ಕರ್ನಾಟಕ ರಾಜ್ಯ ಬಿಜೆಪಿ ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ

Karnataka BJP New Office Bearers : ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಅವರ ದೆಹಲಿ ಭೇಟಿಯ ಬೆನ್ನಲ್ಲೇ ಕರ್ನಾಟಕ ರಾಜ್ಯ ಬಿಜೆಪಿ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಹಾಲಿ ಶಾಸಕರು, ಬಿಜೆಪಿ ಹಿರಿಯ ನಾಯಕರ ಜೊತೆಗೆ 6 ಮಂದಿ ಮಹಿಳಾ ಕಾರ್ಯಕರ್ತರಿಗೆ ಸ್ಥಾನಮಾನ ನೀಡಲಾಗಿದೆ.

Karnataka BJP New Office Bearers : ಬೆಂಗಳೂರು : ಕರ್ನಾಟಕ ರಾಜ್ಯ ಬಿಜೆಪಿ (BJP )ಅಧ್ಯಕ್ಷ ಬಿವೈ ವಿಜಯೇಂದ್ರ ಅವರ ದೆಹಲಿ ಭೇಟಿಯ ಬೆನ್ನಲ್ಲೇ ಕರ್ನಾಟಕ ರಾಜ್ಯ ಬಿಜೆಪಿ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಹಾಲಿ ಶಾಸಕರು, ಬಿಜೆಪಿ ಹಿರಿಯ ನಾಯಕರ ಜೊತೆಗೆ 6 ಮಂದಿ ಮಹಿಳಾ ಕಾರ್ಯಕರ್ತರಿಗೆ ಸ್ಥಾನಮಾನ ನೀಡಲಾಗಿದೆ.

ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನಳೀನ್‌ ಕುಮಾರ್‌ ಅವರ ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದ ಬಹುತೇಕ ನಾಯಕರಿಗೆ ನೂತನ ಪದಾಧಿಕಾರಿಗಳ ಪಟ್ಟಿಯಿಂದ ಕೋಕ್‌ ನೀಡಲಾಗಿದೆ. ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಅವರ ಆಪ್ತರಿಗೆ ಹೆಚ್ಚಾಗಿ ಮಣೆ ಹಾಕಲಾಗಿದೆ.

Karnataka BJP New Office Bearers List announced
Image Credit to Original Source

ಬಿಜೆಪಿ ರಾಜ್ಯ ಉಪಾಧ್ಯಕ್ಷರು : ಮುರುಗೇಶ್‌ ನಿರಾಣಿ ( ಬಾಗಲಕೋಟೆ), ಬೈರತಿ ಬಸವರಾಜ್‌ ( ಬೆಂಗಳೂರು), ರಾಜು ಗೌಡ ( ಯಾದಗಿರಿ), ಎನ್.ಮಹೇಶ್‌ ( ಚಾಮರಾಜನಗರ), ಅನಿಲ್‌ ಬೆನಕೆ ( ಬೆಳಗಾವಿ), ಹರತಾಳು ಹಾಲಪ್ಪ (ಶಿವಮೊಗ್ಗ). ರೂಪಾಲಿ ಸಂತೋಷ್‌ ನಾಯಕ್‌ ( ಉತ್ತರ ಕನ್ನಡ), ಡಾ.ಬಸವರಾಜ ಕೇಲಗಾರ ( ಹಾವೇರಿ), ಮಾಳವಿಕ ಅವಿನಾಶ್‌ ( ಬೆಂಗಳೂರು) ಹಾಗೂ ಎಂ ರಾಜೇಂದ್ರ (ಮೈಸೂರು ) ಅವರನ್ನು ನೇಮಕ ಮಾಡಲಾಗಿದೆ.

ಇದನ್ನೂ ಓದಿ : ಯುವನಿಧಿಗೆ ಅರ್ಜಿ ಸಲ್ಲಿಸಲು ಹೊಸ ರೂಲ್ಸ್‌ : ಆನ್ಲೈನ್‌, ಆಫ್‌ ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ?

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು : ವಿ.ಸುನಿಲ್‌ ಕುಮಾರ್‌ ( ಉಡುಪಿ), ಪಿ.ರಾಜೀವ್‌ ( ಬೆಳಗಾವಿ), ಎನ್.ಎಸ್.ನಂದೀಶ್‌ ರೆಡ್ಡಿ ( ಬೆಂಗಳೂರು). ಜಿ.ಪ್ರೀತಮ್‌ ಗೌಡ (ಹಾಸನ) ನೇಮಕವಾಗಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯದರ್ಶಿಗಳು : ಶೈಲೇಂದ್ರ ಬೆಲ್ದಾಳೆ ( ಬೀದರ್‌), ಡಿ.ಎಸ್.ಅರುಣ್‌ ( ಶಿವಮೊಗ್ಗ), ಬಸವರಾಜ್‌ ಮತ್ತೀಮೋಡ್‌ ( ಕಲಬುರಗಿ), ಸಿ.ಮುನಿರಾಜು ( ಚಿಕ್ಕಬಳ್ಳಾಪುರ), ವಿನಯ್‌ ಬಿದರೆ ( ತುಮಕೂರು), ಕ್ಯಾಪ್ಟನ್‌ ಬ್ರಿಜೆಶ್‌ ಚೌಟ ( ದಕ್ಷಿಣ ಕನ್ನಡ), ಶರಣು ತಳ್ಳಿಕೇರಿ ( ಕೊಪ್ಪಳ), ಕು. ಲಲಿತಾ ಅನಾಪುರ (ಯಾದಗಿರಿ), ಅಂಬಿಕಾ ಹುಲಿ ನಾಯ್ಕರ್‌ ( ತುಮಕೂರು) ಅವರನ್ನು ನೇಮಿಸಲಾಗಿದೆ.

Karnataka BJP New Office Bearers List announced
Image Credit to Original Source

ಇದನ್ನೂ ಓದಿ : ಪುಷ್ಪಾ, ರೂಪಾ, ವೀಣಾ, ಸೌಮ್ಯ, ರಮ್ಯ, ಕುಸುಮಾ : ಕಾಂಗ್ರೆಸ್ ಲೋಕಸಭಾ ಟಿಕೇಟ್ ಗೆ 15 ಮಹಿಳಾ ಮಣಿಗಳ ಲಾಬಿ

ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಕು.ಸಿ. ಮಂಜುಳಾ ( ಶಿವಮೊಗ್ಗ) ಅವರನ್ನು ನೇಮಕ ಮಾಡಲಾಗಿದ್ರೆ, ಬಿಜೆಪಿ ರಾಜ್ಯ ಯುವಮೋರ್ಚಾ ಅಧ್ಯಕ್ಷರಾಗಿ ಧೀರಜ್‌ ಮುನಿರಾಜು ( ಬೆಂಗಳೂರು ಗ್ರಾಮಾಂತರ) ಅವರು ಆಯ್ಕೆಯಾಗಿದ್ದಾರೆ. ಎಸ್‌ಟಿ ಮೋರ್ಚಾ ಅಧ್ಯಕ್ಷರಾಗಿ ಬಂಗಾರು ಹನುಮಂತು ( ಬಳ್ಳಾರಿ, ಎಸ್‌ಸಿ ಮೋರ್ಚಾ ಅಧ್ಯಕ್ಷರಾಗಿ ಎಸ್. ಮಂಜುನಾಥ್‌ ( ಹಾಸನ), ಹಿಂದುಳಿದ ಮೋರ್ಚಾ ಅಧ್ಯಕ್ಷರಾಗಿ ರಘು ಕೌಟಿಲ್ಯ ( ಮೈಸೂರು), ರೈತ ಮೋರ್ಚಾ ಅಧ್ಯಕ್ಷರಾಗಿ ಎ.ಎಸ್.ಪಾಟೀಲ್‌ ನಡಹಳ್ಳಿ ( ವಿಜಯಪುರ) ಹಾಗೂ ಅಲ್ಪ ಸಂಖ್ಯಾತ ಮೋರ್ಚಾ ಅಧ್ಯಕ್ಷರನ್ನಾಗಿ ಅನಿಲ್‌ ಥಾಮಸ್‌ ( ಮೈಸೂರು) ಅವರನ್ನು ನೇಮಕ ಮಾಡಲಾಗಿದೆ.

ಇದನ್ನೂ ಓದಿ : ಸುನಿಲ್‌ ಕುಮಾರ್‌ ಆರ್ಭಟಕ್ಕೆ ನಲುಗಿದ ಸರಕಾರ : ವಿಪಕ್ಷ ನಾಯಕನಾಗಿ ಎಡವಿದ್ರಾ ಆರ್‌.ಅಶೋಕ್‌ ?

Karnataka BJP New Office Bearers List announced

Comments are closed.