Karkala MLA V Sunil Kumar : ಅಂದು ಸಾಮಾನ್ಯ ಪತ್ರಕರ್ತ. ಇಂದು ಬಿಜೆಪಿಯ ಪ್ರಭಾವಿ ನಾಯಕ. ಬಾಲ್ಯದಿಂದಲೇ ದೇಶ ಸೇವೆಯ ಕನಸು ಹೊತ್ತಿದ್ದ ಕಾರ್ಕಳದ ಶಾಸಕ ವಿ ಸುನೀಲ್ ಕುಮಾರ್ ಇಂದು ಫೈಯರ್ ಬ್ರ್ಯಾಂಡ್ ನಾಯಕರಾಗಿ ಬೆಳೆ ನಿಂತಿರುವುದೇ ಇತಿಹಾಸ. ಹಿಂದುತ್ವ, ಆರ್‌ಎಸ್‌ಎಸ್ ತತ್ವ ಸಿದ್ದಾಂತವನ್ನು ಮೈಗೂಡಿಸಿ ಕೊಂಡಿರುವ ವಾಸುದೇವ ಸುನೀಲ್ ಕುಮಾರ್ ಅದೇ ಹಾದಿಯಲ್ಲೇ ಮುನ್ನೆಡೆಯುತ್ತಿದ್ದಾರೆ. ಇದೇ ಕಾರಣದಿಂದಲೇ ಶಾಸಕ ವಿ. ಸುನಿಲ್ ಕುಮಾರ್ ಅವರಿಗೆ ಬಿಜೆಪಿಯಲ್ಲಿ ಅತ್ಯುನ್ನತ ಹುದ್ದೆಗಳು ಲಭಿಸುತ್ತಿದ್ದು, ಆರ್‌ಎಸ್‌ಎಸ್ ಹಾಗೂ ಬಿಜೆಪಿ ನಾಯಕರ ಮನ ಗೆದ್ದಿದ್ದಾರೆ.

ಹಿಂದುತ್ವ, ಆರ್‌ಎಸ್‌ಎಸ್ ಸಿದ್ದಾಂತ ಅನ್ನೋದು ಶಾಸಕ ವಿ. ಸುನೀಲ್ ಕುಮಾರ್ ಅವರಿಗೆ ಭಾಷಣದ ಸೊತ್ತಲ್ಲ. ಬದಲಾಗಿ ಬಾಲ್ಯದಿಂದಲೂ ತಮ್ಮಲ್ಲಿ ಅಳವಡಿಸಿಕೊಂಡಿರುವ ಸಿದ್ದಾಂತಗಳನ್ನು ಇಂದಿಗೂ ಚಾಚೂ ತಪ್ಪದೇ ಪಾಲಿಸುತ್ತಿದ್ದಾರೆ. ಹಿಂದುತ್ವದ ವಿಚಾರ ಬಂದಾಗ ಎಂದಿಗೂ ರಾಜಿ ಮಾಡಿಕೊಳ್ಳುವ ಮನಸ್ಥಿತಿ ಅವರಿಗಿಲ್ಲ. ದತ್ತಪೀಠ ವಿಚಾರದಲ್ಲಿ ಅವರು ನಡೆಸಿದ ಹೋರಾಟ ಅವರನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿತ್ತು.
ದತ್ತಪೀಠ ಹೋರಾಟ ಸೂತ್ರಧಾರ ವಿ. ಸುನಿಲ್ ಕುಮಾರ್
ದತ್ತಪೀಠ ವಿಚಾರದಲ್ಲಿ ಹಿಂದುತ್ವದ ಹೋರಾಟದ ರೂಪುರೇಷೆಗಳನ್ನು ಸಿದ್ದ ಪಡಿಸಿದ್ದು ಇದೇ ವಿ ಸುನೀಲ್ ಕುಮಾರ್. ಇಂದಿಗೂ ಚಿಕ್ಕಮಗಳೂರಲ್ಲಿ ಸುನೀಲ್ ಕುಮಾರ್ ಅವರನ್ನು ದತ್ತಪೀಠ ಹೋರಾಟದ ಸೂತ್ರಧಾರ ಎಂದೇ ಕರೆಯುತ್ತಾರೆ. ದತ್ತಪೀಠ ವಿಚಾರದಲ್ಲಿ ಶತಾಯಗತಾಯ ಹೋರಾಟ ನಡೆಸಿ ಹಿಂದೂಗಳನ್ನು ಸಂಘಟಿಸಿದ್ದರು. ಅಂದು ಹಿಂದುತ್ವದ ಹೋರಾಟದ ವಿಚಾರ ಬಂದಾಗ ಜನರನ್ನು ಒಗ್ಗೂಡಿಸುವ ತಾಕತ್ತು ಇದ್ದಿದ್ದು ಸುನೀಲ್ ಕುಮಾರ್‌ಗೆ ಮಾತ್ರ. 1997ರಲ್ಲಿ ನಡೆದ ದತ್ತಪೀಠದ ಹೋರಾಟ ಇಡೀ ರಾಷ್ಟ್ರವೇ ವಿ.ಸುನಿಲ್ ಕುಮಾರ್ ಅವರ ಕಡೆಗೆ ತಿರುಗಿ ನೋಡುವಂತೆ ಮಾಡಿತ್ತು.
ದತ್ತಪೀಠ ಹೋರಾಟದಿಂದಲೇ ಆರ್‌ಎಸ್‌ಎಸ್, ಹಿಂದೂ ಮುಖಂಡರು, ಬಿಜೆಪಿ ನಾಯಕರ ಮನ ಗೆದ್ದು ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ 2004ರಲ್ಲಿ ಸ್ಪರ್ಧೆ ಮಾಡಲು ಅವಕಾಶವನ್ನು ಪಡೆದುಕೊಂಡಿದ್ದರು. ಅಂದು ಕಾರ್ಕಳ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿತ್ತು. ಸೋಲೇ ಇಲ್ಲದಂತೆ ಮೆರೆಯುತ್ತಿದ್ದ ಗೋಪಾಲ ಭಂಡಾರಿ ಅವರಿಗೆ ಮೊದಲ ಬಾರಿಗೆ ಸೋಲಿನ ರುಚಿಯನ್ನು ತೋರಿಸಿದ್ದು ಕೂಡ ಇದೇ ಸುನೀಲ್ ಕುಮಾರ್.
ಇದನ್ನೂ ಓದಿ : ಸುನಿಲ್ ಕುಮಾರ್ ಆರ್ಭಟಕ್ಕೆ ನಲುಗಿದ ಸರಕಾರ : ವಿಪಕ್ಷ ನಾಯಕನಾಗಿ ಎಡವಿದ್ರಾ ಆರ್.ಅಶೋಕ್ ?
ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ವಿ. ಸುನೀಲ್ ಕುಮಾರ್ ಮೊದಲ ಬಾರಿಗೆ ಹಲವು ಜನ ಮೆಚ್ಚುಗೆಯ ಕಾರ್ಯವನ್ನು ಮಾಡಿದ್ದರು. ದತ್ತಪೀಠ ಹೋರಾಟದಿಂದಲೇ ರಾಷ್ಟ್ರಮಟ್ಟದ ನಾಯಕನಾಗಿ ಬೆಳೆದು ನಿಂತಿದ್ದ ಶಾಸಕ ಸುನಿಲ್ ಕುಮಾರ್ ಅವರು ವಿಧಾನಸೌದದ ಒಳಗಡೆಯೂ ದತ್ತಪೀಠ ವಿಚಾರವನ್ನು ಪ್ರಸ್ತಾಪಿಸಿ, ತಾವೊಬ್ಬ ಅಪ್ಪಟ ಹಿಂದೂ ಹೋರಾಟಗಾರ ಅನ್ನೋದನ್ನು ನಿರೂಪಿಸಿದ್ದರು.

ಅಂದಿನಿಂದ ಇಂದಿನ ವರೆಗೂ ದತ್ತಮಾಲಾಧಾರಿಯಾಗಿ ದತ್ತಾತ್ರೆಯರ ಸೇವೆಯನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಅಂದು ಸುನೀಲ್ ಕುಮಾರ್ ಅವರ ಸಂಘಟಿತ ಹೋರಾಟದಿಂದಲೇ ಇಂದಿಗೂ ಸಾವಿರಾರು ಮಂದಿ ದತ್ತಮಾಲಾಧಾರಿಗಳಾಗಿ ದತ್ತಜಯಂತಿಯ ಸಂದರ್ಭದಲ್ಲಿ ದತ್ತಪೀಠದಲ್ಲಿ ದತ್ತಾತ್ರೇಯ ಸ್ವಾಮಿಗಳ ದರ್ಶನವನ್ನು ಪಡೆಯುತ್ತಿದ್ದಾರೆ. ಹಿಂದುತ್ವದ ವಿಚಾರ ಬಂದಾಗ ಎಂದಿಗೂ ಸುನೀಲ್ ಕುಮಾರ್ ರಾಜಿ ಮಾಡಿಕೊಂಡಿಲ್ಲ.
ಆರ್‌ಎಸ್‌ಎಸ್ ವಿಚಾರಧಾರೆಗಳಿಂದಲೇ ಜನನಾಯಕರಾದ ಸುನೀಲ್ ಕುಮಾರ್
ಕೇವಲ ಅಧಿಕಾರ ಪಡೆಯುವ ಸುಲುವಾಗಿ ಸುನೀಲ್ ಕುಮಾರ್ ಆರ್‌ಎಸ್‌ಎಸ್, ಹಿಂದುತ್ವದ ಕಡೆಗೆ ವಾಲಿದವರಲ್ಲ ಶಾಲಾ ದಿನಗಳಿಂದಲೇ ದೇಶ ಪ್ರೇಮವನ್ನುಮೈಗೂಡಿಸಿಕೊಂಡವರು. ಕಾಲೇಜು ದಿನಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಮಾಣಿಕ ಕಾರ್ಯಕರ್ತನಾಗಿ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ ಪ್ರಮುಖ ನಾಯಕರಾಗಿ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ : ಲೋಕಸಭಾ ಚುನಾವಣೆ 2024: ತುಮಕೂರಿಗೆ ದೇವೇಗೌಡ್ರು, ಹಾಸನಕ್ಕೆ ಪ್ರಜ್ವಲ್, ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ !
ಬಾಲ್ಯದಲ್ಲಿ ಆರ್‌ಎಸ್‌ಎಸ್‌ನಿಂದ ಕಲಿತ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡಿದ್ದು, ಅಂತಹ ವಿಚಾರಧಾರೆಗಳ ವಿಚಾರದಲ್ಲಿ ಇಂದಿಗೂ ಸುನೀಲ್ ಕುಮಾರ್ ರಾಜಿ ಮಾಡಿಕೊಂಡಿಲ್ಲ. ಶಾಸಕರಾಗಿ, ಸಚಿವರಾಗಿ ಬೆಳೆದು ನಿಂತಿದ್ದರೂ ಕೂಡ ಸರಳತೆಯನ್ನು ಎಂದಿಗೂ ಮೆರೆತಿಲ್ಲ. ತಮ್ಮ ವಿರುದ್ದ ಆರೋಪಗಳು ಕೇಳಿ ಬಂದಾಗ, ಎಂದಿಗೂ ಪಲಾಯನಗೈದಿಲ್ಲ. ಬದಲಾಗಿ ಎಲ್ಲಾ ಆರೋಪಗಳನ್ನು ಸಮರ್ಥವಾಗಿ ಎದುರಿಸಿ ಶಾಸಕನ ಸ್ಥಾನಕ್ಕೆ ನ್ಯಾಯ ಒದಗಿಸಿದ್ದಾರೆ. ಇದೇ ಕಾರಣದಿಂದಲೇ ಕಾರ್ಕಳ ಕ್ಷೇತ್ರದಿಂದ ವಿ ಸುನೀಲ್ ಕುಮಾರ್ ಅವರು ಈ ಬಾರಿ ಪುನರಾಯ್ಕೆಯಾಗಿದ್ದಾರೆ.

ಪತ್ರಕರ್ತರಾಗಿದ್ದ ಸುನೀಲ್ ಕುಮಾರ್ ಶಾಸಕರಾಗಿದ್ದು ಹೇಗೆ ?
ಕಾರ್ಕಳದ ಎಂ ಕೆ ವಾಸುದೇವ ಹಾಗೂ ಕೆಪಿ ಪ್ರಮೋದ ಅವರ ಮಗನಾಗಿ ಜನಿಸಿದ ಸುನಿಲ್ ಕುಮಾರ್ ಕಾರ್ಕಳದಲ್ಲಿ 4 ನೇ ತರಗತಿ ವರೆಗೆ ಶಿಕ್ಷಣವನ್ನು ಪಡೆದು, ತಂದೆಯ ಜೊತೆಗೆ ಚಿಕ್ಕಮಗಳೂರಿಗೆ ಬಂದಿದ್ದರು. ನಗರದ ಬಸವನಹಳ್ಳಿ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವರೆಗೆ ಶಿಕ್ಷಣವನ್ನು ಪಡೆದು ಕೊಂಡಿದ್ದರು.
ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಶಿವಮೊಗ್ಗದಲ್ಲಿ ಪೂರೈಸಿದ ಸುನಿಲ್ ಕುಮಾರ್ ಅವರು ಚಿಕ್ಕಮಗಳೂರು ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪದವಿ ಶಿಕ್ಷಣವನ್ನು ಪಡೆದುಕೊಂಡಿದ್ದರು. ಕಾಲೇಜು ದಿನಗಳಿಂದಲೇ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡಿದ್ದರು. ಎಬಿವಿಪಿ ಸಂಘಟನೆಯಲ್ಲಿಯೂ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಪದವಿ ಶಿಕ್ಷಣದ ಬಳಿಕ ಎರಡು ವರ್ಷಗಳ ಕಾಲ ಜನಮಿತ್ರ ಪತ್ರಿಕೆಯಲ್ಲಿ ಪತ್ರಕರ್ತರಾಗಿ ಕೆಲಸ ಮಾಡಿದ್ದರು.
ಕಂಡಿದ್ದನ್ನು ಕಂಡ ಹಾಗೇ ಹೇಳುವ ತಾಕತ್ತು ಸುನಿಲ್ ಕುಮಾರ್ ಅವರಿಗೆ ಇದೆ. ಅವರೊಬ್ಬ ನಿಷ್ಠುರವಾದಿ, ಆದರೆ ಹಿರಿಯರಿಗೆ ಗೌರವ ಕೊಡುವ ವಿಚಾರದಲ್ಲಿ ಎತ್ತಿದ ಕೈ. ಹಿರಿಯರ ಸಲಹೆಯನ್ನು ಚಾಚೂ ತಪ್ಪದೇ ಪಾಲಿಸುತ್ತಾ, ಕಿರಿಯರನ್ನು ಸಂಘಟಿತರಾಗಿ ಮುನ್ನೆಡೆಸಿಕೊಂಡು ಹೋಗುವ ಸಾಮರ್ಥ್ಯವಿದೆ. ಇದೇ ಕಾರಣದಿಂದಲೇ ಅಂದು ದತ್ತಪೀಠ ಹೋರಾಟ ಯಶಸ್ವಿಯಾಗಿತ್ತು.

ಸದನದಲ್ಲಿ ಸುನೀಲ್ ಕುಮಾರ್ ಫೈಯರ್ ಬ್ರ್ಯಾಂಡ್ ನಾಯಕ
ಸುನಿಲ್ ಕುಮಾರ್ ಅವರು ಒಂದು ಕರೆ ನೀಡಿದ್ರೆ ಸಾಕು ಅಂದಿನಿಂದ ಇಂದಿನ ವರೆಗೂ ಜನ ಸೇರುತ್ತಾರೆ ಅನ್ನೋ ಮಾತು ಸಂಘ ಪರಿವಾರದಿಂದಲೇ ಕೇಳಿಬರುತ್ತಿದೆ. ಬಿ.ಎಸ್.ಯಡಿಯೂರಪ್ಪ ಅವರಂತಹ ನಾಯಕನ ಅನುಪಸ್ಥಿತಿ, ಪ್ರತಿಪಕ್ಷ ನಾಯಕ ಇಲ್ಲದ ಸಂದರ್ಭದಲ್ಲೂ ಸದನದ ಒಳಗೆ ಹಾಗೂ ಹೊರಗೆ ಕಾಂಗ್ರೆಸ್ ಪಕ್ಷವನ್ನು ಸಮರ್ಥವಾಗಿ ಎದುರಿಸಿದ್ದೂ ಕೂಡ ಸುನಿಲ್ ಕುಮಾರ್.
ಇದನ್ನೂ ಓದಿ : ನಟಿ ರಮ್ಯ Vs ಸಂಸದೆ ಸುಮಲತಾ Vs ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ನಡುವೆ ಫೈಟ್ : ಲೋಕಸಭಾ ವಾರ್ ಗೆ ಸಿದ್ಧವಾಗ್ತಿದೆ ಮಂಡ್ಯ
ಸದನದಲ್ಲಿ ಪ್ರತಿಪಕ್ಷ ನಾಯಕರು ಇದ್ದಾಗಲೂ ಕೂಡ ತಮ್ಮ ಪಕ್ಷವನ್ನು ಇಂದಿಗೂ ಸಮರ್ಥವಾಗಿ ಸಮರ್ಥಿಸಿಕೊಳ್ಳುವ ಮೂಲಕ ಬಿಜೆಪಿಯ ಹಿರಿಯ ನಾಯಕರು ಹಾಗೂ ಆರ್‌ಎಸ್‌ಎಸ್ ಮುಖಂಡರ ಮನ ಗೆದ್ದಿದ್ದಾರೆ. ಈ ಬಾರಿ ಪ್ರತಿಪಕ್ಷ ನಾಯಕನ ಹುದ್ದೆಗೂ ಕೂಡ ಸುನಿಲ್ ಕುಮಾರ್ ಅವರ ಹೆಸರು ಕೇಳಿಬಂದಿತ್ತು. ಅಂತಿಮ ಹಂತದಲ್ಲಿ ಆರ್.ಅಶೋಕ್ ಪಾಲಾಗಿತ್ತು. ಇದೀಗ ವಿ.ಸುನೀಲ್ ಕುಮಾರ್ ಅವರಿಗೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಬಿಜೆಪಿ ನೀಡಿದೆ.

ಆರ್‌ಎಸ್‌ಎಸ್, ಬಿಜೆಪಿ ಮನಗೆದ್ದ ಕಾರ್ಕಳ ಶಾಸಕ
ಶಾಸಕರಾಗಿ ವಿ ಸುನೀಲ್ ಕುಮಾರ್ ಅವರ ಕಾರ್ಯವೈಖರಿ. ಬಿಜೆಪಿ ನಾಯಕನಾಗಿ ಪಕ್ಷವನ್ನು ಮುನ್ನೆಡೆಸುತ್ತಿರುವ ರೀತಿ ಬಿಜೆಪಿ ಹಾಗೂ ಆರ್‌ಎಸ್‌ಎಸ್ ನಾಯಕರ ಮೆಚ್ಚುಗೆಗೆ ಪಾತ್ರವಾಗಿದೆ. ತಮ್ಮ ವಾಕ್ ಪ್ರಹಾರದಿಂದಲೇ ಸದನದಲ್ಲಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಕಾರ್ಯವನ್ನು ಸುನೀಲ್ ಕುಮಾರ್ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಇನ್ನೊಂದೆಡೆಯಲ್ಲಿ ಪಕ್ಷವನ್ನು ಸಮರ್ಥವಾಗಿ ಸಮರ್ಥಿಸುವ ಕೆಲಸವನ್ನು ಮಾಡುವ ಮೂಲಕ ಸುನೀಲ್ ಕುಮಾರ್ ಎಲ್ಲರ ಗಮನ ಸೆಳೆದಿದ್ದಾರೆ.
ಲೋಕಸಭಾ ಚುನಾವಣೆಯ ಜೊತೆಗೆ ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಮರ್ಥವಾಗಿ ಸಂಘಟಿಸುವ ಜವಾಬ್ದಾರಿ ಇದೀಗ ಶಾಸಕ ವಿ. ಸುನಿಲ್ ಕುಮಾರ್ ಅವರ ಹೆಗಲೇರಿದೆ. ಎಸ್. ಬಂಗಾರಪ್ಪ ಅವರ ನಂತರದಲ್ಲಿ ಬಿಲ್ಲವ ಸಮುದಾಯದ ಪ್ರಭಾವಿ ನಾಯಕರಾಗಿ ಸುನೀಲ್ ಕುಮಾರ್ ಗುರುತಿಸಿಕೊಂಡಿದ್ದಾರೆ. ತನ್ನ ಕ್ಷೇತ್ರದಲ್ಲಿ ಎಂದಿಗೂ ಸುನಿಲ್ ಕುಮಾರ್ ಜಾತಿರಾಜಕೀಯವನ್ನು ಮಾಡಿದವರಲ್ಲ.

ಎಲ್ಲಾ ಜಾತಿ, ಸಮುದಾಯಗಳಿಗೂ ಸಾಮಾಜಿಕ ನ್ಯಾಯ ಒದಗಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿದ್ದಾರೆ. ಜನರ ಭಾಷಣದಲ್ಲಿ ನೀತಿ ಪಾಠ ಹೇಳುವುದು ಮಾತ್ರವಲ್ಲ, ತಾನೂ ಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳಬೇಕು ಅನ್ನೋ ಉದ್ದೇಶದಿಂದಲೇ ಯುವಕರಿಗೆ ಸರಳ ವಿವಾಹಕ್ಕೆ ಪ್ರೇರೇಪಿಸಿದ್ದು ಮಾತ್ರವಲ್ಲ, ಸಾಮೂಹಿಕ ವಿವಾಹದಲ್ಲಿ ತಾವು ಮದುವೆಯಾಗುವ ಮೂಲಕ ಸಾವಿರಾರು ಯುವಕರಿಗೆ ಮಾದರಿಯಾಗಿದ್ದಾರೆ.
ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ, ಸರಕಾರದ ಮುಖ್ಯ ಸಚೇತಕರಾಗಿ, ಸಚಿವರಾಗಿ ಸೇವೆ ಸಲ್ಲಿಸಿರುವ ವಿ. ಸುನೀಲ್ ಕುಮಾರ್ ಅವರು, ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ದೊರಕಿಸಿದ್ದು ಮಾತ್ರವಲ್ಲ, ತಮ್ಮ ಮುತುವರ್ಜಿಯಿಂದಲೇ ಕಾರ್ಕಳವನ್ನು ಮಾದರಿ ಕ್ಷೇತ್ರವಾಗಿ ಬೆಳೆಸಿ ನಿಲ್ಲಿಸಿದ್ದಾರೆ.

ನಿರಂತರ ಹೋರಾಟ, ನ್ಯಾಯ ನಿಷ್ಠುರತೆ, ಕಠಿಣ ಪರಿಶ್ರಮ, ಅಪ್ಪಟ ದೇಶಪ್ರೇಮ, ಬೆದರಿಕೆಗಳಿಗೆ ಬೆದರದೇ ಮುನ್ನುಗ್ಗಿದ ಕಾರಣಕ್ಕೆ ಸುನೀಲ್ ಕುಮಾರ್ ಅವರು ಇಂದು ಬಿಜೆಪಿಯ ಪ್ರಭಾವಿ ನಾಯಕರಾಗಿ ಹೊರಹೊಮ್ಮಿದ್ದಾರೆ. ಮಾತ್ರವಲ್ಲ ಇಂದಿನ ಯುವಕ, ಯುವತಿಯರಿಗೆ ಅವರೊಬ್ಬ ಮಾದರಿ ರಾಜಕಾರಣಿ. ಮುಂದೊಂದು ದಿನ ರಾಜ್ಯ, ರಾಷ್ಟ್ರದ ಅತ್ಯುನ್ನತ ಹುದ್ದೇಗೇರಿದ್ದರೂ ಕೂಡ ಅಚ್ಚರಿಯಿಲ್ಲ.
An ordinary journalist then Fire Brand MLA: Karkala MLA V Sunil Kumar who was impressed by RSS, BJP