Naya Kashmir Opinion: ಕಾಶ್ಮೀರಿ ಪಂಡಿತ ಯುವಕನ ಜೀವನಗಾಥೆ: ‘ 32 ವರ್ಷಗಳ ನಂತರ ತಾಯ್ನಾಡಿಗೆ ಬಂದ ನನಗೆ ಹುಟ್ಟೂರು ಭರವಸೆ ನೀಡಿತು’

ತಮ್ಮ ಜೀವನವನ್ನು ನಿರಾಶ್ರಯದಲ್ಲಿ ನರಳಿದ ಕಾಶ್ಮೀರಿ ಪಂಡಿತರ ಕಥೆಗಳನ್ನು ಕೇಳಿರುತ್ತೇವೆ. ತಮ್ಮ ಹುಟ್ಟೂರಿನಿಂದ ಹೊರದಬ್ಬಲ್ಪಟ್ಟು ಬಹುಕಾಲ ಹೊರಗೇ ಬೆಳೆದು ಕೊನೆಗೂ ಹುಟ್ಟೂರಿಗೆ ಮರಳಿದ ಕಾಶ್ಮಿರಿ ಪಂಡಿತ ಸಮುದಾಯದ ಯುವಕನೋರ್ವನ ಅನುಭವವನ್ನು (Naya Kashmir Opinion) ನಿಮ್ಮ ನ್ಯೂಸ್‌ ನೆಕ್ಸ್ಟ್ ಲೈವ್ ಕನ್ನಡ ಕಟ್ಟಿಕೊಡುತ್ತಿದೆ.

ಜಮ್ಮು ಮತ್ತು ಕಾಶ್ಮೀರ ಎಂಬ ಹೆಸರು ಎಂದೂ ಒಟ್ಟೊಟ್ಟಿಗೆ ಕೂಡಿಕೊಂಡಿರುತ್ತವೆ. ಆದರೆ ಕಾಶ್ಮೀರದ ಮೂಲ ಸಂಸ್ಕೃತಿಗೂ ಜಮ್ಮುವಿನ ಮೂಲ ಸಂಸ್ಕೃತಿಗೂ, ಜನ ಜೀವನಕ್ಕೂ ವ್ಯತ್ಯಾಸಗಳಿವೆ.  ಕಾಶ್ಮೀರದಲ್ಲಿ ಹುಟ್ಟಿ ಬಾಲ್ಯ ಕಳೆದ ಸಾಹಿಲ್ ಟಿಕೂ ಎಂಬ ಯುವಕ ಇತರ ಸಾವಿರಾರು ಪಂಡಿತ ಸಮುದಾಯದ ಎಷ್ಟೋ ಜನರಂತೆ ದೇಶದ ವಿವಿದೆಡೆ ವಾಸ ಮಾಡಬೇಕಾಯಿತು. ಈ ಯುವಕನೂ ತನ್ನದಲ್ಲದ ತಪ್ಪಿಗೆ ಹುಟ್ಟೂರು ಬಿಟ್ಟು ಜಮ್ಮುವಿನಲ್ಲಿ ವಾಸ ಮಾಡಬೇಕಾಯಿತು. ಕಾಶ್ಮೀರಿ ಕಣಿವೆಯಲ್ಲಿ ಪಂಡಿತ ಸಮುದಾತದ ಮೇಲಾದ ಘೋರ ಅನ್ಯಾಯವನ್ನು ಕಂಡರೂ ಉದುರಿದ ಕಣ್ಣಿರಿನ ಹನಿಗಳಿಗಷ್ಟೇ ಸೀಮಿತವಾಗುವಂತಾಯಿತು. ಆನಂತರ ವಿದ್ಯಾಭ್ಯಾಸಕ್ಕೆಂದು ಹರಿಯಾಣ ಮತ್ತು ದೆಹಲಿಗೂ ಸಾಹಿಲ್ ಅವರು ತೆರಳಿದರು. ಇದು ಅವರನ್ನು ಹುಟ್ಟೂರು ಕಾಶ್ಮೀರ ಕಣಿವೆಯಿಂದ ದೂರ ಮಾಡಿತಾದರೂ ಅವರ ಮನದಿಂಗಿತ ಕಾಶ್ಮೀರಕ್ಕೆ ಮರಳುವುದೇ ಆಗಿತ್ತು. ಆದರೆ ಅಲ್ಲಿ ಪರಿಸ್ಥಿತಿ ಸುಧಾರಿಸಬೇಕಲ್ಲ.. ಯಾವುದೇ ಕಾಶ್ಮೀರಿ ಎದುರಾದರು ಬಾಲ್ಯದ ಮಧುರ ಸ್ಮರತಿಗಳನ್ನು ಮೆಲುಕು ಹಾಕುತ್ತಲೇ ಅವರು ಕಾಲಕಳೆಯುತ್ತಿದ್ದರು.

ಕಾಲೇಜು ಮುಗಿಸಿ ಕೆಲಸಕ್ಕೆ ಅಂತ ಸೇರಿ ಯಾವಾಗ ತಮ್ಮ ಕಾಲ ಮೇಲೆ ಅವರು ನಿಂತರೋ ಅಂದು ಕಾಶ್ಮೀರಕ್ಕೆ ಮರಳುವ ತುಡಿತಕ್ಕೆ ರೆಕ್ಕೆ ಬಂತು. 2015ರಿಂದ ಕೆಲಸಕ್ಕೆ ರಜೆ ಸಿಕ್ಕಾಗ ಕಾಶ್ಮೀರಕ್ಕೆ ಆಗಾಗ ಬಂದು ಹೋಗಿ ಮಾಡತೊಡಗಿದರು. ಗೆಳೆಯರನ್ನು ಹೊಸದಾಗಿ ಮಾಡಿಕೊಂಡರು. ಕಣಿವೆಗಳ ಆಳದಲ್ಲಿ ತಿರುಗಿದರು, ಅಲೆದರು, ನೆನಪುಗಳನ್ನು ವಾಸ್ತವದಲ್ಲಿ ಎದುರಿಟ್ಟುಕೊಂಡು ಅನುಭವಿಸಿದರು.

ಪಾಕಿಸ್ತಾನಿ ಪ್ರಾಯೋಜಿತ ಭಯೋತ್ಪಾದನೆ ಕಾಶ್ಮೀರದಿಂದ ತಮ್ಮನ್ನು ಬಹುಕಾಲ ದೂರ ಮಾಡಿತು ಎಂಬುದನ್ನು ಸಾಹಿಲ್ ಟಿಕೂ ಅವರು ಕಂಡುಕೊಂಡರು.  ಕಾಶ್ಮೀರದಲ್ಲಿ ನಡೆಯುವ ಗದ್ದಲಗಳಿಗೆ ಕಾರಣ ಏನು ಎಂಬುದು ಅವರಿಗೆ ಮನದಟ್ಟಾಯಿತು. 320 ಆರ್ಟಿಕಲ್ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದಾಗ ಕಾಶ್ಮೀರದಲ್ಲೇ ಇದ್ದ ಅವರಿಗೆ ಅಲ್ಲಿಂದ ಹೊರಬಿದ್ದು ಬರುವಂತೆ ಕುಟುಂಬದಿಂದ ಬುಲಾವ್ ಬಂತು. ಆದರೆ ತಮ್ಮ ಹುಟ್ಟೂರಿನಿಂದ ಈಗಲೂ ಹೊರಬೀಳುವುದು ಅವರಿಗೆ ಇಷ್ಟವಿರಲಿಲ್ಲ. ಕಾಶ್ಮೀರದ ಕಣಿವೆಗಳು ಹತ್ತಿರಿಯಬಹುದು ಎಂಬ ಆತಂಕದ ನಡುವೆಯೂ ಅವರು ಕಣಿವೆಯಿಂದ ಹೊರಬೀಳಲಿಲ್ಲ. ಮುಂದುವರೆದು ಭಾರತದ ಪರ ಒಲವು ಕಾಶ್ಮೀರ ಕಣಿವೆಯಲ್ಲಿ ಹೆಚ್ಚಿದಂತೆ ಅವರಿಗೆ ಆ ವಾತಾವರಣ ಆಪ್ತವೆನಿಸಿತು. ಉಗ್ರರ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಿ ಮತ್ತೆ ಕಾಶ್ಮೀರವನ್ನು ಸುಸ್ಥಿರವಾಗಿ ಕಟ್ಟುವ ಭರವಸೆಯಂತೂ ನನಗೆ ಮೂಡಿದ ಎನ್ನುತ್ತಾರೆ ಸಾಹಿಲ್ ಟಿಕೂ.  (ಮೂಲ ಬರಹ : ನ್ಯೂಸ್18.ಕಾಮ್)

ಇದನ್ನೂ ಓದಿ: Term Life Insurance Plans: ಟರ್ಮ್ ಇನ್ಶೂರೆನ್ಸ್ ಯೋಜನೆ ಪ್ರಾರಂಭಿಸಲು ನೀವು ತಿಳಿದಿರಬೇಕಾದ ಅತ್ಯಗತ್ಯ ಮಾಹಿತಿಗಳು: ಭಾಗ 3

(Naya Kashmir Opinion Pandit Community youth returned after 32 years to his homeland)

Comments are closed.