ಭಾರತಕ್ಕೆ ಮತ್ತಷ್ಟು ‘ಗ್ಯಾಸ್ ಸಂಕಷ್ಟ’ : ಕತಾರ್ನ ಪ್ರಮುಖ ನೈಸರ್ಗಿಕ ಅನಿಲ ಘಟಕದ ಮೇಲೆ ಇರಾನ್ ದಾಳಿ
ಇಡೀ ವಿಶ್ವಕ್ಕೆ 17 ಪ್ರತಿಶತ ಎಲ್ಪಿಜಿ ಅನಿಲ ಪೂರೈಕೆ ಮಾಡುವ ಕತಾರ್ನ ಜಗತ್ತಿನ ಅತೀ ದೊಡ್ಡ ಅನಿಲ ಘಟಕದ ಇರಾನ್ ಕ್ಷಿಪಣಿ ದಾಳಿ ನಡೆಸಿದೆ.
ಅಮೆರಿಕ-ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದಿಂದಾಗಿ ಸಂಪೂರ್ಣ ವಿಶ್ವವೇ ತಲ್ಲಣಿಸಿದೆ. ಭಾರತವಂತೂ ಅಗತ್ಯ ಪ್ರಮಾಣದಲ್ಲಿ ಗ್ಯಾಸ್ ಪೂರೈಕೆ ಮಾಡಲಾಗದೇ ತೀವ್ರ ಸಂಕಷ್ಟದಲ್ಲಿದೆ. ವಾಣಿಜ್ಯ ಸಿಲಿಂಡರ್ ಅವಲಂಬಿಸಿ ನಡೆಯುವ ಎಲ್ಲಾ ಉದ್ಯಮಗಳು ನೆಲಕಚ್ಚುವ ಅಪಾಯದಲ್ಲಿವೆ. ಇಂತಹ ಪರಿಸ್ಥಿತಿಯಲ್ಲಿ ಭಾರತಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ಇಡೀ ವಿಶ್ವಕ್ಕೆ 17 ಪ್ರತಿಶತ ಎಲ್ಪಿಜಿ ಅನಿಲ ಪೂರೈಕೆ ಮಾಡುವ ಕತಾರ್ನ ಜಗತ್ತಿನ ಅತೀ ದೊಡ್ಡ ಅನಿಲ ಘಟಕದ ಇರಾನ್ ಕ್ಷಿಪಣಿ ದಾಳಿ ನಡೆಸಿದೆ.
ಇರಾನ್ನ ಈ ಕ್ಷಿಪಣಿ ದಾಳಿಯಿಂದಾಗಿ ಭಾರತದ ಗ್ಯಾಸ್ ಟ್ರಬಲ್ ಮತ್ತಷ್ಟು ಹೆಚ್ಚಲಿದೆ. ಭಾರತಕ್ಕೆ ಅವಶ್ಯವಿರುವ ನೈಸರ್ಗಿಕ ಅನಿಲ ಶೇಕಡಾ 47ರಷ್ಟು ಕತಾರ್ನಿಂದಲೇ ಪೂರೈಕೆ ಆಗುತ್ತಿತ್ತು. ಇಷ್ಟು ದಿನ ಹಾರ್ಮುಜ್ ಜಲಸಂಧಿಯ ಬಂದ್ನಿಂದಲೇ ಈ ಮಟ್ಟಿಗೆ ಎಫೆಕ್ಟ್ ಅನುಭವಿಸಿದ್ದ ಭಾರತಕ್ಕೆ ಇರಾನ್ನ ಈ ದಾಳಿ ಬಹುದೊಡ್ಡ ಮರ್ಮಾಘಾತವನ್ನೇ ನೀಡಿದೆ. ಈ ಅನಿಲ ಘಟಕ ದುರಸ್ಥಿ ಕಾರ್ಯ ಪೂರ್ಣಗೊಳ್ಳಲು ಕನಿಷ್ಠ 5 ವರ್ಷ ಬೇಕಾಗಲಿದ್ದು. ಅಲ್ಲಿಯವರೆಗೂ ಭಾರತ ನೈಸರ್ಗಿಕ ಅನಿಲ ಪೂರೈಕೆಗೆ ಯಾವ ಮಾರ್ಗ ಕಂಡುಕೊಳ್ಳುತ್ತದೆ ಎಂಬುದೇ ಸದ್ಯದ ಯಕ್ಷಪ್ರಶ್ನೆಯಾಗಿದೆ.
ಯುದ್ಧದಿಂದ ಉಂಟಾಗಿರುವ ಗ್ಯಾಸ್ ಎಮೆರ್ಜೆನ್ಸಿ ಇದೀಗ ಕರ್ನಾಟಕದ ಪ್ರತಿಷ್ಠಿತ ಕೆಎಂಎಫ್ಗೂ ತಟ್ಟಿದೆ. ನಂದಿನಿ ಹಾಲಿನ ಉತ್ಪನ್ನಗಳ ತಯಾರಿಕೆಗೆ ಪ್ರತಿ ತಿಂಗಳು 428 ವಾಣಿಜ್ಯ ಸಿಲಿಂಡರ್ಗಳನ್ನು ಕೆಎಂಎಫ್ ಬಳಕೆ ಮಾಡುತ್ತಿದೆ. ಆದರೆ ಈಗ ಕೆಎಂಎಫ್ನಲ್ಲಿಯೂ ವಾಣಿಜ್ಯ ಸಿಲಿಂಡರ್ನ ಅಭಾವ ಸೃಷ್ಠಿಯಾಗಿದ್ದು ಗ್ಯಾಸ್ ಪೂರೈಕೆಗಾಗಿ ಐಓಸಿ ಮೊರೆ ಹೋಗಿದೆ. ಇಂಡಿಯನ್ ಆಯಿಲ್ಗೆ ಪತ್ರ ಬರೆದಿರುವ ಕೆಎಂಎಫ್ ಹೆಚ್ಚಿನ ವಾಣಿಜ್ಯ ಸಿಲಿಂಡರ್ ಪೂರೈಕೆಗೆ ಮನವಿ ಮಾಡಿದೆ.
Further gas crisis for India Iran attack on Qatars major natural gas plant



