ಸಿಎಂ ಸ್ಥಾನ ಉಳಿಸಿಕೊಳ್ಳಲು ಬೊಮ್ಮಾಯಿ ಕಸರತ್ತು: ಸ್ವಕ್ಷೇತ್ರಕ್ಕೆ ಅನುದಾನ, ಅಧಿಕಾರಿಗಳಿಗೆ ಹೊಣೆ

ಶಿಗ್ಗಾಂವಿ : ಗೆಲುವಿನ ಲೆಕ್ಕಾಚಾರದಲ್ಲಿರೋ ಜೆಡಿಎಸ್ ಹಾಗೂ ಬಿಜೆಪಿ ಹಣಿಯಲು ಸಿದ್ಧತೆ ನಡೆಸಿರೋ ಕಾಂಗ್ರೆಸ್ ನಡುವೆ ಬಿಜೆಪಿ ಗೆಲುವು (Congress V/S JDS V/S BJP leaders) ಸುಲಭವಿಲ್ಲ. ಅಷ್ಟೇ ಅಲ್ಲ ಅದೃಷ್ಟ ಖುಲಾಯಿಸಿ ಮುಖ್ಯಮಂತ್ರಿ ಪಟ್ಟಕ್ಕೇರಿದ ಸಿ.ಎಂ.ಬೊಮ್ಮಾಯಿ ಮುಂದಿನ ಮುಖ್ಯಮಂತ್ರಿ ಹುದ್ದೆಯ ಹಾದಿಯೂ ಸರಳವಾಗಿಲ್ಲ. ಹೀಗಾಗಿ ಸಿಎಂ ಬೊಮ್ಮಾಯಿ ಸಿಎಂ ಆಗೋದರ ಜೊತೆಗೆ ಶಾಸಕ ಸ್ಥಾನವನ್ನು ಉಳಿಸಿಕೊಳ್ಳೋಕೆ ಸ್ವಕ್ಷೇತ್ರಕ್ಕೆ ಹಿಂದೆಂದಿಗಿಂತ ಹೆಚ್ಚು ಗಮನ ನೀಡಿ ಚುನಾವಣಾ ಸಿದ್ಧತೆ ಆರಂಭಿಸಿದ್ದಾರೆ.

ಸಿಎಂ ಬಸವರಾಜ್ ಬೊಮ್ಮಾಯಿ ಸ್ವಕ್ಷೇತ್ರ ಶಿಗ್ಗಾಂವಿ ಈಗ ಕಾಂಗ್ರೆಸ್ ಕಣ್ಣಿಗೆ ಬಿದ್ದಿದೆ. ಸಿಎಂ ರನ್ನು ಸ್ವಕ್ಷೇತ್ರದಲ್ಲೇ ಸೋಲಿಸಲು ಕಾಂಗ್ರೆಸ್ ತಂತ್ರ ರೂಪಿಸುತ್ತಿದೆ. ಪಂಚಮಶಾಲಿ ಅಭ್ಯರ್ಥಿ, ಜಾತಿ ಲೆಕ್ಕಾಚಾರ, ಸಿಎಂ ವೈಫಲ್ಯದ ಪ್ರದರ್ಶನ ಹೀಗೆ ನೊರೆಂಟು ದಾರಿ ಅನುಸರಿಸುತ್ತಿದೆ. ಈ ಮಧ್ಯೆ ಕಾಂಗ್ರೆಸ್ ನಲ್ಲಿ ಸಿಎಂ ಬೊಮ್ಮಾಯಿ ಸ್ವಕ್ಷೇತ್ರದಲ್ಲಿ ನಿಲ್ಲಲು ಆಕಾಂಕ್ಷಿಗಳ ದಂಡೇ ಇದೆ. ಹುಬ್ಬಳ್ಳಿಯ ವಿನಯ್ ಕುಲಕರ್ಣಿಯಿ‌ಂದ ಆರಂಭಿಸಿ ಹಲವರ ಹೆಸರು ಕೇಳಿ ಬಂದಿದೆ.

ಹೀಗಾಗಿ ಸಿಎಂ ಕೂಡ ಈ ಎಲ್ಲ ಚಾಲೆಂಜ್ ಮಧ್ಯೆ ಸ್ವಕ್ಷೇತ್ರದಲ್ಲಿ ಮತ್ತೊಮ್ಮೆ ಗೆದ್ದು ಬೀಗಲು ಸಿದ್ಧತೆ ಆರಂಭಿಸಿದ್ದಾರೆ.ಕಾಂಗ್ರೆಸ್ ಎಷ್ಟೇ ಅಪಪ್ರಚಾರ ಮಾಡಿದರೂ ಬೊಮ್ಮಾಯಿ ಬಿಜೆಪಿ ಹೈಕಮಾಂಡ್ ಪಾಲಿಗೆ ಯಶಸ್ವಿ ಮುಖ್ಯಮಂತ್ರಿಯಾಗಿಯೇ ಉಳಿದಿದ್ದಾರೆ. ಹೀಗಾಗಿ ಮತ್ತೊಮ್ಮೆ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಬೊಮ್ಮಾಯಿ ಮತ್ತೆ ಸಿಎಂ ಗದಿಗೆ ಏರೋದು ಬಹುತೇಕ ಖಚಿತ.

ಇದಕ್ಕಾಗಿ ಸ್ವಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸಲು ಬೊಮ್ಮಾಯಿ ಶಿಗ್ಗಾಂವಿಗೆ ಅನುದಾನದ ಹೊಳೆ ಹರಿಸಿದ್ದಾರೆ. ಕ್ಷೇತ್ರದ ಜನರ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದು, ತಕ್ಷಣ ಜನರಿಗೆ ಆದ್ಯತೆ ಮೇರೆಗೆ ಕೆಲಸ ಮಾಡಿಕೊಡಬೇಕೆಂದು ಸೂಚಿಸಿದ್ದಾರೆ. ಮಾತ್ರವಲ್ಲದೇ ಕ್ಷೇತ್ರದ ಮೇಲೆ ವಿಶೇಷ ನಿಗಾ ವಹಿಸಲು ಸಿಎಂ ವಿಶೇಷಾಧಿಕಾರಿ ರಮೇಶ್ ಕೋನರೆಡ್ಡಿಯವರನ್ನು ನೇಮಿಸಿದ್ದಾರೆ.

ಹಾವೇರಿ ಜಿಲ್ಲಾಧಿಕಾರಿಗಳಿಗೂ ಸಿಎಂ ಪರೋಕ್ಷವಾಗಿ ಶಿಗ್ಗಾಂವಿ ಕ್ಷೇತ್ರದ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಸರಿಪಡಿಸಲು ಮೌಖಿಕ ಆದೇಶ ನೀಡಿದ್ದಾರಂತೆ. ಅಲ್ಲದೇ ಪಂಚಮ ಶಾಲಿ ಸಮುದಾಯ ಸೆಳೆಯಲು ಸಮುದಾಯ ಭವನ, ಹಾಸ್ಟೆಲ್ ಕೂಡ ಕಟ್ಟಿಸಿದ್ದಾರೆ.ಶಿಗ್ಗಾಂವಿ‌ ಮತ್ತು ಸವಣೂರಿನ ಕೆರೆಗಳಿಗೆ ಏತ ನೀರಾವರಿ ಮೂಲಕ ನೀರು ತುಂಬಿಸುವುದಕ್ಕೂ ಸಿಎಂ ಈಗಾಗಲೇ ಮುತುವರ್ಜಿ ವಹಿಸಿದ್ದಾರಂತೆ.

ಇದನ್ನೂ ಓದಿ : Ramesh jarakiholi-DK Shivkumar: “ನನ್ನ ಡಿಕೆಶಿ ಸಂಬಂಧ ಹಾಳಾಗಲು ಬೆಳಗಾವಿ ಗ್ರಾಮೀಣ ಶಾಸಕಿ ಕಾರಣ” : ಜಾರಕಿಹೊಳಿ

ಇದನ್ನೂ ಓದಿ : Ramesh jarakiholi press meet: ರಮೇಶ್‌ ಜಾರಕಿಹೊಳಿ ಮಹತ್ವದ ಸುದ್ದಿಗೋಷ್ಠಿ: ಮಸಲತ್ತು ಮಾಡಿದ ನಾಯಕನ ರಿವಿಲ್‌ ಮಾಡಿದ ಸಾಹುಕಾರ

ಇದನ್ನೂ ಓದಿ : ಪಿ‌ಎಂ ಮೋದಿ ಕುರಿತಾದ ಸಾಕ್ಷ್ಯಚಿತ್ರದ ಬಗ್ಗೆ ಸತ್ಯ ಬಿಚ್ಚಿಟ್ಟ ಸಿಎಂ ಬೊಮ್ಮಾಯಿ

ಸಿಎಂ ಹುಟ್ಟುಹಬ್ಬವನ್ನು ನೆಪವಾಗಿಟ್ಟುಕೊಂಡು ಸಾಮೂಹಿಕ ಉಚಿತ ವಿವಾಹ ಹಾಗೂ ಶಿವರಾತ್ರಿ ವೇಳೆಗೆ ಬಾಗಿನ ಅರ್ಪಣೆಯಂತಹ ಆಚರಣೆಗಳಿಗೂ ಸಿಎಂ ಬೊಮ್ಮಾಯಿ ನಿರ್ಧರಿಸಿದ್ದಾರಂತೆ. ಒಟ್ಟಿನಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಂಚ ರತ್ನ ಯಾತ್ರೆ ಬಳಿಕ ಈಗ ಬಿಜೆಪಿ ನಾಯಕರು ತಮ್ಮ ಚುನಾವಣೆಯ ಭವಿಷ್ಯದ ಬಗ್ಗೆ ಹಿಂದೆಂದಿಗಿಂತ ಹೆಚ್ಚು ಆತಂಕಿತರಾಗಿರೋದಂತು ನಿಜ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಲೇವಡಿ ಮಾಡ್ತಿದೆ. ಆದರೂ ಸಿಎಂ ಮಾತ್ರ ಕ್ಷೇತ್ರ ಭದ್ರತೆಗೆ ಹೊಸ ಪ್ಲ್ಯಾನ್ ಮಾಡ್ತಿದ್ದಾರೆ.

Congress V/S JDS V/S BJP leaders: Bommai exercise to retain CM position: Grants to Swakshetra, accountability to officials

Comments are closed.