Viral Video : ಮೊಸಳೆ ಬಾಯಿಂದ ಪಾರಾಯ್ತು ಹಸು ವೈರಲ್‌ ಆದ ವಿಡಿಯೋ

ನೀರಿನಲ್ಲಿ ವಾಸಿಸುವ ಮೊಸಳೆಗಳು ಒಂದು ರೀತಿಯ ಆಕ್ರಮಣಕಾರಿ ಸರೀಸೃಪ. (Viral Video)ಮೊಸಳೆಗಳು ಹೆಚ್ಚಾಗಿ ಮೀನು, ಸಣ್ಣ ಸಸ್ತನಿಗಳು, ಪಕ್ಷಿಗಳನ್ನು ತಿಂದು ಬದುಕುತ್ತವೆ. ಆದರೆ ಈಗ ನದಿಯಲ್ಲಿ ನೀರು ಕುಡಿಯುತ್ತಿದ್ದ ಹಸುವಿನ ಮೇಲೆ ಮೊಸಳೆಯೊಂದು ಹೊಂಚುಹಾಕಿ ದಾಳಿ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್ ಆಗಿದೆ.

‘twfeq’ ಬಳಕೆದಾರರು Instagram ನಲ್ಲಿ ಹಂಚಿಕೊಂಡ ಈ ವಿಡಿಯೋ ಸಾವಿರಾರು ಜನರು ವೀಕ್ಷಿಸಿದ್ದು, ವಿಡಿಯೋ ವೈರಲ್ ಆಗಿದೆ. ಹಿಂಬದಿಯಿಂದ ಕಚ್ಚುತ್ತಿದ್ದ ಮೊಸಳೆಯಿಂದ ತಪ್ಪಿಸಿಕೊಳ್ಳಲು ಹಸು ಪ್ರಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಮೊಸಳೆಯು ಹಸುವನ್ನು ಹಿಂದಿನಿಂದ ಬಿಗಿಯಾಗಿ ಹಿಡಿದಿರುತ್ತದೆ. ಮೊಸಳೆಯು ಹಸುವನ್ನು ಗಾಯಗೊಳಿಸಿತು, ಆದರೆ ಅದನ್ನು ನದಿಯ ಕೆಳಗೆ ಎಳೆಕೊಂಡು ಹೋಗಿ ತಿನ್ನುವ ಪ್ರಯತ್ನದಲ್ಲಿ ವಿಫಲವಾಗುತ್ತದೆ. ಹಸು ತನ್ನ ಕೈಲಾದಷ್ಟು ಪ್ರಯತ್ನದಿಂದ ಪ್ರಾಣ ಅಪಾಯದಿಂದ ಪಾರಾಗುವ ಮೂಲಕ ಮೊಸಳೆ ಹಿಡಿತದಿಂದ ಜಾರಿದ ನಂತರ ಅಲ್ಲಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ.

ಇದನ್ನೂ ಓದಿ : Death due to crane collapse : ಕ್ರೇನ್ ಕುಸಿದು ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಸಾವು

ಇದನ್ನೂ ಓದಿ : A terrible accident : ಕಾರು – ಬಸ್ ನಡುವೆ ಭೀಕರ ಅಪಘಾತ  : 11‌ಮಂದಿ ದಾರುಣ ಸಾವು

ಇದನ್ನೂ ಓದಿ : Heart Attack: ಸುಳ್ಯದಲ್ಲಿ 2ನೇ ತರಗತಿ ವಿದ್ಯಾರ್ಥಿಗೆ ಹೃದಯಾಘಾತ: ತಂದೆಯ ಎದುರೇ ಕುಸಿದುಬಿದ್ದ ಬಾಲಕ

ಮೊಸಳೆಗಳು ಹೆಚ್ಚಾಗಿ ಉಷ್ಣವಲಯದಲ್ಲಿ ವಾಸಿಸುವ ದೊಡ್ಡ ಜಲ ಸರಿಸೃಪಗಳಾಗಿರುತ್ತದೆ. ಇವುಗಳು ಬಾಲ್ಯವ್ಯವಸ್ಥೆಯಲ್ಲಿ ನೀರಿನಲ್ಲಿರುವ ಸಹಚರಿಗಳಾದ ಮೀನು ಆಮೆ ಇತ್ಯಾದಿಗಳನ್ನು ತಿಂದು ಬದುಕುತ್ತದೆ. ನಂತರದಲ್ಲಿ ನೀರಿನ ಮೇಲೆ ವಾಸಿಸುವ ಪ್ರಾಣಿಗಳನ್ನು ಬೇಟೆಯಾಡಿ ತಿನ್ನುತ್ತದೆ. ಇವುಗಳು ಶುದ್ಧ ಮಾಂಸಹಾರಿಗಳಾಗಿರುತ್ತದೆ. ಇವು ಹೆಚ್ಚಾಗಿ ಕೊಳೆತ ಪ್ರಾಣಿಗಳನ್ನು ತಿನ್ನುತ್ತವೆ. ಇವುಗಳು ಆಹಾರವಿಲ್ಲದೇ ತುಂಬಾ ಸಮಯದರೆಗೂ ಜೀವಿಸುತ್ತವೆ.

Viral Video : A video of a cow escaping from a crocodile’s mouth went viral

Comments are closed.