ಭಾನುವಾರ, ಏಪ್ರಿಲ್ 27, 2025
Homekarnatakaನಟಿ ರಮ್ಯ Vs ಸಂಸದೆ ಸುಮಲತಾ Vs ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ನಡುವೆ ಫೈಟ್...

ನಟಿ ರಮ್ಯ Vs ಸಂಸದೆ ಸುಮಲತಾ Vs ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ನಡುವೆ ಫೈಟ್ : ಲೋಕಸಭಾ ವಾರ್ ಗೆ ಸಿದ್ಧವಾಗ್ತಿದೆ ಮಂಡ್ಯ

- Advertisement -

Ramya vs Sumalatha vs HD Kumaraswamy : ಚುನಾವಣೆ ಯಾವುದೇ ಇರಲಿ ಆದರೆ ಹೈವೋಲ್ಟೇಜ್ ಕ್ಷೇತ್ರವಾಗೋದು ಮಾತ್ರ ಮಂಡ್ಯ. ಕಳೆದ 2019 ರ ಲೋಕಸಭಾ ಚುನಾವಣೆಯಲ್ಲಿ ದೇಶದ ಗಮನ ಸೆಳೆದಿದ್ದ ಈ ಲೋಕಸಭಾ ಕ್ಷೇತ್ರ ಈ ಭಾರಿಯೂ ಮತ್ತೆ ಸಾಕಷ್ಟು ಕುತೂಹಲ ಮೂಡಿಸಿದೆ. ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ, ಹಾಲಿ ಸಂಸದೆ ಸುಮಲತಾ ಹಾಗೂ ಮಾಜಿ ಸಂಸದೆ ರಮ್ಯ ಸೇರಿದಂತೆ ಹಲವು ಸೆಲೆಬ್ರೆಟಿಗಳ ತುರುಸಿನ ಸ್ಪರ್ಧೆಗೆ ಕ್ಷೇತ್ರವಾಗೋ ಸಾಧ್ಯತೆ ಇದೆ.

2019 ರ ಮಂಡ್ಯ ಲೋಕಸಭಾ ಚುನಾವಣಾ ಕಣ ಜೋಡೆತ್ತುಗಳ ಪ್ರೋತ್ಸಾಹ ಹಾಗೂ ಮಾಜಿಸಿಎಂ ಪುತ್ರನ ಸ್ಪರ್ಧೆಯ ಕಾರಣಕ್ಕೆ ಕೊನೆಯ ಕ್ಷಣದವರೆಗೂ ಹೈವೋಲ್ಟೇಜ್ ಫೈಟ್ ಎನ್ನಿಸಿತ್ತು. ಮಾಜಿಸಿಎಂ ಕುಮಾರಸ್ವಾಮಿ ತಮ್ಮ ಪುತ್ರನನ್ನು ಲೋಕಸಭೆಯ ಮೆಟ್ಟಿಲು ಹತ್ತಿಸಬೇಕೆಂಬ ಕಾರಣಕ್ಕೆ ಸ್ವತಃ ಕಾಂಗ್ರೆಸ್ ಬೆಂಬಲದ ಜೊತೆಗೆ ಮಂಡ್ಯ ಕಣದಲ್ಲಿ ನಿಂತಿದ್ದರು.

Actress Ramya vs Sumalatha vs HD Kumaraswamy big fight in Mandya lok sabha election 2024
Image Credit to Original Source

ಸ್ವತಃ ಪ್ರಚಾರ ಹಾಗೂ ಸುಮಲತಾ ವಿರುದ್ಧ ಅಪಪ್ರಚಾರ ಕೂಡ ಮಾಡಿದ್ದರು. ಆದರೂ ಸುಮಲತಾ ವಿಶ್ವಾಸ ಹಾಗೂ ಅಂಬರೀಶ್ ಬಗ್ಗೆ ಮಂಡ್ಯದ ಜನರಿಗಿದ್ದ ಪ್ರೀತಿ ಸುಮಲತಾರನ್ನು ಗೆಲುವಿನ ಮೆಟ್ಟಿಲು ಹತ್ತಿಸಿತ್ತು. ಈಗ ಮತ್ತೊಮ್ಮೆ 2024 ರ ಲೋಕಸಭಾ ಚುನಾವಣೆ ಮತ್ತೆ ಅಷ್ಟೇ ಕುತೂಹಲಕ್ಕೆ ಕಾರಣವಾಗಿದೆ. ಒಂದೆಡೆ ಸುಮಲತಾ ಮತ್ತೊಮ್ಮೆ ಆಯ್ಕೆ ಬಯಸಿ ಸ್ಪರ್ಧಿಸಲು ಸಿದ್ಧವಾಗಿದ್ದರೇ, ಇನ್ನೊಂದು ಕಡೆ ನಟಿ ರಮ್ಯ ಮತ್ತೊಮ್ಮೆ ಮಂಡ್ಯದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಇದನ್ನೂ ಓದಿ : ಕರ್ನಾಟಕ ರಾಜ್ಯ ಬಿಜೆಪಿ ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ

ಬಿಜೆಪಿ ಜೆಡಿಎಸ್ ಮೈತ್ರಿಯಿಂದಾಗಿ ಹೆಚ್ಡಿಕೆಯನ್ನು ಕೇಂದ್ರ ರಾಜಕಾರಣಕ್ಕೆ ಕರೆಸಲು ಪ್ರಧಾನಿ ಮೋದಿ ಇಚ್ಛಿಸಿದ್ದು ಅದಕ್ಕಾಗಿ ಲೋಕಸಭಾ ಚುನಾವಣೆಯಲ್ಲಿ ಸ್ವತಃ ಮಾಜಿ ಸಿಎಂ ಎಚ್ಡಿಕೆ ಮತ್ತೊಮ್ಮೆ ಸುಮಲತಾ ಎದುರು ತೊಡೆ ತಟ್ಟಲಿದ್ದು ಈ ಭಾರಿ ತಮ್ಮ ಗೆಲುವಿಗಾಗಿ ತಾವೇ ಸೆಣೆಸಲಿದ್ದಾರೆ ಎನ್ನಲಾಗ್ತಿದೆ.

Actress Ramya vs Sumalatha vs HD Kumaraswamy big fight in Mandya lok sabha election 2024
Image Credit to Original Source

ರಮ್ಯ ಈ ಹಿಂದೊಮ್ಮೆ ಮಂಡ್ಯದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಈ ವೇಳೆ ಮಂಡ್ಯದಲ್ಲೇ ಮನೆ ಮಾಡಿ ಜನಸೇವೆ ಮಾಡೋದಾಗಿ‌ ಹೇಳಿದ್ದರು. ಆದರೆ ಗೆದ್ದ ರಮ್ಯ ಮಂಡ್ಯದಲ್ಲಿ ಮನೆ ಮಾಡಲಿಲ್ಲ. ಮತ್ತೊಮ್ಮೆ ಮಂಡ್ಯದ ಕಡೆಗೆ ಮುಖ ಮಾಡಿ ಬರಲೂ ಇಲ್ಲ.‌ಕೊನೆಗೆ ತಮಗೆ ರಾಜಕಾರಣಕ್ಕೆ ಬರಲು ಶಕ್ತಿ ತುಂಬಿದ ಅಂಬರೀಶ್ ಅಂತ್ಯಸಂಸ್ಕಾರಕ್ಕೂ ಬರದೇ ಮಂಡ್ಯದಿಂದ ಅಂತರ ಕಾಯ್ದುಕೊಂಡರು.

ಈಗ ಮತ್ತೊಮ್ಮೆ ರಮ್ಯ ಕಾಂಗ್ರೆಸ್ ನಿಂದ ಸ್ಪರ್ಧಿಸಲಿದ್ದಾರೆ ಎನ್ನಲಾಗ್ತಿದೆ. ಅಷ್ಟೇ ಅಲ್ಲ ರವಿಕುಮಾರ್ ಸೇರಿದಂತೆ ಸಾಕಷ್ಟು ಎಂಎಲ್ ಎ ಗಳು ರಮ್ಯ ಸ್ಪರ್ಧೆಯನ್ನು ಬೆಂಬಲಿಸಿದ್ದಾರಂತೆ. ಇನ್ನು ಮೈತ್ರಿ ಅಭ್ಯರ್ಥಿಯಾಗಿ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸಲಿದ್ದಾರೆ. ಇದಕ್ಕಾಗಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಕುಮಾರಸ್ವಾಮಯವರನ್ನು ಬೆಂಬಲಿಸಲಿದ್ದಾರಂತೆ.

ಇದನ್ನೂ ಓದಿ : ಜಾತಿಗಣತಿ ಎಂಬ ಬಿಸಿತುಪ್ಪ: ಸಿಎಂ ಸಿದ್ಧರಾಮಯ್ಯ ನಿರ್ಧಾರದ ಮೇಲೆ ನಿಂತಿದೆ ಕಾಂಗ್ರೆಸ್ ಭವಿಷ್ಯ

ಈ ಭಾರಿಯೂ ನಟಿ ಸುಮಲತಾ ಸ್ವತಂತ್ರವಾಗಿ ಸ್ಪರ್ಧಿಸಲಿದ್ದು, ತಮ್ಮ ಐದು ವರ್ಷದ ಸಾಧನೆ ಹಾಗೂ ಜನರ ವಿಶ್ವಾಸದ ಮೇಲೆ ಮತಯಾಚನೆ ಮಾಡಲಿದ್ದಾರೆ. ಹಿಂದಿನ ಭಾರಿ ಚುನಾವಣೆ ವೇಳೆ ಸುಮಲತಾ ಗೆಲುವಿಗೆ ಜೋಡೆತ್ತಿಗಳ‌ಶ್ರಮವೂ ಕಾರಣವಾಗಿತ್ತು . ಆದರೆ ಐದು ವರ್ಷಗಳ ಅವಧಿಯಲ್ಲಿ ನಟ ಯಶ್ ಇಂಟರನ್ಯಾಶನಲ್ ಸ್ಟಾರ್ ಮಟ್ಟಕ್ಕೆ ಏರಿದ್ದು ಈ ಭಾರಿ ಚುನಾವಣೆ ಪ್ರಚಾರಕ್ಕೆ ಬರೋದು ಅನುಮಾನ.

Actress Ramya vs Sumalatha vs HD Kumaraswamy big fight in Mandya lok sabha election 2024
Image Credit to Original Source

ಹೀಗಾಗಿ ಈ ಭಾರಿ ಸುಮಲತಾ ಗೆಲುವು ಕೇವಲ ಅವರ ಸಾಮರ್ಥ್ಯವನ್ನೇ ಆಧರಿಸಿದ್ದು ಯಾವುದೇ ಸ್ಟಾರ್ ಡಮ್ ಬೆಂಬಲವೂ ಸಿಗೋ ಸಾಧ್ಯತೆಗಳಿಲ್ಲ. ಇದೆಲ್ಲದಕ್ಕಿಂತ ಮುಖ್ಯವಾಗಿ ಈ ಎಲ್ಲ ಹೆಸರುಗಳ ಜೊತೆಗೆ ಈ ಭಾರಿ ಮಂಡ್ಯ ಲೋಕಸಭಾ ಚುನಾವಣೆಗೆ ಅಚ್ಚರಿಯ ಹೆಸರೊಂದು ಪ್ರಸ್ತಾಪಗೊಂಡಿದೆ.

ಇದನ್ನೂ ಓದಿ : Vijayakanth Passed Away : ಖ್ಯಾತ ನಟ ವಿಜಯಕಾಂತ್ ಕೋವಿಡ್‌ ಸೋಂಕಿಗೆ ಬಲಿ

ಮಾಜಿಸಿಎಂ ಎಸ್.ಎಂ.ಕೃಷ್ಣ ಪುತ್ರಿ ಶಾಂಭವಿ ಕೂಡ ಟಿಕೇಟ್ ಆಕಾಂಕ್ಷಿಯಾಗಿದ್ದು, ತಂದೆಯ ಪಕ್ಷ ಬಿಜೆಪಿ ಅಥವಾ ಸ್ವತಂತ್ರವಾಗಿ ಕಣಕ್ಕಿಳಿತಾರಾ ಕಾದು ನೋಡಬೇಕಿದೆ. ಒಟ್ಟಿನಲ್ಲಿ ಈ ಭಾರಿಯೂ ಮಂಡ್ಯದಲ್ಲಿ ಚುನಾವಣೆ ರಾಷ್ಟ್ರಮಟ್ಟದ ಚರ್ಚೆಯ ವಸ್ತುವಾಗೋ ಸಾಧ್ಯತೆ ಇದೆ.

Actress Ramya vs Sumalatha vs HD Kumaraswamy big fight in Mandya lok sabha election 2024

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular