Zameer Ahmed Khan : ಇಡಿ, ಐಟಿ ಬಳಿಕ ಎಸಿಬಿ ವಾರ್ : ಜಮೀರ್ ವಿರುದ್ಧ ದಾಖಲಾದ FIR ನಲ್ಲೇನಿದೆ ಗೊತ್ತಾ ?

ಬೆಂಗಳೂರು : ಈಗಾಗಲೇ ಇಡಿ, ಐಟಿ ದಾಳಿಯಿಂದ ಕಂಗಾಲಾಗಿರುವ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಗೆ ಈಗ ಎಸಿಬಿಯೂ ಶಾಕ್ ನೀಡಿದೆ. ಮೊನ್ನೆ ದಾಳಿ ನಡೆಸಿದ ಎಸಿಬಿ ಜಮೀರ್ ಅಹ್ಮದ್ (Zameer Ahmed Khan) ಬಳಿ ಇರೋ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಅಲ್ಲದೇ ಈಗ ಜಮೀರ್ ಅಕ್ರಮ ಆಸ್ತಿ ಬಗ್ಗೆ ಎಸಿಬಿ ಎಫ್‌ಐಆರ್‌ ದಾಖಲಿಸಿಕೊಂಡಿದೆ. ಹಾಗಿದ್ದರೇ ಜಮೀರ್ ವಿರುದ್ಧ ದಾಖಲಾದ ಎಫ್‌ಐಆರ್‌ ನಲ್ಲಿ ಏನಿದೆ ಅನ್ನೋ ವಿವರ ಇಲ್ಲಿದೆ. ಜಮೀರ್ ಅಹ್ಮದ್ ಮನೆ ಮೇಲೆ‌ ದಾಳಿ ನಡೆಸಿದ ಎಸಿಬಿ, ಡಿವೈಎಸ್ ಪಿ ಬಸವರಾಜ ಮಗದುಮ್ ದಾಳಿಯಲ್ಲಿ ಸಿಕ್ಕ ಅಂಶಗಳನ್ನು ಆಧರಿಸಿ ದೂರು ನೀಡಿದ್ದು, ಬಸವರಾಜ ಮಗದುಮ್ ದೂರಿನ ಮೇರೆಗೆ ಎಸಿಬಿ ಪ್ರಕರಣ ದಾಖಲಿಸಿದೆ.

ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988 ಕಲಂ 13(1)(b)r/w13(2) ಅಡಿಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪಿಎಂಎಲ್ಎ ಕಾಯ್ದೆ ಅನ್ವಯ ಇಡಿ ಕೊಟ್ಟ ಮಾಹಿತಿ ಮೇರೆಗೆ ಎಫ್ಐಆರ್ ದಾಖಲಾಗಿದೆ. ಇಡಿ ದಾಖಲಿಸಿದ ಎಫ್‌ಐಆರ್‌ ತನಿಖೆಯಲ್ಲಿ ಜಮೀರ್ ಅಹಮದ್ ಸಾರ್ವಜನಿಕ ಸೇವಕರಾಗಿದ್ದು, 2005 ರಿಂದ ಆಗಸ್ಟ್ 5 2021 ರ ಅವದಿಯಲ್ಲಿ ತನ್ನ ಅಧಿಕಾರವನ್ನ ದುರುಪಯೋಗ ಪಡಿಸಿಕೊಂಡು ಅಪಾರ ಪ್ರಮಾಣದ ಆಸ್ತಿ ಗಳಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಜಾರಿ ನಿರ್ದೇಶನಾಲಯ ನೀಡಿದ ಮಾಹಿತಿಯ ದಾಖಲೆ ಪ್ರಕಾರ ಜಮೀರ್ ಅಹ್ಮದ್ ಒಟ್ಟು ಆಸ್ತಿ-73,94,36,027 ರೂಪಾಯಿ ಗಳಾಗಿದ್ದು, ಆದಾಯ-4,30,48,790 ವೆಚ್ಚ – 17,80,18,000 ರೂನಷ್ಟಿದೆ. ದಾಖಲೆಗಳ ಪ್ರಕಾರ ಆದಾಯಕ್ಕಿಂತ ಜಮೀರ್ 87,44,05,057 ಹೆಚ್ಚಿನ ಆಸ್ತಿ ಗಳಿಸಿದ್ದಾರೆ ಎಂದು ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ. ಅಧಿಕವಾಗಿ ಅಕ್ರಮವಾಗಿ ಆಸ್ತಿ ಗಳಿಸಿದ ಆರೋಪ ಎಸಗಿರಿವುದು ಕಂಡು ಬಂದಿದ್ದು ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ದೂರು ನೀಡಿದ್ದ ತನಿಕಾಧಿಕಾರಿಯ ದೂರು ಆಧರಿಸು ಎಸಿಬಿ ಡಿವೈಎಸ್ ಪಿ ಕೆ. ರವಿಶಂಕರ್ ಅವರಿಂದ ದೂರಿನ ತನಿಖೆ ಆರಂಭಗೊಂಡಿದೆ.

ಅಕ್ರಮ ಆಸ್ತಿ ಗಳಿಕೆ ಸಂಬಂಧ ದೂರುದಾರ ಬಸವರಾಜ ಮಗದುಮ್ ಕೊಟ್ಟ ಸೋರ್ಸ್ ವರದಿ ಹಾಗೂ ಇಡಿ ಅಧಿಕಾರಿಗಳು ನೀಡಿದ ಮಾಹಿತಿ ವರದಿಇಡಿಯವರು ಎಸಿಬಿ ಎಡಿಜಿಪಿಯವರಿಗೆ ಬರೆದ ಪತ್ರ. ಎಸಿಬಿ ಎಸ್ಪಿ ಯವರು ನೀಡಿದ ಪತ್ರಗಳನ್ನ ಲಗತ್ತಿಸಿ ತನಿಖೆ ಕೈಗೊಂಡಿರೋ ಅಧಿಕಾರಿಗಳು ಜಮೀರ್ ಅಕ್ರಮ ಆಸ್ತಿ ಪತ್ತೆಗೆ ಸಿದ್ಧವಾಗಿದ್ದಾರೆ. ಒಟ್ಟಿನಲ್ಲಿ ಜಮೀರ್ ಅಹ್ಮದ್ ಇಡಿ, ಐಟಿ ಹಾಗೂ ಎಸಿಬಿ‌ ಬಲೆಯಲ್ಲಿ ಸಿಲುಕಿ ಒದ್ದಾಡುವಂತಾಗಿದೆ.

ಇದನ್ನೂ ಓದಿ : MLA Election 2023 : ಉಡುಪಿ, ದಕ್ಷಿಣ ಕನ್ನಡ 4 ಬಿಲ್ಲವ, 2 ಮೊಗವೀರ ಅಭ್ಯರ್ಥಿಗಳು : ಹೇಗಿದೆ ಗೊತ್ತಾ ಕಾಂಗ್ರೆಸ್‌ ಹೈಕಮಾಂಡ್‌ ಲೆಕ್ಕಾಚಾರ

ಇದನ್ನೂ ಓದಿ : Heavy Rain Red Alert : ಕರಾವಳಿಯಲ್ಲಿ ಮೇಘಸ್ಪೋಟ : ರೆಡ್‌ ಅಲರ್ಟ್‌ ಘೋಷಣೆ, ಶಾಲೆಗಳಿಗೆ ರಜೆ, 5 ದಿನ ಸುರಿಯಲಿದೆ ಭಾರಿ ಮಳೆ

ACB War after ED IT : Do you know what is in the FIR registered against Zameer Ahmed Khan?

Comments are closed.