Nokia G21 Launched: ನೋಕಿಯಾದ ಹೊಸ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಲಗ್ಗೆ; ವಿಶೇಷತೆ, ಬೆಲೆಯ ವಿವರಗಳು ಇಲ್ಲಿವೆ

ಕಳೆದ ವರ್ಷ ಜೂನ್‌ನಲ್ಲಿ ತನ್ನ ಚೊಚ್ಚಲ ಪ್ರವೇಶವನ್ನು ಗುರುತಿಸಿದ ನೋಕಿಯಾ ಜಿ20 (Nokia G20) ಯ ಮುಂದಿನ ವರ್ಶನ್ (Nokia G21) ಅನ್ನು ಅನಾವರಣಗೊಳಿಸಲಾಗಿದೆ. ನೋಕಿಯಾ ವೈರ್ಡ್ ಹೆಡ್‌ಫೋನ್‌ಗಳ ಹೊಸ ಸೆಟ್‌ನೊಂದಿಗೆ ಪ್ರಾರಂಭಿಸಲಾಗಿದೆ. ಇದು ಇತ್ತೀಚಿನ ಫೋನ್ ಸರಣಿಯಲ್ಲಿ ರಿಫ್ರೆಶ್ ವಿನ್ಯಾಸವನ್ನು ಪ್ರಯತ್ನಿಸುತ್ತದೆ. ಇಲ್ಲಿ ಅತ್ಯಂತ ಗಮನಾರ್ಹವಾದ ಬದಲಾವಣೆಯೆಂದರೆ ಆಯತಾಕಾರದ ಕ್ಯಾಮೆರಾ ಮಾಡ್ಯೂಲ್ ಬಳಕೆಯಾಗಿದ್ದು ಅದು ಹಿಂದಿನ ವರ್ಷನ್ ಗಳಲ್ಲಿ ಕಂಡುಬರುವ ಐಕಾನಿಕ್ ವೃತ್ತಾಕಾರವನ್ನು ಬದಲಾಯಿಸುತ್ತದೆ. ಇದರ ಜೊತೆಗೇ ಸಹಜವಾಗಿ, ಇತರ ಬದಲಾವಣೆಗಳಿವೆ.(Nokia G21 Launched)
ಉದಾಹರಣೆಗೆ ಹಿಂಬದಿಯ ಪ್ಯಾನೆಲ್ ಈಗ ಮೇಲಿನಿಂದ ವೇವ್ಸ್ ಮಾದರಿಯಲ್ಲಿ ರಚನೆಯಾಗಿರುವಂತೆ ತೋರುತ್ತಿದೆ. ಮತ್ತು ಉತ್ತಮ ಗ್ರಿಪ್ ನೀಡಲು ಉದ್ದೇಶಿಸಲಾಗಿದೆ. ಫೋನ್‌ನ ಸ್ಕ್ರೀನ್, ಕ್ಯಾಮೆರಾ ಮತ್ತು ಬ್ಯಾಟರಿಯಲ್ಲೂ ಕೆಲವು ವ್ಯತ್ಯಾಸಗಳನ್ನು ಕಾಣಬಹುದು.
ನೋಕಿಯಾ ಜಿ21 : ಪ್ರಮುಖ ಸ್ಪೆಸಿಫಿಕೇಶನ್
ಡೈಮೆನ್ಷನ್ ಹಾಗೂ ತೂಕ: ನೋಕಿಯಾ ಜಿ21ಅಳತೆ 164.6 x 75.9 x 8.5 ಎಂಎಂ ಮತ್ತು 190 ಗ್ರಾಂ ತೂಗುತ್ತದೆ.
ಡಿಸ್‌ಪ್ಲೇ: ಇದು 720 x 1600 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿರುವ 6.5-ಇಂಚಿನ ಎಲ್ ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದರಲ್ಲಿ 90 ಹರ್ಟ್ಸ್ ಹೈ ರಿಫ್ರೆಶ್ ರೇಟ್ ಪ್ಯಾನೆಲ್ ಅನ್ನು ಬಳಸಿದೆ. ಮತ್ತೊಂದು ಕುತೂಹಲಕಾರಿ ವಿಷಯವೆಂದರೆ ಇದು ನೆಟ್‌ಫ್ಲಿಕ್ಸ್ ಅನ್ನು ಎಚ್‌ಡಿಯಲ್ಲಿ ಸ್ಟ್ರೀಮ್ ಮಾಡಬಹುದು.
ಪ್ರೊಸೆಸರ್: ಇದು ಯುನಿಸೊಕ್ (T606) ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಇದು 12 ಎಂಎಂ ಉತ್ಪಾದನಾ ಪ್ರಕ್ರಿಯೆ ಮತ್ತು (Mali G57 MP1 GPU) ನೊಂದಿಗೆ ಆಕ್ಟಾ-ಕೋರ್ ಚಿಪ್‌ಸೆಟ್ ಆಗಿದೆ.
ರಾಮ್: ಫೋನ್ ಅನ್ನು 4ಜಿಬಿ ಮತ್ತು 6ಜಿಬಿ ರಾಮ್ ಮಾದರಿಗಳಲ್ಲಿ ನೀಡಲಾಗುತ್ತದೆ.
ಸ್ಟೋರೇಜ್: ಇದು ಒಂದೇ 128ಜಿಬಿ ಸ್ಟೋರೇಜ್ ಕಾನ್ಫಿಗರೇಶನ್‌ನಲ್ಲಿ ಬರುತ್ತದೆ. ಆದಾಗ್ಯೂ, ಬಳಕೆದಾರರು ಇದನ್ನು ಮೈಕ್ರೋ-ಎಸ್ಡಿ ಮೂಲಕ ವಿಸ್ತರಿಸಬಹುದು.
ಕ್ಯಾಮರಾ: ನೋಕಿಯಾ ಜಿ21 50-ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್, 2-ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್ ಸೇರಿದಂತೆ ಟ್ರಿಪಲ್ ರಿಯರ್ ಕ್ಯಾಮರಾ ಸೆಟಪ್‌ನೊಂದಿಗೆ ಸಜ್ಜುಗೊಂಡಿದೆ. ಕಂಪನಿಯು ಈ ಹೊಸ ಮಾದರಿಯಲ್ಲಿ ಹೆಚ್ಚಿನ ರೆಸಲ್ಯೂಶನ್ ಮುಖ್ಯ ಕ್ಯಾಮೆರಾವನ್ನು ಬಳಸಿದೆ. ಮುಂಭಾಗದಲ್ಲಿ ಸೆಲ್ಫಿಗಾಗಿ 8-ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ.
ಬ್ಯಾಟರಿ: 18 ವಾಟ್ ಚಾರ್ಜಿಂಗ್ ಬೆಂಬಲದೊಂದಿಗೆ 5050 ಎಂಎಎಚ್ ಬ್ಯಾಟರಿಯಿಂದ ಚಾಲಿತವಾಗಿದೆ. ಆದರೆ ಕಂಪನಿಯು ಒಳಗೆ 10 ವಾರ್ ಚಾರ್ಜರ್ ಅನ್ನು ಮಾತ್ರ ಕೊಡುತ್ತಿದೆ.
ಸಾಫ್ಟ್‌ವೇರ್: ಫೋನ್ ಆಂಡ್ರಾಯ್ಡ್ 11 ಅನ್ನು ರನ್ ಮಾಡುತ್ತದೆ. ಇದು ಎರಡು ವರ್ಷಗಳ ಆಂಡ್ರಾಯ್ಡ ಅಪ್ಡೇಟ್ಸ್ ಮತ್ತು ಮೂರು ವರ್ಷಗಳ ಸೆಕ್ಯೂರಿಟಿ ಪ್ಯಾಚ್‌ಗಳನ್ನು ಸ್ವೀಕರಿಸುತ್ತದೆ.
ಕನೆಕ್ಟಿವಿಟಿ ಮತ್ತು ಸೆಕ್ಯೂರಿಟಿ: ಇದು 4ಜಿ, ಬ್ಲೂಟೂತ್, ಜಿಪಿಎಸ್, ವೈಫೈ, ಯುಎಸಬಿ ಟೈಪ್ ಸಿ ಮತ್ತು 3.5 ಎಂಎಂ ಆಡಿಯೊ ಜಾಕ್‌ನಂತಹ ಸಂಪರ್ಕ ಆಯ್ಕೆಗಳನ್ನು ಹೊಂದಿದೆ. ಈ ಸಾಧನದಲ್ಲಿ ದೃಢೀಕರಣಕ್ಕಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಇದೆ.
ಬಣ್ಣಗಳು: ನೋಕಿಯಾ ಜಿ21 ಡಸ್ಕ್ ಮತ್ತು ನಾರ್ಡಿಕ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ.
ಬೆಲೆ: ಈ ಸ್ಮಾರ್ಟ್ ಫೋನ್ EUR 170 (ಸುಮಾರು ರೂ. 14,500) ಆರಂಭಿಕ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಈ ಸಮಯದಲ್ಲಿ, ಅದರ ಭಾರತದ ಲಾಂಚ್ ಕುರಿತು ಯಾವುದೇ ಮಾಹಿತಿ ಇಲ್ಲ.

ಇದನ್ನೂ ಓದಿ: WhatsApp New Feature: ಶೀಘ್ರದಲ್ಲೇ ಬರಲಿದೆ ವಾಟ್ಸಾಪ್ ಕಮ್ಯುನಿಟಿ ಫೀಚರ್
(Nokia G21 launched everything you need to know)

Comments are closed.