Mallikarjuna Kharge : ಎಐಸಿಸಿ ಅಧ್ಯಕ್ಷರಾಗ್ತಾರಾ ಖರ್ಗೆ: ದಲಿತ ನಾಯಕನ ಆಯ್ಕೆಗೆ ಕಾರಣಗಳೇನು ಗೊತ್ತಾ?

ನವದೆಹಲಿ : ಎಐಸಿಸಿ ಅಧ್ಯಕ್ಷರ ಆಯ್ಕೆ ಕುತೂಹಲ ಮೂಡಿಸಿದ ಬೆನ್ನಲ್ಲೇ, ಬಹುತೇಕ ಈ ಹುದ್ದೆ ಕರ್ನಾಟಕದ ಪಾಲಾಗೋದು ಬಹುತೇಕ ಖಚಿತ ಎನ್ನಲಾಗುತ್ತದೆ. ಈಗಾಗಲೇ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ , ಮಾಜಿಸಂಸದ ಹಾಗೂ ಹಾಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ (Mallikarjuna Kharge) ಕೂಡ ಅರ್ಜಿ ಸಲ್ಲಿಸಿದ್ದಾರೆ. ಕಾಂಗ್ರೆಸ್ ಮಾಸ್ಟರ್ ಕೀ ಎನ್ನಿಸಿರುವ ಈ ಹುದ್ದೆಗೆ ಖರ್ಗೆ ಅರ್ಜಿ ಸಲ್ಲಿಸಿರೋದು ರಾಜ್ಯ ಕಾಂಗ್ರೆಸ್ ಪಾಲಿಗೆ ಗೌರವದ ಸಂಗತಿಯಾಗಿದ್ದು, ಸೋನಿಯಾ ಗಾಂಧಿ ಹಾಗೂ ಕುಟುಂಬದವರು ಖರ್ಗೆಯವರನ್ನು ಆಯ್ಕೆ ಮಾಡಲು ಯಾವೆಲ್ಲಾ ಕಾರಣಗಳು ಕಾರಣವಾಗಬಹುದು ಎಂಬ ಚರ್ಚೆ ಆರಂಭಗೊಂಡಿದೆ.

ಸದ್ಯ ಮುಂಬರುವ ಚುನಾವಣೆಗೆ ಕಾಂಗ್ರೆಸ್ ಗೆ ನಾಯಕತ್ವ ಕೊರತೆ ಎಂದು ವಿಶ್ಲೇಷಿಸಲಾಗುತ್ತಿದೆ. ಇಂಥ ಹೊತ್ತಿನಲ್ಲಿ ಎಐಸಿಸಿ ಅಧ್ಯಕ್ಷರ ಆಯ್ಕೆ ಮಹತ್ವ ಪಡೆದುಕೊಂಡಿದೆ. ಹಲವಾರು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ ಬೆನ್ನಲ್ಲೇ ರಾಜ್ಯದಿಂದ ಮಾಜಿಸಂಸದ ಹಾಗೂ ಹಿರಿಯ ಕಾಂಗ್ರೆಸ್ ದಲಿತ ನಾಯಕ ಮಲ್ಲಿಕಾರ್ಜುನ್ ಖರ್ಗೆ (Mallikarjuna Kharge)ಕೂಡ ಅರ್ಜಿ ಸಲ್ಲಿಸಿದ್ದಾರೆ‌. ಈ ಪೈಕಿ ಖರ್ಗೆ ಅಧ್ಯಕ್ಷರಾಗೋದು ಬಹುತೇಕ ಖಚಿತ ಎನ್ನಲಾಗುತ್ತಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಎನ್ನಲಾಗಿದೆ.

ಹೀಗಾಗಿ ಈಗಿರೋ ಕಾಂಗ್ರೆಸ್ ನ ಘಟಾನುಘಟಿ ಉಮೇದುವಾರರ ಪೈಕಿ ಖರ್ಗೆ ಪ್ಲಸ್ ಪಾಯಿಂಟ್ ಗಳ ಬಗ್ಗೆ ಚರ್ಚೆ ಆರಂಭಗೊಂಡಿದೆ. ಹಾಗಿದ್ದರೆ ಖರ್ಗೆ ಆಯ್ಕೆಗೆ ಪೂರಕವಾದ ಅಂಶಗಳು ಯಾವುದು ಅನ್ನೋದನ್ನು ನೋಡೋದಾದರೇ,

  • ಹನ್ನೊಂದು ಭಾರಿ ಚುನಾವಣೆ ಗೆದ್ದಿರುವ ದಟ್ಟ ಅನುಭವ
  • ಚುನಾವಣೆಗೆ ಮಾರ್ಗದರ್ಶನ ಮಾಡಬಲ್ಲ ವ್ಯಕ್ತಿತ್ವ
  • ಮಿಗಿಲಾಗಿ ಗಾಂಧಿ ಕುಟುಂಬದ ನಂಬಿಕಸ್ಥ
  • ಗಾಂಧಿ ಕುಟುಂಬದ ವಿರುದ್ಧ ಎಂದೂ ಅಪಸ್ವರ ಎತ್ತದ ಮುಖಂಡ
  • ಯಾವ ಕಾಲದಲ್ಲೂ ಬದಲಾಗದ ಪಕ್ಷದ ಮೇಲಿನ ನಿಷ್ಠೆ
  • ಉನ್ನತ ಸ್ಥಾನಗಳು ಕೈತಪ್ಪಿದಾಗಲೂ ಅಸಮಾಧಾನ ತೋರಿಸಿಕೊಳ್ಳದೆ ಪಕ್ಷ ನಿಷ್ಠೆ ಮೆರೆದಿರುವುದು
  • ದಲಿತ ಸಮುದಾಯದ ದೊಡ್ಡ ನಾಯಕ, ಖರ್ಗೆಗೆ ಅಧಿಕಾರ ನೀಡಿದರೆ ದಲಿತರಿಗೆ ಮನ್ನಣೆ ನೀಡಿದ ಹೆಗ್ಗಳಿಕೆ ಸಿಗೋ ಚಿಂತನೆ
  • ಕಾಂಗ್ರೆಸ್ ಪಕ್ಷದ ಅತ್ಯಂತ ಹಿರಿಯ ನಾಯಕ
  • ಪಕ್ಷ ಸಂಕಷ್ಟದಲ್ಲಿರುವಾಗ ಹೆಗಲಿಗೆ ಹೆಗಲು ಕೊಟ್ಟಿದ್ದರು
  • ಪ್ರಧಾನಿ ನರೇಂದ್ರ ಮೋದಿಯನ್ನು ಪರಿಣಾಮಕಾರಿಯಾಗಿ ಎದುರಿಸುವ ಛಾತಿ ಹೊಂದಿರುವುದು
  • ರಾಜ್ಯಸಭೆಯಲ್ಲಿ ಸಮರ್ಥವಾಗಿ ಪಕ್ಷವನ್ನು ಸಮರ್ಥಿಸಿಕೊಂಡಿರುವುದು
  • ಕಟ್ಟಾ ಆರ್‌ಎಸ್‌ಎಸ್ ವಿರೋಧಿಯಾಗಿರುವುದು

ಇದನ್ನೂ ಓದಿ : ಪೇ ಸಿಎಂ ಮುಜುಗರದ ಬಳಿಕ ಎಚ್ಚೆತ್ತ ಹೈಕಮಾಂಡ್: ರಾಜ್ಯ ಬಿಜೆಪಿ ಮೇಲೆ‌ಕಣ್ಣಿಡಲು ಸಂತೋಷ್ ಗೆ ಸೂಚನೆ

ಇದನ್ನೂ ಓದಿ : ಸಾಯುವವರೆಗೂ ಬಿಜೆಪಿಯಲ್ಲೇ ಇರುತ್ತೇನೆ,ಸಿದ್ದರಾಮಯ್ಯರಂತೆ ಪಕ್ಷಾಂತರಿ ನಾನಲ್ಲ’ : ಈಶ್ವರಪ್ಪ ಗುಡುಗು

ಇದನ್ನೂ ಓದಿ : ಮಗುವಿನ ಮಾತು ಕೇಳಿ ಕಣ್ಣೀರಿಟ್ಟ ಡಿಕೆಶಿ

ಈ ಎಲ್ಲ ಅಂಶವನ್ನು ಪರಿಗಣಿಸಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಕರ್ನಾಟಕದ ಮಟ್ಟಿಗೆ ಈ ಆಯ್ಕೆ ಮತ್ತೊಂದು ರಾಜಕೀಯ ಧ್ರುವೀಕರಣಕ್ಕೆ ಕಾರಣವಾದರೂ ಅಚ್ಚರಿಯೇನಿಲ್ಲ.

AICC President Kharge: Do you know the reasons for choosing a Dalit leader?!

Comments are closed.