ್ತು. ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾಸ್ಪತ್ರೆಗೆ ಜಿಲ್ಲಾಧಿಕಾರಿ ವಿನೀತ್​ ನಂದಾನ್ವರ್​, ಎಸ್ಪಿ ಸುನೀಲ್​ ಶರ್ಮಾ ಹಾಗೂ ಎಎಸ್ಪಿ ಚಾಂಡೇಲಾ ಧಾವಿಸಿದ್ದಾರೆ.ಆಸ್ಪತ್ರೆಯಲ್ಲಿ ವೈದ್ಯರಿಂದ ಸಹದೇವ್​ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ವೈದ್ಯರ ಸಲಹೆ ಹಿನ್ನೆಲೆಯಲ್ಲಿ ಸಹದೇವ್​ನನ್ನು ಜಗ್ದಾಲುಪುರದ ನ್ಯೂರಾಲಜಿಸ್ಟ್​ ಬಳಿ ಕರೆದೊಯ್ಯಲು ನಿರ್ಧರಿಸಲಾಗಿದೆ.

ಕೂಡಲೇ ಸಹದೇವ್​ನ್ನು ಜಗ್ದಾಲ್ಪುರದ ಮೆಡಿಕಲ್​ ಕಾಲೇಜಿಗೆ ದಾಖಲು ಮಾಡಲಾಗಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ. ಸಹದೇವ್​ ತಲೆಗೆ ಬಲವಾದ ಪೆಟ್ಟು ಬಿದ್ದಿರೋದ್ರಿಂದ ಆತನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಇದನ್ನು ಓದಿ : Corona Vaccine to Children : ಮಕ್ಕಳಿಗೂ ಸಿಗಲಿದೆ ಲಸಿಕೆ: ವಾಕ್ಸಿನ್ ನೀಡಲು ಬಿಬಿಎಂಪಿ ಮಾಸ್ಟರ್ ಪ್ಲ್ಯಾನ್

ಇದನ್ನೂ ಓದಿ : KGF Yash New Project : ಕೆಜಿಎಫ್ 2 ನಂತರ ಯಶ್ ಏನು ಮಾಡ್ತಾರೆ ?

Bachpan Ka Pyaar Fame Sahdev Dirdo Injured in Road Accident; Critical

Comments are closed.