Hartal in Kerala: ಹರ್ತಾಲ್‌ ವೇಳೆಯಲ್ಲಿ ಕೇರಳದಲ್ಲಿ ಪಿಎಫ್‌ಐ ನಿಂದ ಹಿಂಸತ್ಮಾಕ ದಾಳಿ

ತಿರುವನಂತಪುರ :(Hartal in Kerala)ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (PFI) ಶುಕ್ರವಾರದ ಹರ್ತಾಲ್‌ನ ನಡುವೆ ರಾಜ್ಯದ ಹಲವು ಕಡೆಗಳಲ್ಲಿ ವಿದ್ವಂಸಕ ಕೃತ್ಯವನ್ನು ಎಸಗುತ್ತಿದ್ದು, ಹಿಂಸಾಚಾರಕ್ಕೆ ಮುಂದಾಗುತ್ತಿದ್ದಾರೆ. ಕೊಲ್ಲಂ, ಕೋಝಿಕ್ಕೋಡ್‌, ತಿರುವನಂತಪುರಂ, ವಯನಾಡ್‌ ಮತ್ತು ಅಲಪ್ಪುಳ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಲಾಗುತ್ತಿದೆ. ಅದು ಅಲ್ಲದೇ ಅಲ್ಲಿನ ಇಬ್ಬರು ನಾಗರಿಕ ಪೊಲೀಸ್‌ ಅಧಿಕಾರಿಗಳ ಮೇಲೆ ಪಿಎಫ್‌ಐ ಪ್ರತಿಭಟನಾಕರರು ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

(Hartal in Kerala)ಹಿಂಸಾತ್ಮಕ ಘಟನೆಗಳಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ. ಕೆಎಸ್‌ಆರ್‌ಟಿಸಿಯ ಕೆಲವು ಸಿಬ್ಬಂದಿಗಳ ಮೇಲೆ ದಾಳಿ ನಡೆಸಿದ್ದರಿಂದ ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ಖಾಸಗಿ ವಾಹನ ಸವಾರರ ಮೇಲೂ ಹಲ್ಲೆ ನಡೆಸಲಾಗಿದೆ. ಜೊತೆಗೆ ಅಂತರಾಷ್ಟ್ರೀಯ ವಿಮಾನ ಪ್ರಯಾಣಿಕರ ಕಾರುಗಳನ್ನು ಅಟ್ಟಗಟ್ಟಲಾಗಿದೆ. ಪಿಎಫ್‌ಐ ರಾಜ್ಯಾದ್ಯಂತ ಹರತಾಳಕ್ಕೆ ಕರೆ ನೀಡಿದ ನಂತರ ಕೇರಳದ ಪೊಲೀಸರು ರಾಜ್ಯದಾದ್ಯಂತ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಅಲ್ಲದೇ ಕಾನೂನು ಮತ್ತು ಸುವ್ಯವಸ್ಥೆಯನ್ನು ಹೆಚ್ಚಿಸುವ ಸಲುವಾಗಿ ಜಿಲ್ಲಾ ಪೊಲೀಸ್‌ ಮುಖ್ಯಸ್ಥರಿಗೆ ನಿರ್ದೇಶನ ನೀಡಿದ್ದಾರೆ. ಎನ್‌ಐಎ ಅಧಿಕಾರಿಗಳು ಪಿಎಫ್‌ಐ ಕಚೇರಿಗಳ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಹರತಾಳಕ್ಕೆ ಕರೆ ನೀಡಲಾಗಿದೆ. ಹರತಾಳದ ವೇಳೆಯಲ್ಲಿ ಕಾನೂನು ಉಲ್ಲಂಘಿಸುವವರ ವಿರುದ್ದ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸ್‌ ಇಲಾಖೆ ತಿಳಿಸಿದೆ.

ಹರತಾಳಕ್ಕೆ ಕರೆ ನೀಡಿದ್ದರೂ ಕೂಡ ಕೇರಳದಲ್ಲಿ ಕೆಎಸ್‌ಆರ್‌ಟಿಸಿ ಎಂದಿನಂತೆ ಕಾರ್ಯನಿರ್ವಹಿಸುತ್ತದೆ. ಅಗತ್ಯವಿದ್ದರೆ ರೈಲು ನಿಲ್ದಾಣಗಳು,ಆಸ್ಪತ್ರೆಗಳು ಮತ್ತು ವಿಮಾನ ನಿಲ್ದಾಣಗಳಿಗೆ ವಿಶೇಷ ಸೇವೆಗಳನ್ನು ವ್ಯವಸ್ಥೆಗೊಳಿಸಲಾಗುತ್ತದೆ. ತುರ್ತು ಸಮಯದಲ್ಲಿ ಜನರು ಪೊಲೀಸ್‌ ರಕ್ಷಣೆಯನ್ನು ಪಡೆಯಬಹುದಾಗಿ ಎಂದು ತಿಳಿಸಲಾಗಿದೆ.

ಇದನ್ನೂ ಓದಿ : ಎನ್ಐ‌ಎ ದಾಳಿ ಮತ್ತು ಬಂಧನ ತಡವಾಯಿತು: ಪ್ರಮೋದ್ ಮುತಾಲಿಕ್

ಇದನ್ನೂ ಓದಿ : ಎನ್ ಐಎಯಿಂದ ಬಂಧನಕ್ಕೊಳಗಾದ ಪಿಎಫ್ಐ ನಾಯಕರನ್ನು 24 ಗಂಟೆಯೊಳಗೆ ಬಿಡದಿದ್ದರೆ ಉಗ್ರ ಹೋರಾಟ

ಇದನ್ನೂ ಓದಿ : ಕಾಂಗ್ರೆಸ್ ನಿಂದ PAYTM ಅಧಿಕೃತ ಟ್ರೇಡ್ ಮಾರ್ಕ್ ಉಲ್ಲಂಘನೆ ?

ಇದನ್ನೂ ಓದಿ : ಮಂಗಳೂರು ಸೇರಿದಂತೆ ದೇಶಾದ್ಯಂಥ NIA ಮೆಗಾ ರೇಡ್

ಕೇರಳದಲ್ಲಿ ಒಟ್ಟಿ ಪಿಎಫ್‌ಐನ ಒಟ್ಟು 22 ಮಂದಿಯನ್ನು ಬಂಧಿಸಲಾಗಿದೆ. ಪಿಎಫ್‌ಐನ ರಾಜ್ಯಾಧ್ಯಕ್ಷ ಸಿಪಿ ಮಹಮ್ಮದ್‌ ಬಶೀರ್‌, ರಾಷ್ಟ್ರೀಯ ಅಧ್ಯಕ್ಷ ಓಎಂಎ ಸಲಾಂ, ರಾಷ್ಟ್ರೀಯ ಕಾರ್ಯದರ್ಶಿ ನಸರುದ್ದೀನ್‌ ಎಳಮರಮ್‌, ಮಾಜಿ ಅಧ್ಯಕ್ಷ ಇ ಅಬೂಬಕ್ಕರ್‌ ಸೇರಿದಂತೆ ಹಲವರು ಬಂಧನಕ್ಕೆ ಒಳಗಾಗಿದ್ದಾರೆ. ಸಂಜೆಯ ವರೆಗೂ ಕೇರಳದಲ್ಲಿ ಹರತಾಳ ಮುಂದುವರಿಯಲಿದೆ.

Violent attack by PFI in Kerala during hartal

Comments are closed.