Kannada Bhavan in Goa :ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ತಗಾದೆ

ಗೋವಾ : Kannada Bhavan in Goa: ಹೆಚ್ಚಿನ ಕಡೆ ನೆರೆಯ ರಾಜ್ಯಗಳ ನಡುವೆ ನೆಲ, ಜಲ, ಭಾಷೆ ವಿಚಾರಗಳಿಗೆ ಕಿರಿಕ್ ಆಗುತ್ತಿರುತ್ತದೆ. ಇದಕ್ಕೆ ಕರ್ನಾಟಕವೂ ಕೂಡ ಹೊರತಾಗಿಲ್ಲ. ಕನ್ನಡ ಭಾಷೆ ವಿಚಾರದಲ್ಲಿ‌ ಮಹಾರಾಷ್ಟ್ರ ಆಗಾಗ ತಗಾದೆ ತೆಗೆಯುತ್ತಿರುತ್ತದೆ. ಇದೀಗ ಗೋವಾ ಸರ್ಕಾರದ ಸರದಿ. ಕರ್ನಾಟಕದ ನೆರೆಯ ರಾಜ್ಯ ಗೋವಾದಲ್ಲಿ ಕನ್ನಡ ಭವನ ನಿರ್ಮಾಣ ಮಾಡುವ ವಿಚಾರದಲ್ಲಿ ಕರ್ನಾಟಕ ಸರ್ಕಾರದ ಜೊತೆಗೆ ಗೋವಾ ಸರ್ಕಾರ ಮತ್ತೆ ಕಿರಿಕ್ ಶುರು ಮಾಡಿಕೊಂಡಿದೆ.

ನೆರೆಯ ರಾಜ್ಯ ಗೋವಾದಲ್ಲಿ ಉದ್ಯೋಗ, ವ್ಯವಹಾರದ ದೃಷ್ಟಿಯಿಂದ ಸಾಕಷ್ಟು ಮಂದಿ ಕನ್ನಡಿಗರು ಅಲ್ಲಿ ನೆಲೆಸಿದ್ದಾರೆ. ಹೀಗಾಗಿ ಗೋವಾದಲ್ಲಿ ಕನ್ನಡ ಭವನ ನಿರ್ಮಾಣ ಮಾಡಲು ಎರಡು ಎಕರೆ ಜಾಗ ಮುಂಜೂರ ಮಾಡುವಂತೆ ಗೋವಾ ಸಿಎಂಗೆ ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಪತ್ರ ಬರೆದಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ ಗೋವಾದ ಸಿಎಂ ಪ್ರಮೋದ ಸಾವಂತಗೆ ಪತ್ರ ಬರೆಯುತ್ತಿದ್ದಂತೆ ಇದೀಗ ಗೋವಾದಲ್ಲಿ ಕನ್ನಡ ಭವನ ನಿರ್ಮಾಣ ಮಾಡುವ ವಿಚಾರವಾಗಿ ಪರವಿರೋಧ ಚರ್ಚೆ ನಡೆಯುತ್ತಿದೆ.

ಕನ್ನಡ ಭವನ ನಿರ್ಮಾಣ ಮಾಡುವ ವಿಚಾರದಲ್ಲಿ ಗೋವಾದ ಕೆಲವು ಸಂಘಟನೆ, ವಿರೋಧ ಪಕ್ಷದವರು ತಗಾದೆ ತೆಗೆದಿದ್ದಾರೆ. ಕೆಲವು ನಾಗರಿಕ ಸಂಘಟನೆಗಳು, ಹಾಗೂ ವಿರೋಧ ಪಕ್ಷದ ನಾಯಕರು ಕನ್ನಡ ಭವನನ ನಿರ್ಮಾಣಕ್ಕೆ ಅನುಮತಿ, ಜಾಗ ನೀಡಲು ನಿರಾಕರಣೆ ಮಾಡುತ್ತಿದ್ದಾರೆ. ಕನ್ನಡ ಹಾಗೂ ಕನ್ನಡ ಸಂಸ್ಕೃತಿಯನ್ನು ಪ್ರಚಾರ ಮಾಡಿ ಗೋವಾ ಅಸ್ಮಿತೆಯ ಮೇಲೆ ಕರ್ನಾಟಕದವರು ದಾಳಿ ಮಾಡುತ್ತಿದ್ದಾರೆ ಅಂತಾ ವಿರೋಧ ಮಾಡಲು ಆರಂಭಿಸಿದ್ದಾರೆ.

ಗೋವಾದ ಪ್ರಾದೇಶಿಕ ಪಕ್ಷವಾಗಿರುವ ಆರ್ ಜಿಪಿ ಪಕ್ಷದ ಮನೋಜ ಪರಬ ವಿರೋಧ ಮಾಡುತ್ತಿರುವವರಲ್ಲಿ ಮೊದಲಿಗರಾಗಿದ್ದಾರೆ. ಆದ್ರೆ ಗೋವಾದಲ್ಲಿ ಅತೀ ಹೆಚ್ಚು ಕನ್ನಡಿಗರು ಇರುವ ವಾಸ್ಕೋ ವಿಧಾನ ಸಭಾ ಕ್ಷೇತ್ರದ ಶಾಸಕ ಕೃಷ್ಣ ಸಾಲ್ಕರ ಮಾತ್ರ ಕನ್ನಡ ಭವನ ನಿರ್ಮಾಣಕ್ಕೆ ಬೆಂಬಲ ನೀಡಿದ್ದಾರೆ.

ಬಸವರಾಜ ಬೊಮ್ಮಾಯಿ ಸರ್ಕಾರ ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕಾಗಿ ಹಿಂದಿನ ಬಜೆಟ್ ನಲ್ಲಿಯೇ 10 ಕೋಟಿ ಅನುಮಾನ ಮೀಸಲಿಟ್ಟಿತ್ತು. ಇತ್ತ ಕೊಂಕಣಿಯಲ್ಲಿ ಕನ್ನಡ ಭವನಕ್ಕೆ 3 ಕೋಟಿ ಮೀಸಲಿಡಲಾಗಿದೆ ಎಂದು ಸಿಎಂ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ಆದ್ರೆ ಈಗ ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಪರ ವಿರೋಧ ಚರ್ಚೆ ಆರಂಭವಾಗಿದೆ.

ಗೋವಾದ ಕೆಲ ಸ್ಥಳೀಯರು ಕನ್ನಡಿಗರ ಜೊತೆ ಕಿರಿಕ್ ಮಾಡುತ್ತಿರುವುದು ಇದು ಹೊಸತೇನಲ್ಲ. ಪದೆ ಪದೆ ಗೋವಾ ಕನ್ನಡಿಗರ ಮೇಲೆ ಗೋವಾದ ಕೆಲ ಸ್ಥಳಿಯರು ಕಿರಿಕ್ ಮಾಡುತ್ತಿದ್ದಾರೆ. ಕಳೆದ ಕೋವಿಡ್ ಸಂದರ್ಭದಲ್ಲಿಯೂ ಗೋವಾದಲ್ಲಿದ್ದ ಕನ್ನಡಿಗರಿಗೆ ಗೋವಾದ ಸ್ಥಳಿಯರು ಕಿರಿಕ್ ಮಾಡಿದ್ದರು. ಆ ವೇಳೆ ಗೋವಾದಲ್ಲಿದ್ದ ಕನ್ನಡಿಗರು ಅತಂತ್ರರಾಗಿದ್ದರು.

ಇದನ್ನು ಓದಿ : sanitary pad:ಉಚಿತ ಸ್ಯಾನಿಟರಿ ಪ್ಯಾಡ್​ ಕೇಳಿ ಅವಮಾನಕ್ಕೊಳಗಾಗಿದ್ದ ವಿದ್ಯಾರ್ಥಿನಿಗೆ ಇನ್ಮುಂದೆ ಉಚಿತ ಪ್ಯಾಡ್​,ಉಚಿತ ಶಿಕ್ಷಣ

ಇದನ್ನೂ ಓದಿ: Amit Mishra : “ಪ್ರೇಯಸಿ ಜೊತೆ ಡೇಟಿಂಗ್‌ಗೆ ಹೋಗ್ಬೇಕು, ₹300 ಕೊಡಿ” ಅಂದ ಫ್ಯಾನ್’ಗೆ ₹500 ಕೊಟ್ಟ ಕ್ರಿಕೆಟಿಗ ಅಮಿತ್ ಮಿಶ್ರಾ

Controversy over construction of Kannada Bhavan in Goa

Comments are closed.