ಯುದ್ಧ ತಂದ ಫಜೀತಿ : ಪ್ರೀಮಿಯಂ ಪೆಟ್ರೋಲ್ ದರದಲ್ಲಿ ಹಠಾತ್ ಏರಿಕೆ
ಇಂಡಿಯನ್ ಆಯಿಲ್ನ XP95 ಪೆಟ್ರೋಲ್ , ಹಿಂದೂಸ್ತಾನ್ ಪೆಟ್ರೋಲಿಯಂನ ಪವರ್ ಪೆಟ್ರೋಲ್ , ಭಾರತ್ ಪೆಟ್ರೋಲಿಯಂನ ಸ್ಪೀಡ್ ಪೆಟ್ರೋಲ್ ದರಗಳಲ್ಲಿ ಈ ಏರಿಕೆ ಕಂಡುಬಂದಿದೆ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ನೇರ ಪರಿಣಾಮ ಕಚ್ಛಾತೈಲಗಳ ಮೇಲೆ ಬೀರಿದೆ. ಗೃಹಬಳಕೆಯ ಸಿಲಿಂಡರ್ ದರ ಈಗಾಗಲೇ ಏರಿಕೆಗೊಂಡಿದೆ. ಇದೀಗ ಈ ಸಾಲಿಗೆ ಪ್ರೀಮಿಯಂ ಪೆಟ್ರೋಲ್ ಕೂಡ ಸೇರ್ಪಡೆಯಾಗಿದೆ. ದೇಶಾದ್ಯಂತ ಸಾಮಾನ್ಯ ಪೆಟ್ರೋಲ್ ಹಾಗೂ ಡಿಸೇಲ್ ದರದಲ್ಲಿ ಸ್ಥಿರತೆ ಕಾಯ್ದುಕೊಳ್ಳಲಾಗಿದೆಯಾದರೂ ಸಹ ಪ್ರೀಮಿಯಂ ಪೆಟ್ರೋಲ್ ದರ ಪ್ರತಿ ಲೀಟರ್ಗೆ 2.35 ರೂಪಾಯಿ ಹಾಗೂ ಕೈಗಾರಿಕಾ ಡಿಸೇಲ್ ದರದಲ್ಲಿ 22 ರೂಪಾಯಿ ಏರಿಕೆ ಕಂಡುಬಂದಿದೆ.
ಇಂಡಿಯನ್ ಆಯಿಲ್ನ XP95 ಪೆಟ್ರೋಲ್ , ಹಿಂದೂಸ್ತಾನ್ ಪೆಟ್ರೋಲಿಯಂನ ಪವರ್ ಪೆಟ್ರೋಲ್ , ಭಾರತ್ ಪೆಟ್ರೋಲಿಯಂನ ಸ್ಪೀಡ್ ಪೆಟ್ರೋಲ್ ದರಗಳಲ್ಲಿ ಈ ಏರಿಕೆ ಕಂಡುಬಂದಿದೆ.
Also Read: ಭಾರತಕ್ಕೆ ಮತ್ತಷ್ಟು ‘ಗ್ಯಾಸ್ ಸಂಕಷ್ಟ’ : ಕತಾರ್ನ ಪ್ರಮುಖ ನೈಸರ್ಗಿಕ ಅನಿಲ ಘಟಕದ ಮೇಲೆ ಇರಾನ್ ದಾಳಿ
ಇನ್ನೂ ನಿತ್ಯ ಬಳಕೆಯ ಸಾಮಾನ್ಯ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಳಿತ ಕಂಡರೂ, ಜನಸಾಮಾನ್ಯರ ಮೇಲೆ ಹೊರೆಯಾಗದಂತೆ ತೈಲ ಕಂಪನಿಗಳು ಸಾಮಾನ್ಯ ಇಂಧನ ದರವನ್ನು ಸ್ಥಿರವಾಗಿಟ್ಟಿವೆ. ಇದರಿಂದಾಗಿ ಸಾರಿಗೆ ವೆಚ್ಚ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗದೇ ಸ್ಥಿರತೆ ಕಾಯ್ದುಕೊಳ್ಳಲು ಸಾಧ್ಯವಾಗಿದೆ.
War brought problem Sudden increase in premium petrol price



