ASHA Workers Protest : ಮತ್ತೆ ಬೀದಿಗಿಳಿದ ಆಶಾ ಕಾರ್ಯಕರ್ತೆಯರು : ರಾಜ್ಯ ರಾಜಧಾನಿಯಲ್ಲಿ ಬೃಹತ ಹೋರಾಟ

ಬೆಂಗಳೂರು : ರಾಜ್ಯದಲ್ಲಿ ಈಗಾಗಲೇ ಹಲವು ಭಾರಿ ಮುಷ್ಕರ ನಡೆಸಿ ಶಕ್ತಿ‌ಪ್ರದರ್ಶನ ಮಾಡಿ ಸರ್ಕಾರಕ್ಕೆ ಚುರುಕು ಮುಟ್ಟಿಸಿರುವ ಆಶಾ ಕಾರ್ಯಕರ್ತೆಯರು (ASHA Workers Protest ) ಮತ್ತೊಮ್ಮೆ ಆಕ್ರೋಶಗೊಂಡಿದ್ದು ಈಡೇರದ ಬೇಡಿಕೆಗಳ ಪಟ್ಟಿಯನ್ನು ಮುಂದಿಟ್ಟುಕೊಂಡು ಸರ್ಕಾರಕ್ಕೆ ಚುರುಕು ಮುಟ್ಟಿಸಲು ಮತ್ತೊಮ್ಮೆ ಪ್ರತಿಭಟನೆಗೆ ಮುಂದಾಗಿದ್ದಾರೆ. ಮಂಗಳವಾರದಿಂದ ರಾಜ್ಯ ರಾಜಧಾನಿ ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲಿರುವ ಆಶಾ ಕಾರ್ಯಕರ್ತೆಯರು ತಮ್ಮ ನ್ಯಾಯಯುತ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಮುಂದುವರೆಸಲು ನಿರ್ಧರಿಸಿದ್ದಾರೆ.

ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ AIUTUC ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಗೆ ಕಾರ್ಯಕರ್ತೆಯರು (ASHA Workers) ಸಜ್ಜಾಗಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆಶಾ ಕಾರ್ಯಕರ್ತೆಯರು ಬೆಂಗಳೂರಿಗೆ ದೌಡಾಯಿಸಿದ್ದಾರೆ. ಹಲವು ವರ್ಷಗಳಿಂದ ಈಡೇರದ ಬೇಡಿಕೆಗಳನ್ನು ಕೂಡಲೇ ಬಗೆಹರಿಸುವಂತೆ ಆಗ್ರಹಿಸಿ ಬೀದಿಗಿಳಿದಿರುವ ಆಶಾ ಕಾರ್ಯಕರ್ತೆಯರು ಕಳೆದ ಹದಿನೈದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ಹೆಚ್ಚಾಗಿಲ್ಲ ಎಂಬ ಬೇಡಿಕೆಯನ್ನು ಪ್ರಮುಖವಾಗಿ ಸರ್ಕಾರದ ಮುಂದಿಟ್ಟಿದ್ದಾರೆ. ಮಾತ್ರವಲ್ಲ ಕೋವಿಡ್ ತಡೆಗಟ್ಟುವುದು, ಲಸಿಕೆ ಹಾಕುವಲ್ಲಿ ವಾರಿಯರ್ಸ್ ಆಗಿ 24 ಗಂಟೆ ನಾವು ಕೆಲಸ ಮಾಡಿದ್ದೇವೆ. ಆದ್ರೆ ಕೆಲಸಕ್ಕೆ ತಕ್ಕ ಸಂಬಳ ಮಾತ್ರ ಕೊಡದೆ ಸರ್ಕಾರ ಅನ್ಯಾಯ ಮಾಡಿದೆ. ಪ್ರೋತ್ಸಾಹ ಧನ ರಾಜ್ಯದಿಂದ 5ಸಾವಿರ ಕೇಂದ್ರ ಸರ್ಕಾದಿಂದ 3 ಸಾವಿರ ನಿಗದಿ ಮಾಡಲಾಗಿದೆ. ಆದರೆ ಕೇಂದ್ರ ಸರ್ಕಾರದಿಂದ ಕೇವಲ 650 ಮಾತ್ರ ಕೈಗೆ ಸಿಗ್ತಿದೆ ಎಂದು ಆರೋಪಿಸಿದ್ದಾರೆ.

ಪ್ರೋತ್ಸಾಹ ಧನ ಹಾಗೂ ಗೌರವಧನ ಎರಡನ್ನೂ ಒಗ್ಗೂಡಿಸಿ ಮಾಸಿಕ ವೇತನ ನೀಡ್ಬೇಕು ಎಂಬುದು ನಮ್ಮ ಬೇಡಿಕೆ. ಹಳ್ಳಿ ಹಳ್ಳಿಗೆ ಓಡಾಡಿ ನಾವು ಜನರ ಕಷ್ಟಕ್ಕೆ ಸ್ಪಂದಿಸುತ್ತೇವೆ. ಯಾವುದೇ ಲಸಿಕೆ , ಚುಚ್ಚುಮದ್ದು ವಿತರಣೆಯಿದ್ದರೂ ನಮ್ಮನ್ನೇ ದುಡಿಸಿಕೊಳ್ಳಲಾಗುತ್ತದೆ. ಆದರೆ ಸೌಲಭ್ಯ ನೀಡಲು ಮಾತ್ರ ಸರ್ಕಾರ ಮುಂದೇ ಬರುತ್ತಿಲ್ಲ ಎಂದು ಆಶಾ ಕಾರ್ಯಕರ್ತೆಯರು ತಮ್ಮ ದುಃಖ‌ತೋಡಿಕೊಂಡಿದ್ದಾರೆ.

ಕೇವಲ ಸಂಬಳ‌ ಮತ್ತು ಸೌಲಭ್ಯ ಮಾತ್ರವಲ್ಲ RCH ಪೋರ್ಟಲ್ ಡೇಟಾ ಎಂಟ್ರಿ ಸಮಸ್ಯೆಯನ್ನು ಬಗೆಹರಿಸಿ, ಆಶಾ ಕಾರ್ಯಕರ್ತೆಯರಿಗೆ ಆಗುವ ನಷ್ಟ ತುಂಬಿಕೊಡ್ಬೇಕು
ಆರೋಗ್ಯ ಮತ್ತು ನಿವೃತ್ತಿ ಪರಿಹಾರ ಸೇರಿದಂತೆ ಹಲವು ಸೌಲಭ್ಯಗಳಿಗಾಗಿ ಒತ್ತಾಯಿಸಿ ಬೃಹತ್ ಹೋರಾಟಕ್ಕೆ AIUTUC ಕರೆ ನೀಡಿದೆ. ಈ ಹಿಂದೆಯೂ ಆಶಾ ಕಾರ್ಯಕರ್ತೆಯರು ಹಲವು ಭಾರಿ ಹೋರಾಟ‌ನಡೆಸಿದ್ದರೂ ಅವರ ಸಮಸ್ಯೆ ಪರಿಹಾರವಾಗಿಲ್ಲ. ಈಗ ವಿಧಾನಸಭಾ ಚುನಾವಣೆಯ ಹೊತ್ತಿನಲ್ಲಿ ನಡೆಯುತ್ತಿರೋ ಪ್ರತಿಭಟನೆಗಾದ್ರೂ ಸರ್ಕಾರ ಸ್ಪಂದಿಸುತ್ತಾ ಎಂಬುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ : stole mother jewellery for lover : ಪ್ರಿಯತಮನಿ​ಗಾಗಿ ತಾಯಿಯ ಚಿನ್ನಾಭರಣಗಳನ್ನೇ ಕದ್ದ ಪುತ್ರಿ ಬಂಧನ

ಇದನ್ನೂ ಓದಿ : ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕಾರಣಕ್ಕೆ : ಮತ್ತೆ ಸಚಿವರಾಗ್ತಾರಾ ಸಿ.ಟಿ.ರವಿ

AIUTUC Leadership ASHA Workers Protest in Bangalore

Comments are closed.