Rashmika Mandanna – Vijay Devarakonda : ಒಂದೇ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ- ವಿಜಯ ದೇವರಕೊಂಡ

“ಕಿರಿಕ್‌ ಪಾರ್ಟಿ” ಖ್ಯಾತಿಯ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ ದೇವರಕೊಂಡ (Rashmika Mandanna – Vijay Devarakonda)ಬಗ್ಗೆ ಸಾಕಷ್ಟು ವದಂತಿಗಳು ಹುಟ್ಟಿಕೊಂಡಿದೆ. ಗೀತಾ ಗೋವಿಂದಂ ಸಿನಿಮಾದ ನಂತರ ಇವರಿಬ್ಬರು ರಿಲೇಶನ್‌ಶಿಪ್‌ನಲ್ಲಿದ್ದಾರೆ ಎಂಬ ಒಂದಷ್ಟು ಅಂತೆ – ಕಂತೆಗಳು ಹರಿದಾಡಿದವು. ಆಮೇಲೆ ಇವರಿಬ್ಬರಲ್ಲಿ ಬ್ರೇಕಪ್‌ ಕೂಡ ಆಗಿದೆ ಎನ್ನುವ ಸುದ್ದಿಯೂ ಕೇಳಿ ಬಂದಿತ್ತು. ಇವೆಲ್ಲಕ್ಕೂ ಸ್ಪಷ್ಟನೆ ನೀಡುವಂತೆ ನಾವಿಬ್ಬರೂ ಒಳ್ಳೆಯ ಸ್ನೇಹಿತರು ಎಂದು ವಿಜಯ ದೇವರಕೊಂಡ ಹಲವಾರು ಬಾರಿ ಹೇಳಿಕೊಂಡಿದ್ದಾರೆ. ಆದರೆ ಈಗ ಇಬ್ಬರೂ ಒಂದೇ ವಿಮಾನ ನಿಲ್ದಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವುದರ ಮೂಲಕ ಮತ್ತೆ ವದಂತಿಗೆ ಗುರಿಯಾಗಿದ್ದಾರೆ.

ಇತ್ತೀಚಿಗೆ “ಲೈಗರ್” ಸಿನಿಮಾದ ಸೋಲಿನಿಂದ ವಿಜಯ್‌ ದೇವರಕೊಂಡ ಅವರು ಸಾಕಷ್ಟು ಬೇಸರಗೊಂಡಿದ್ದರು. ಲೈಗರ್‌ ಸಿನಿಮಾಕ್ಕೆ ನಿರ್ದೇಶಕ ಪುರಿ ಜಗನ್ನಾಥ್‌ ಆ್ಯಕ್ಷನ್ ಕಟ್‌ ಹೇಳಿದ್ದಾರೆ.ಈ ಸಿನಿಮಾದಲ್ಲಿ ಇವರ ಜೊತೆ ಬಾಲಿವುಡ್‌ ಅನನ್ಯಾ ಪಾಂಡೆ ತೆರೆ ಹಂಚಿಕೊಂಡಿದ್ದಾರೆ. ಈ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡ ವಿಜಯ ದೇವರಕೊಂಡ ಹಲವು ವರ್ಷ ಮುಡಿಪಿಟ್ಟಿದ್ದರು. ಆದರೆ ಅದರಿಂದ ಅವರಿಗೆ ಗೆಲುವು ಸಿಗದೇ ಇರುವುದು ಸಾಕಷ್ಟು ಬೇಸರವನ್ನು ಮೂಡಿಸಿತ್ತು. ಅದರ ನಂತರ ವಿಜಯ ದೇವರಕೊಂಡ ಅಷ್ಟೊಂದು ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿಲ್ಲ. ಆದರೆ ಇಂದು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ.

ಹಲವು ಬಾಲಿವುಡ್‌ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ಬಾಲಿವುಡ್ “ಗುಡ್‌ಬೈ” ಸಿನಿಮಾದ ಪ್ರಚಾರ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇಂದು (ಅಕ್ಟೋಬರ್‌ 7)”ಗುಡ್‌ಬೈ” ಸಿನಿಮಾ ರಿಲೀಸ್‌ ಆಗಿದೆ. ಈ ಸಿನಿಮಾದಲ್ಲಿ ರಶ್ಮಿಕಾ ಅಮಿತಾಬಾ ಬಚ್ಚನ್‌ ಜೊತೆ ನಟಿಸಿದ್ದಾರೆ.ಇಂದು ಸಿನಿಮಾದ ಟಿಕೆಟ್‌ ದರವನ್ನು 150 ರೂಪಾಯಿಗೆ ನಿಗದಿ ಮಾಡಿದ್ದಾರೂ ಕೂಡ ಜನರು ಬಹಳ ಸಂಖ್ಯೆಯಲ್ಲಿ ಥಿಯೇಟರ್‌ಗೆ ಮುಖ ಮಾಡಿಲ್ಲವಾಗಿದೆ. ಇಂದು ಸಿನಿಮಾ ಬಿಡುಗಡೆ ವೇಳೆಯಲ್ಲೇ ರಶ್ಮಿಕಾ ಮಂದಣ್ಣ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ : Priyanka chopra : ಇರಾನ್‌ ಹಿಜಾಬ್‌ ವಿವಾದ :ಮಹಿಳೆಯರಿಗೆ ಬೆಂಬಲ ನೀಡಿದ ಪ್ರಿಯಾಂಕ ಚೋಪ್ರಾ

ಇದನ್ನೂ ಓದಿ : Gandhadagudi : ಅಪ್ಪು ಅಭಿನಯದ “ಗಂಧದಗುಡಿ” ಟ್ರೇಲರ್‌ ರೀಲಿಸ್‌ : ದಿನಾಂಕ ಘೋಷಿಸಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌

ಇದನ್ನೂ ಓದಿ : Pavan Wadeyar : ಸೆಟ್ಟೇರಿತು ಪವನ್ ಒಡೆಯರ್ ಹಿಂದಿ ಸಿನಿಮಾ- ಚಿತ್ರಕ್ಕೆ ‘ನೋಟರಿ’ ಟೈಟಲ್

ಬಹುತೇಕವಾಗಿ (Rashmika Mandanna – Vijay Devarakonda) ಇಬ್ಬರು ಒಟ್ಟಿಗೆ ಸಿನಿಮಾರಂಗದಲ್ಲಿ ಕೆಲಸ ಪ್ರಾರಂಭಿಸಿದ್ದು, ಗೀತಾ ಗೋವಿಂದಂ ಹಾಗೂ ಡೀಯರ್‌ ಕ್ರಾಮೇಡ್‌ ಸಿನಿಮಾದಲ್ಲಿಯೂ ಒಟ್ಟಿಗೆ ನಟಿಸಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಸಿಂಪಲ್‌ ಉಡುಗೆಯಲ್ಲಿ ಇಬ್ಬರೂ ಕಾಣಿಸಿಕೊಂಡಿದ್ದು, ನೋಡುಗರ ಕಣ್ಣಿಗೆ ಇಬ್ಬರೂ ಒಟ್ಟಿಗೆ ಪ್ರಯಾಣಿಸುತ್ತಿದ್ದಾರಾ ? ಎನ್ನುವ ಪ್ರಶ್ನೆ ಮೂಡುವಂತಾಗಿದೆ. ಹಾಗೆ ಸಾಮಾಜಿಕವಾಗಿ ವಿಮಾನ ನಿಲ್ದಾಣದಲ್ಲಿರು ಪೋಟೋಸ್‌ ಸಖತ್‌ ವೈರಲ್‌ ಆಗಿದೆ.

Rashmika Mandanna and Vijaya Devarakonda were spotted together on the same flight

Comments are closed.