Hindu Muslims :ಕರಾವಳಿಯ ಈ ಪ್ರದೇಶದಲ್ಲಿ ಹಿಂದೂ ಮುಸ್ಲಿಂರು ಒಟ್ಟು ಸೇರಿ ಅದ್ದೂರಿಯಾಗಿ ಆಚರಿಸುತ್ತಾರೆ ಉರುಸ್

ಮಂಗಳೂರು : Hindu Muslims : ರಾಜ್ಯ ಕರಾವಳಿಯಲ್ಲಿ ಕೋಮು ಸಂಘರ್ಷ ಘಟನೆಗಳು ಈ ಹಿಂದಿನಿಂದಲೂ ನಡೆಯುತ್ತ ಬಂದಿದೆ‌. ಒಂದಲ್ಲ‌ ಒಂದು ವಿಚಾರದಲ್ಲಿ ಇಲ್ಲಿ ಕೋಮು ಸಂಘರ್ಷ ಇರುತ್ತದೆ.‌‌‌ ಆದ್ರೆ ಕೋಮು‌‌‌ ಸಂಘರ್ಷದ ಜೊತೆಗೆ ಕೋಮು‌ ಸೌಹಾರ್ದತೆಯನ್ನು ಬೆಸೆಯುವ ಘಟನೆಗಳು ಇಲ್ಲಿ ನಡೆಯುತ್ತಿರುತ್ತದೆ. ಆದ್ರೆ ಕೋಮು‌ಸಂಘರ್ಷದ ಸುದ್ದಿ ಜನರನ್ನು‌ ತಲುಪಿಸಿದಷ್ಟು ಈ ಸೌಹಾರ್ದತೆ ಬೆಸೆದ ಸುದ್ದಿ ತಲುಪುವುದಿಲ್ಲ. ಇದೀಗ ಕೋಮು ಸೌಹಾರ್ದತೆಗೆ ಕೊರತೆ ಇಲ್ಲ ಅನ್ನೋದಕ್ಕೆ ಉಡುಪಿ ಜಿಲ್ಲೆಯ ಕಾಪುವಿನ ಕೈಪುಂಜಾಲು ಎಂಬಲ್ಲಿ ಹಿಂದೂ ಮುಸ್ಲಿಮರು ಒಟ್ಟಾಗಿ ನಡೆಸುವ ಉರುಸ್ ಆಚರಣೆಯೇ ಸಾಕ್ಷಿಯಾಗಿದೆ.

ಕರಾವಳಿಯಲ್ಲಿ ಅರಬ್ಬೀ ಸಮುದ್ರ ತಟದ ತೆಂಗಿನ ತೋಟದ ನಡುವೆ ಇರುವ ಸಯ್ಯದ್ ಅರಬಿ ವಲಿಯುಲ್ಲಾ ದರ್ಗಾ ಕೈಂಪುಜಾಲು ಈ ಸ್ಥಳವೇ ಸೌಹಾರ್ದತೆಗೆ ಸಾಕ್ಷಿಯಾಗಿರುವ ಪ್ರದೇಶ. ವಿಶೇಷ ಅಂದ್ರೆ ಈ ದರ್ಗಾವನ್ನು ನಿರ್ಮಾಣ ಮಾಡಿದ್ದು ಹಿಂದೂಗಳು. ಪ್ರತಿದಿನ ದರ್ಗಾ ಗುಡಿಸಿ ಒರೆಸಿ ಸ್ವಚ್ಛ ಮಾಡಿ ದೀಪ ಇಡುವವರು ಕೂಡ ನೆರೆ ಮನೆಯ ಹಿಂದೂ ಸಮುದಾಯಕ್ಕೆ ಸೇರಿದವರೇ.

ಇಷ್ಟು ಮಾತ್ರವಲ್ಲದೇ ಇದು ಇರೋದು ಕೂಡ ಹಿಂದೂ ಸಮುದಾಯಕ್ಕೆ ಸೇರಿದವರೊಬ್ಬರ ಸ್ಥಳದಲ್ಲೇ. ಪ್ರತಿವರ್ಷ ಇಲ್ಲಿ ಅದ್ದೂರಿ ಉರುಸು ಉತ್ಸವ ನಡೆಸಲಾಗುತ್ತೆ, ಹಿಂದೂ ಮುಸ್ಲಿಮರು ಅಂತ ಭೇದ ಭಾವ ಇಲ್ಲದೇ ಸಾವಿರಾರು ಮಂದಿ ಸೇರ್ತಾರೆ. ದರ್ಗಾದಲ್ಲಿ ಕಾಣಿಕೆ ಸಲ್ಲಿಸಿ ಪ್ರಸಾದವನ್ನು ಮನೆಗೆ ಕೊಂಡು ಹೋಗುತ್ತಾರೆ. ಕಳೆದ ಎರಡು ವರ್ಷಗಳಲ್ಲಿ ಕೊರೊನಾ ಕಾರಣದಿಂದ ಅದ್ದೂರಿ ಉರುಸ್‌ಗೆ ಕಡಿವಾಣ ಹಾಕಲಾಗಿತ್ತು. ಈ ವರ್ಷ ಹಿಂದೂ ಮುಸ್ಲಿಮರು ಒಟ್ಟಾಗಿ ಅದ್ದೂರಿ ಉರುಸ್ ಆಚರಣೆ ಮಾಡಿದ್ದಾರೆ. ಸಾಮರಸ್ಯ ಮೆರೆದಿದ್ದಾರೆ.

ಇತ್ತಿಚೇಗಷ್ಟೆ ರಾಜ್ಯಾದ್ಯಂತ ಹಲಾಲ್ ಜಟ್ಕಾ ಕಟ್ ವಿವಾದ, ವ್ಯಾಪಾರ ಬಹಿಷ್ಕಾರ ಸಾಕಷ್ಟು ಸುದ್ದಿಯಾಗಿತ್ತು. ಒಂದು ಕೋಮಿನವರು ಇನ್ನೊಂದು ಕೋಮಿನವರ ಜೊತೆ ವ್ಯಾಪಾರ ವಹಿವಾಟು ನಡೆಸಬಾರದು ಎಂಬ ಅಭಿಯಾನಗಳು ಸಹ ಶುರುವಾಗಿದ್ದವು. ಆದ್ರೆ ಈ ರೀತಿಯ ವಿವಾದಗಳು ಇಲ್ಲಿನ ಊರುಸು ಗೆ ಅಡ್ಡಿಯಾಗಿಲ್ಲ. ಇಲ್ಲಿನ ಜನರ ಸೌಹಾರ್ದತೆಗೆ ಧಕ್ಕೆಯನ್ನು ತಂದೊಡ್ಡಿಲ್ಲ. ದರ್ಗಾಕ್ಕೆ ಕಾಣಿಕೆ ಸಲ್ಲಿಸಿ ಪ್ರಸಾದವನ್ನು ಮನೆಗೆ ತೆಗೆದುಕೊಂಡು ಹೋಗುವವರ ಸಂಖ್ಯೆಯು ಕಡಿಮೆಯಾಗಿಲ್ಲ‌. ಒಟ್ಟಿನಲ್ಲಿ ಈ ಕರಾವಳಿಯಲ್ಲಿ ಅದೆಷ್ಟೇ ಕೋಮು ಸಂಘರ್ಷಗಳು ನಡೆದರೂ ಸಹ ಕೋಮು ಸೌಹಾರ್ದತೆಗೆ ಕೊರತೆಯಿಲ್ಲ ಎಂಬುದು ಈ ಘಟನೆಯಿಂದ ರುಜುವಾತಾಗಿದೆ.

ಇದನ್ನು ಓದಿ : Special Gift for Virat Kohli: ವಿರಾಟ್ ಕೊಹ್ಲಿಗೆ ವಿಶೇಷ ಉಡುಗೊರೆ ನೀಡಿದ ಪಂಜಾಬ್ ಮಹಿಳೆ ; ಗಿಫ್ಟ್ ನೋಡಿ ಕಿಂಗ್ ಫುಲ್ ಫಿದಾ

ಇದನ್ನೂ ಓದಿ : Savings accounts:ಒಂದಕ್ಕಿಂತ ಹೆಚ್ಚು ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆ ತೆರೆಯಬಹುದೇ ? ಇಲ್ಲಿದೇ ಕಂಪ್ಲೀಟ್‌ ಡಿಟೇಲ್ಸ್‌

In this coastal region, Hindu Muslims gather together and celebrate Urus in a grand manner

Comments are closed.