Audio released by Jarakiholi: ಡಿಕೆ ಶಿವಕುಮಾರ್ ಆಡಿಯೋ ರಿಲೀಸ್ ಮಾಡಿದ ರಮೇಶ್ ಜಾರಕಿಹೊಳಿ : ಆಡಿಯೋದಲ್ಲೇನಿದೆ ಗೊತ್ತಾ ?

ಬೆಂಗಳೂರು: (Audio released by Jarakiholi) ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ರಮೇಶ್‌ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿದ್ದು, ಈ ವೇಳೆ ಸಿಡಿ ಷಡ್ಯಂತ್ರದ ಹಿಂದಿರುವ ನಾಯಕ ಯಾರೆಂಬುದನ್ನು ತಿಳಿಸಿದ್ದರು. ಇದಲ್ಲದೇ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವಿರುದ್ದ ಆಡಿಯೋ ಬಾಂಬ್‌ ಸಿಡಿಸಿದ್ದಾರೆ.

ಇತ್ತೀಚೆಗಷ್ಟೇ ಸುದ್ದಿಗೋಷ್ಟಿ ನಡೆಸಿದ್ದ ರಮೇಶ್‌ ಜಾರಕಿಹೊಳಿ ಅವರು ಸಿಡಿ ಷಡ್ಯಂತರದ ಹಿಂದೆ ನಾಯಕರೊಬ್ಬರ ಕೈವಾಡವಿರುವುದರ ಬಗ್ಗೆ ಹೇಳಿದ್ದು, ತನ್ನ ಆಪ್ತ ಸ್ನೇಹಿತ ಅಂತ ಹೇಳುವುದುರ ಮೂಲಕ ಷಡ್ಯಂತರ ಮಾಡಿರುವ ಬಗ್ಗೆ ಮಾತನಾಡಿದ್ದಾರೆ ಎಂದು ತಿಳಿಸಿದ್ದರು. ಸದ್ಯ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ತಮ್ಮ ವಿರುದ್ದ ಪ್ರಯೋಗಿಸಲಾದ ಸಿಡಿ ಷಡ್ಯಂತ್ರವನ್ನು ವಿರೋಧಿಗಳಿಗೆ ತಿರುಗು ಬಾಣವಾಗಿ ಬಳಕೆ ಮಾಡಲು ರಮೇಶ್‌ ಜಾರಕಿಹೊಳಿ ಸಿದ್ದತೆ ನಡೆಸಿದ್ದು, ಆಡಿಯೋ ಬಾಂಬ್‌ ಸಿಡಿಸಿದ್ದಾರೆ.

ಇಂದು ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಮೇಶ್‌ ಜಾರಕಿಹೊಳಿ ತಮ್ಮ ವಿರುದ್ದ ನಡೆದ ಸಿಡಿ ಷಡ್ಯಂತ್ರದ ಬಗ್ಗೆ ಮಾತನಾಡಿದ್ದರು. ಅಲ್ಲದೇ ಡಿಕೆ ಶಿವಕುಮಾರ್‌ ವಿರುದ್ದ ತಮ್ಮಲ್ಲಿದ್ದ ಆಡಿಯೋವನ್ನು ರಿಲೀಸ್‌ ಮಾಡಿದ್ದಾರೆ. ಇದೀಗ ಆ ಆಡಿಯೋದಲ್ಲಿ ಏನಿದೆ ಎಂಬ ಎಲ್ಲರ ಕುತೂಹಲಕ್ಕೆ ಉತ್ತರ ದೊರೆತಿದ್ದು, “ನನಗೆ ದುಬೈ, ಲಂಡನ್‌, ಮುಂಬೈನಲ್ಲಿ ಫ್ಲಾಟ್‌ ಇದೆ. ನಮ್ಮ ಮನೆಗೆ ರೈಡ್‌ ಆದಾಗ ನಲವತ್ತೈದು ಕೋಟಿ ರೂ. ಸೀಜ್‌ ಆಗಿತ್ತು” ಎಂದು ಜಾರಕಿಹೊಳಿ ಬಳಿ ಮಾತನಾಡಿರುವುದು ಈ ಹದಿನೆಂಟು ಸೆಕೆಂಡ್‌ ನ ಆಡಿಯೋದಲ್ಲಿದ್ದು, ಇದು ಡಿಕೆಶಿ ಅವರದ್ದೇ ಎಂದು ಜಾರಕಿಹೊಳಿ ಹೇಳಿದ್ದಾರೆ.

ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಿಕೆಶಿ ವಿರುದ್ದ ರಮೇಶ್‌ ಜಾರಕಿಹೊಳಿ ಆಡಿಯೋ ಅಸ್ತ್ರ ಪ್ರಯೋಗಿಸಿದ್ದು, ಮುಂದಿನ ದಿನಗಳಲ್ಲಿ ರಾಜಕೀಯ ರಣರಂಗದಲ್ಲಿ ಇದು ಯಾವ ಹಂತಕ್ಕೆ ತಲುಪಲಿದೆ ಎಂದು ಕಾದುನೋಡಬೇಕಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ “ನನ್ನ ಬಳಿ ನೂರ ಇಪ್ಪತ್ತೆಂಟು ಸಾಕ್ಷಿಗಳಿಗೆ, ಆದರೆ ಯಾವುದನ್ನು ಬಿಡುಗಡೆ ಮಾಡುವುದಿಲ್ಲ. ಎಲ್ಲವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೇಳುತ್ತೇನೆ.” ಎಂದು ಡಿಕೆಶಿ ವಿರುದ್ದ ಸಾಹುಕಾರ ಕಿಡಿ ಕಾರಿದ್ದಾರೆ.

ಇದನ್ನೂ ಓದಿ : ಸಿಎಂ ಸ್ಥಾನ ಉಳಿಸಿಕೊಳ್ಳಲು ಬೊಮ್ಮಾಯಿ ಕಸರತ್ತು: ಸ್ವಕ್ಷೇತ್ರಕ್ಕೆ ಅನುದಾನ, ಅಧಿಕಾರಿಗಳಿಗೆ ಹೊಣೆ

ಇದನ್ನೂ ಓದಿ : Ramesh jarakiholi-DK Shivkumar: “ನನ್ನ ಡಿಕೆಶಿ ಸಂಬಂಧ ಹಾಳಾಗಲು ಬೆಳಗಾವಿ ಗ್ರಾಮೀಣ ಶಾಸಕಿ ಕಾರಣ” : ಜಾರಕಿಹೊಳಿ

Audio released by Jarakiholi: Audio released by DK Shivakumar Ramesh Jarakiholi: Do you know what is in the audio?

Comments are closed.