delhi : ಮಕ್ಕಳು ಹೋಮ್ ವರ್ಕ್ ಮಾಡಿಲ್ಲ ಎಂದರೆ ಪೋಷಕರು ಶಿಕ್ಷೆ ನೀಡುವುದು ಸಾಮಾನ್ಯ. ಆದರೆ ಈ ಶಿಕ್ಷೆಯು ಮಕ್ಕಳ ಜೀವದ ಜೊತೆ ಚೆಲ್ಲಾಟ ಆಡುವಂತತೆ ಇರಬಾರದು. ದೆಹಲಿಯ ಖಜೂರಿ ಖಾಸ್ ಎಂಬ ಪ್ರದೇಶದಲ್ಲಿ ತಾಯಿಯೊಬ್ಬಳು ತನ್ನ ಮಗು ಹೋಮ್ ವರ್ಕ್ ಮಾಡಿಲ್ಲವೆಂದು 5 ವರ್ಷದ ಬಾಲಕಿಯ ಕೈ ಕಾಲು ಕಟ್ಟಿ ಸುಡು ಬಿಸಿಲಿನಲ್ಲಿ ಮಲಗಿಸಿದ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಜೂನ್ 2ರಂದು ಈ ಘಟನೆ ನಡೆದಿದ್ದು ಇದರ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದಂತೆಯೇ ವ್ಯಾಪಕ ವಿರೋಧ ವ್ಯಕ್ತವಾಗಿದೆ.
5 ವರ್ಷದ ಬಾಲಕಿ ಹೋಮ್ ವರ್ಕ್ ಮಾಡಿರಲಿಲ್ಲ.ಇದರಿಂದ ಕೋಪಗೊಂಡಿದ್ದ ತಾಯಿಯು ಮಗುವಿನ ಕೈ ಕಾಲನ್ನು ಕಟ್ಟಿದ್ದಾಳೆ. ಬಳಿಕ ಆಕೆಯನ್ನು ಮನೆಯ ಟೆರಾಸಿನಲ್ಲಿ ಅಂಗಾತ ಮಲಗಿಸಿದ್ದಾಳೆ. ದೆಹಲಿಯ ಬಿಸಿಲಿನ ಧಗೆ ತಾಳಲಾರದೇ ಮಗು ಜೋರಾಗಿ ಅಳಲು ಆರಂಭಿಸಿದೆ. ಯಾರೋ ಒಬ್ಬರು ಈ ವಿಡಿಯೋ ಚಿತ್ರಿಕರಿಸಿದ್ದು ಸೋಶಿಯಲ್ ಮೀಡಿಯಾಗಳಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಈ ಕೃತ್ಯ ಎಸಗಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
Delhi: 5-year-old left tied on rooftop under scorching sun for not doing homework; police initiate legal action
— ANI Digital (@ani_digital) June 8, 2022
Read @ANI Story | https://t.co/xr3Yko2VXb#Delhi #Viral pic.twitter.com/PE7Eo8WBe3
ಸೋಶಿಯಲ್ ಮೀಡಿಯಾಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಅಲರ್ಟ್ ಆದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ತಾಯಿಯು ಮಗುವಿಗೆ ಈ ಶಿಕ್ಷೆಯನ್ನು ನೀಡಿದ್ದಾರೆ. ಬಿಸಿಲಿನ ಧಗೆ ತಾಳಲಾರದೇ ಮಗು ಅಳುತ್ತಾ ಮಲಗಿದ್ದಾಗ ಪಕ್ಕದ ಮನೆಯವರು ಈ ವಿಡಿಯೋ ಚಿತ್ರಿಕರಿಸಿದ್ದಾರೆ. ಬಾಲಕಿಯ ಮನೆಯನ್ನು ಪತ್ತೆ ಮಾಡುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಈ ಪ್ರಕರಣ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ : ಕನ್ನಡಿಗ ಕೆ.ಎಲ್ ರಾಹುಲ್‌ಗೆ ಇದೆಂಥಾ ದೌರ್ಭಾಗ್ಯ..? ದಕ್ಷಿಣ ಆಫ್ರಿಕಾ ಸರಣಿಯಿಂದ ಔಟ್
ಇದನ್ನೂ ಓದಿ : 6 ಎಸೆತ 6 ಸಿಕ್ಸ್ : 15 ವರ್ಷದ ಕ್ರಿಕೆಟಿಗನ ವಿಶಿಷ್ಟ ಸಾಧನೆ : ಯುವರಾಜ್ ಸಿಂಗ್ ದಾಖಲೆ ಸರಿಗಟ್ಟಿದ ಕೃಷ್ಣ ಪಾಂಡೆ
video of five year old with hands and legs tied on terrace in delhi heat surfaces netizens demand