NEWS NEXT BIG IMPACT : ಕೊನೆಗೂ ಮೀನುಗಾರರ ಸಾಲಮನ್ನಾ : 60 ಕೋಟಿ ಬಿಡುಗಡೆ ಮಾಡಿದ ರಾಜ್ಯ ಸರಕಾರ

0

ಬೆಂಗಳೂರು : ಕರಾವಳಿ ಭಾಗದ ಮೀನುಗಾರರಿಗೆ ರಾಜ್ಯ ಸರಕಾರ ಗುಡ್ ನ್ಯೂಸ್ ನೀಡಿದೆ. ಕಳೆದ ಬಜೆಟ್ ನಲ್ಲಿ ಘೋಷಣೆಯಾಗಿದ್ದ ಮೀನುಗಾರರ ಸಾಲಮನ್ನಾ ಯೋಜನೆಯ ಹಣವನ್ನು ಹಣಕಾಸು ಇಲಾಖೆ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಹೀಗಾಗಿ ರಾಜ್ಯದ 23,000 ಮೀನುಗಾರರ 60 ಕೋಟಿ ರೂಪಾಯಿ ಸಾಲ ಮನ್ನಾ ಆಗಲಿದೆ.

ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಲೇ ಕರಾವಳಿ ಭಾಗದ ಮೀನುಗಾರರ 50,000 ವರೆಗಿನ ಸಾಲಮನ್ನಾ ಘೋಷಣೆ ಮಾಡಿದ್ದರು.

ಆದರೆ ಘೋಷಣೆಯಾಗಿ ಹಲವು ತಿಂಗಳುಗಳೇ ಕಳೆದರೂ ಕೂಡ ಮೀನುಗಾರರ ಸಾಲಮನ್ನಾದ ಹಣ ಬಿಡುಗಡೆಯಾಗಿರಲಿಲ್ಲ. ಅಲ್ಲದೇ ಬ್ಯಾಂಕುಗಳು ಕೂಡ ಮೀನುಗಾರರಿಂದ ಬಲವಂತವಾಗಿಯೇ ಸಾಲ ವಸೂಲಾತಿಯನ್ನು ಮಾಡಿಕೊಂಡಿದ್ದವು. ಈ ಕುರಿತು NEWS NEXTವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಯಾರೂ ಕೂಡ ಸಾಲ ಮರುಪಾವತಿ ಮಾಡುವುದು ಬೇಡ ಅನ್ನುವ ಹೇಳಿಕೆ ನೀಡಿದ್ದರು. ಅಲ್ಲದೇ 10 ದಿನಗಳ ಒಳಗಾಗಿ ಸಾಲಮನ್ನಾ ಯೋಜನೆಯ ಹಣ ಬಿಡುಗಡೆ ಮಾಡುವುದಾಗಿಯೂ ಭರವಸೆ ನೀಡಿದ್ದರು.

ಇದೀಗ ರಾಜ್ಯ ಹಣಕಾಸು ಇಲಾಖೆ ಅಧಿಕೃತವಾಗಿ 23,000 ಮೀನುಗಾರರ ಸಾಲಮನ್ನಾ ಬಾಪ್ತು 60 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿ ಇಂದು ಅಧಿಕೃತ ಆದೇಶ ಹೊರಡಿಸಿದೆ. ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಮೀನುಗಾರಿಕೆಗೆ ತೆರಳಲು ಸಾಧ್ಯವಾಗದ ಮೀನುಗಾರರಿಗೆ ಇದೀಗ ಸಾಲಮನ್ನಾ ಹಣ ಬಿಡುಗಡೆಯಾಗಿರೋದು ಖುಷಿಯನ್ನು ನೀಡಿದೆ.

Leave A Reply

Your email address will not be published.