siddaramaiah : ಅಹಿಂದ ಮತ ಸೆಳೆಯಲು ಕಾಂಗ್ರೆಸ್​ ಮಾಸ್ಟರ್​ಪ್ಲಾನ್​ : ಕೋಲಾರದಿಂದ ಸಿದ್ದರಾಮಯ್ಯ ಕಣಕ್ಕಿಳಿಯುವ ಸಾಧ್ಯತೆ

ಕೋಲಾರ : siddaramaiah : ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೊಂದು ವರ್ಷ ಬಾಕಿ ಇರುವಾಗಲೇ ತೆರೆ ಮರೆಯಲ್ಲಿ ಚುನಾವಣೆಯ ಚಟುವಟಿಕೆಗಳು ಗರಿಗೆದರಿವೆ. ಮುಂದಿನ ಅವಧಿಗೂ ಸರ್ಕಾರವನ್ನು ಉಳಿಸಿಕೊಳ್ಳಬೇಕು ಎನ್ನುವುದು ಬಿಜೆಪಿ ಲೆಕ್ಕಾಚಾರವಾಗಿದ್ದರೆ ಮುಂದಿನ ಬಾರಿ ಹೇಗಾದರೂ ಮಾಡಿ ಅಧಿಕಾರದ ಗದ್ದುಗೆಯಲ್ಲಿ ಕೂರಬೇಕು ಎನ್ನುವುದು ಕಾಂಗ್ರೆಸ್​ನ ಪ್ಲಾನ್​ ಆಗಿದೆ. ಇತ್ತ ಜೆಡಿಎಸ್​ ಕೂಡ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಪ್ರಬಲ ಪೈಪೋಟಿ ನೀಡಲು ಸನ್ನದ್ಧವಾಗ್ತಿದೆ. ಈ ಎಲ್ಲದರ ನಡುವೆ ವಿಪಕ್ಷ ನಾಯಕ ಸಿದ್ದರಾಮಯ್ಯ ಈ ಬಾರಿ ಚುನಾವಣೆಯಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ (siddaramaiah most likely to contest in kolar ) ಎಂಬ ಗುಮಾನಿ ಹೊರಬಿದ್ದಿದೆ.

ಕೋಲಾರದಿಂದ ಸಿದ್ದರಾಮಯ್ಯರನ್ನು ಕಣಕ್ಕೆ ಇಳಿಸಿ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳೆರಡರ ಮತವನ್ನೂ ಸೆಳೆದುಕೊಳ್ಳುವುದು ಕಾಂಗ್ರೆಸ್​ನ ಲೆಕ್ಕಾಚಾರವಾಗಿದೆ. ನೀವು ಕೋಲಾರದಿಂದ ಸ್ಪರ್ಧೆ ಮಾಡಿದರೆ ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಮತ ಧ್ರುವೀಕರಣ ಆಗಲಿದೆ ಎಂಬುದನ್ನು ಜಿಲ್ಲಾ ಕಾಂಗ್ರೆಸ್​ ನಾಯಕರು ಸಿದ್ದರಾಮಯ್ಯ ಬಳಿ ಹೇಳಿದ್ದಾರೆ ಎನ್ನಲಾಗಿದೆ. ಕೋಲಾರ ಹಾಗೂ ಚಿಕ್ಕಬಳ್ಳಾಪುರದಲ್ಲಿರುವ 11 ವಿಧಾನಸಭಾ ಕ್ಷೇತ್ರಗಳಲ್ಲಿ ಅಹಿಂದ ಮತದರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಿದ್ದರಾಮಯ್ಯ ಕುರುಬ, ಅಲ್ಪ ಸಂಖ್ಯಾತ ಹಾಗೂ ದಲಿತ ಸಮುದಾಯಗಳ ಪಾಲಿಗೆ ಉತ್ತಮ ನಾಯಕ ಎನಿಸಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡಿದರೆ ಮೂರು ಜಿಲ್ಲೆಗಳಲ್ಲೂ ಕಾಂಗ್ರೆಸ್​​ ಮುಂದೆ ಬರುತ್ತೆ ಎನ್ನುವುದು ವರಿಷ್ಠರ ಲೆಕ್ಕಾಚಾರವಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು, ಬಾಗೇಪಲ್ಲಿ, ಶಿಡ್ಲಘಟ್ಟ ಹಾಗೂ ಕೋಲಾರ ಜಿಲ್ಲೆಯ ಮಾಲೂರು, ಕೆಜಿಎಫ್, ಬಂಗಾರಪೇಟೆ, ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೆ. ಕೋಲಾರ ಶಾಸಕ ಶ್ರೀನಿವಾಸಗೌಡ ಜೆಡಿಎಸ್​ನಿಂದ ಸ್ಪರ್ಧಿಸಿ ಗೆದ್ದಿದ್ದರೂ ಸಹ ಪ್ರಸ್ತುತ ಕಾಂಗ್ರೆಸ್​ನಲ್ಲಿದ್ದಾರೆ. ಇತ್ತ ಮುಳಬಾಗಿಲು ಶಾಸಕ ನಾಗೇಶ್​ ಕೂಡ ಕಾಂಗ್ರೆಸ್​ ಬೆಂಬಲದಿಂದ ಜಯ ಸಾಧಿಸಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್​ ಹಾಗೂ ಜೆಡಿಎಸ್​ ಪಾಲಿಗೆ ಪ್ರತಿಷ್ಠೆಯ ಕಣವಾಗಿದೆ.

ಮುಂದಿನ ವರ್ಷ ವಿಧಾನಸಭಾ ಚುನಾವಣೆಯಲ್ಲಿ ಅಹಿಂದ ಮತಗಳ ಮೇಲೆ ಹೆಚ್ಚು ಗುರಿಯನ್ನು ಹೊಂದಿರುವ ಕಾಂಗ್ರೆಸ್​ ಅಹಿಂದ ಸಮುದಾಯದ ಪ್ರಬಲ ನಾಯಕ ಸಿದ್ದರಾಮಯ್ಯರನ್ನೇ ಕೋಲಾರದಿಂದ ಕಣಕ್ಕಿಳಿಸಿದರೆ ರಾಜ್ಯದಲ್ಲಿನ ಎಲ್ಲಾ ಅಹಿಂದ ಮತಗಳನ್ನು ತನ್ನಲ್ಲಿಯೇ ಉಳಿಸಿಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿದೆ.

ಇದನ್ನು ಓದಿ : EXCLUSIVE : ಶಾಸಕ ಜಮೀರ್‌ ಖಾನ್‌ ಗೆ ಐಎಂಎ ಉರುಳು : ಇತಿಹಾಸದಲ್ಲೇ ಎಂಎಲ್‌ಎ ಮನೆ ಕದ ತಟ್ಟಿದ ಎಸಿಬಿ

ಇದನ್ನೂ ಓದಿ : man arrested for rape : ನಿರಂತರ ಅತ್ಯಾಚಾರವೆಸಗಿ ಬಾಲಕಿಯನ್ನು ಗರ್ಭಿಣಿಯನ್ನಾಗಿಸಿದ 50ರ ಕಾಮುಕ ಅರೆಸ್ಟ್​

siddaramaiah most likely to contest in kolar what are the effects

Comments are closed.