World Vegetarian Day : ವಿಶ್ವ ಸಸ್ಯಹಾರಿ ದಿನಾಚರಣೆ : ಸಸ್ಯಾಹಾರದಿಂದ ಉತ್ತಮ ಆರೋಗ್ಯ

ಇಂದು (World Vegetarian Day)ವಿಶ್ವ ಸಸ್ಯಾಹಾರಿ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. 1978 ರಲ್ಲಿ ಅಂತರರಾಷ್ಟ್ರೀಯ ಸಸ್ಯಾಹಾರಿ ಸಂಸ್ಥೆಯು ಈ ದಿನವನ್ನು ಔಪಚಾರಿಕವಾಗಿ ನಿರ್ಣಯಿಸಿತ್ತು. ವಿಶ್ವ ದಿನಾಚರಣೆಯ ಮುಖ್ಯ ಉದ್ದೇಶ ಸಸ್ಯಹಾರವನ್ನು ಉತ್ತೇಜಿಸುವುದು ಮತ್ತು ಆರೋಗ್ಯವನ್ನು ಸುಧಾರಿಸುವುದಾಗಿದೆ. ಈ ದಿನಾಚರಣೆಯ ಅಂಗವಾಗಿ ಯುರೋಪ್‌, ಆಫ್ರಿಕಾ, ಚೀನಾ ಹಾಗೂ ನಾರ್ವೆಯಲ್ಲಿರುವ ಹೆಚ್ಚಿನ ಜನರು ಈ ದಿನ ಅವರು ಸೇವಿಸುವ ಮಾಂಸಹಾರದಿಂದ ದೂರವಿರುತ್ತಾರೆ. ಬದಲಿಗೆ ಈ ದಿನದಂದು ಕೇವಲ ಸಸ್ಯಹಾರವನ್ನು ಸೇವಿಸುತ್ತಾರೆ. ಆದರೆ ನಮ್ಮ ಭಾರತೀಯರಿಗೆ ಇದು ಕಷ್ಟದ ವಿಚಾರವಾಗಿರುವುದಿಲ್ಲ. ಯಾಕೆಂದರೆ ಇಲ್ಲಿರುವ ಹೆಚ್ಚಿನ ಜನರು ಸಸ್ಯಹಾರಿಗಳಾಗಿದ್ದು ಸಸ್ಯಾಹಾರವನ್ನು ಇಷ್ಟಪಟ್ಟು ಸೇವಿಸುತ್ತಾರೆ.

ವಿಶ್ವ ಸಸ್ಯಹಾರಿ ದಿನದ (World Vegetarian Day) ಹುಟ್ಟು :

1977 ಅಕ್ಟೋಬರ್‌ 1 ರಂದು ಯುಕೆ ಸಸ್ಯಾಹಾರಿ ಸೊಸೈಟಿ ಮೊಟ್ಟ ಮೊದಲ ಬಾರಿಗೆ ವಿಶ್ವ ಸಸ್ಯಾಹಾರಿ ದಿನವನ್ನು ಆಚರಣೆಗೆ ತಂದಿದೆ. ಆದರೆ ಸಸ್ಯಹಾರಿ ಸೊಸೈಟಿಯನ್ನು 1944ರಲ್ಲಿಯೇ ಸ್ಥಾಪಿಸಲಾಗಿದೆ. ಸಸ್ಯಹಾರಿ ಸೊಸೈಟಿಯ 50ನೇ ವಾರ್ಷಿಕೊತ್ಸವದ ನೆನಪಿಗಾಗಿ “ವೆಗಾನ್‌ ಸೊಸೈಟಿ” ಅಧ್ಯಕ್ಷರು ಪ್ರತಿ ವರ್ಷ ಅಕ್ಟೋಬರ್‌ 1 ರಂದು ಜನರಲ್ಲಿ ಸಸ್ಯಾಹಾರಿ ಆಹಾರದ ಮಹತ್ವ ಹಾಗೂ ಅದನ್ನು ಉತ್ತೇಜಿಸುವ ಸಲುವಾಗಿ “ಸಸ್ಯಾಹಾರಿ ದಿನ” ಆಚರಿಸುವಂತೆ ಘೋಷಣೆಯನ್ನು ಹೊರಡಿಸಿತು. 1951ರ ನಂತರದ ದಿನಗಳಲ್ಲಿ ಇದು ಸಸ್ಯಹಾರಿ ಚಳುವಳಿಯಾಗಿ ಕೂಡ ಮಾರ್ಪಟ್ಟಿತು.

ತರಕಾರಿ, ಧಾನ್ಯ, ದ್ವಿದಳ ಧಾನ್ಯಗಳು, ಹಣ್ಣುಗಳು, ಹಾಗೂ ಒಣಹಣ್ಣುಗಳ ರೂಪದಲ್ಲಿ ನಮಗೆ ಸಸ್ಯಾಹಾರಿ ಆಹಾರ ದೊರೆಯುತ್ತದೆ. ನಮ್ಮ ಹಿಂದೂ ಧರ್ಮದಲ್ಲಿ ಬರುವ ಕೆಲವೊಂದಷ್ಟು ಸಂಸ್ಕೃತಿಯಲ್ಲಿ ಸಸ್ಯಾಹಾರವು ಧರ್ಮದ ಅವಿಭಾಜ್ಯ ಅಂಗವಾಗಿದೆ. ಕೆಲವೊಂದು ಪಂಥಗಳಲ್ಲಿ ಮಾಂಸ ಹಾಗೂ ಪ್ರಾಣಿ ಉತ್ಪನ್ನಗಳನ್ನು ಸೇವಿಸುವುದೇ ಇಲ್ಲ. ಆದರೆ ಕೆಲವು ವರ್ಗದವರು ಹಾಲು, ಜೇನುತುಪ್ಪ ಹಾಗೂ ಕೋಳಿಮೊಟ್ಟೆಯನ್ನು ಬಳಸುತ್ತಾರೆ.

ಇದನ್ನೂ ಓದಿ : ಸರಿಯಾದ ನಿದ್ದೆಯಿಲ್ಲದೆ ದಿನಪೂರ್ತಿ ಆಲಸ್ಯವೇ? ಉತ್ತಮ ನಿದ್ದೆಗೆ ಹೀಗೆ ಮಾಡಿ

ಇದನ್ನೂ ಓದಿ : ಅಯೋಡಿನ್‌ ಕೊರತೆ ನಿವಾರಿಸುವ 5 ಸೂಪರ್‌ ಫುಡ್‌ಗಳು ಯಾವುದು ಗೊತ್ತಾ

ಇದನ್ನೂ ಓದಿ : ಕಿಡ್ನಿ ಸ್ಟೋನ್‌ಗೆ ಬಾಳೆ ದಿಂಡಿನ ಜ್ಯೂಸ್‌ ರಾಮಾಬಾಣ

ಸಸ್ಯಾಹಾರದಿಂದ ಆರೋಗ್ಯ ಲಾಭಗಳು:

ಇತ್ತೀಚಿಗಿನ ದಿನಗಳಲ್ಲಿ ಜನರು ಹೆಚ್ಚು ಹೆಚ್ಚು ಸಸ್ಯಹಾರವನ್ನು ಬಳಸುತ್ತಿದ್ದಾರೆ. ದೇಹದ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಸಸ್ಯಾಹಾರ ಸೇವನೆಯು ಉತ್ತಮವಾಗಿರುತ್ತದೆ. ಇದರಿಂದ ದೈಹಿಕ ಆರೋಗ್ಯದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಬಹುದಾಗಿದೆ. ಸಸ್ಯಾಹಾರಕ್ಕೆ ಸಂಬಂಧಪಟ್ಟ ದ್ವಿದಳ ಧಾನ್ಯ, ಕಾಳುಗಳು, ತರಕಾರಿ, ಇತ್ಯಾದಿಗಳು ಆರೋಗ್ಯಕ್ಕೆ ಉತ್ತಮ ಸಸ್ಯ ಪದಾರ್ಥಗಳಾಗಿವೆ. ಈ ತರಹದ ಸಸ್ಯಾಹಾರಗಳು ಉತ್ತಮ ಹೃದಯ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಹಾಗೆ ಸಕ್ಕರೆ ಕಾಯಿಲೆ ಮತ್ತು ತೂಕವನ್ನು ನಿಯಂತ್ರಣದಲ್ಲಿ ಇಡುತ್ತದೆ. ಸಸ್ಯಾಹಾರದಿಂದ ರಕ್ತದೊತ್ತಡ ಹಾಗೂ ಮೂಳೆಗಳನ್ನು ಸದೃಢಗೊಳಿಸುತ್ತದೆ. ಸಸ್ಯಾಹಾರವನ್ನು ಪ್ರತಿದಿನ ಸೇವನೆಯಿಂದ ಮಲಬದ್ಧತೆಯನ್ನು ಕೂಡ ನಿವಾರಿಸುತ್ತದೆ.

World Vegetarian Day Better health with a vegetarian diet

Comments are closed.