Incharge Ministers fight : ಮಳೆ‌ ನಡುವೆ ಮತ್ತೆ ಉಸ್ತುವಾರಿ ಫೈಟ್ : ಬೆಂಗಳೂರಿನ ಹೊಣೆ ಯಾರಿಗೆ ನೀಡ್ತಾರೆ ಸಿಎಂ

ಬೆಂಗಳೂರು : ಒಂದೆಡೆ ರಾಜ್ಯದಾದ್ಯಂತ ಮಾನ್ಸೂನ್ ಮಳೆ ಅಬ್ಬರಿಸುತ್ತಿದ್ದರೇ ಮೊದಲ ಮಳೆಗೆ ಸಿಲಿಕಾನ್ ಸಿಟಿ ಬೆಂಗಳೂರು ತತ್ತರಿಸಿ ಹೋಗಿದೆ. ಸಾಲು ಸಾಲು ಮರಗಳು ಧರೆಗುರುಳಿದ್ದರೇ, ಇನ್ನೊಂದೆಡೆ ರಸ್ತೆಗಳು ಗುಂಡಿಗಳಾಗಿ, ಮನೆಗಳಿಗೆ ನೀರು ನುಗ್ಗಿ ಮಹಾಮಳೆಗೆ ಬೆಂಗಳೂರು ಅಕ್ಷರಷಃ ನಲುಗಿದೆ. ಆದರೆ ಮಹಾನಗರದ ಜನರ ಸಂಕಷ್ಟ ಕೇಳೋಕೆ ಉಸ್ತುವಾರಿ ಸಚಿವರೇ (Incharge Ministers fight ) ಇಲ್ಲದಂತಾಗಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಿಎಂ ಮೇಲೆ‌ ಒತ್ತಡ ಹೇರಲು ಆರಂಭಿಸಿದ್ದಾರೆ.

ಹೌದು, ಬೆಂಗಳೂರಿನಲ್ಲಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಆದರೆ ಜನರ ಸಂಕಷ್ಟ ಕೇಳಿ ಸ್ಪಂದಿಸೋಕೆ ಉಸ್ತುವಾರಿ ಸಚಿವರೇ ಇಲ್ಲ. ಬೆಂಗಳೂರು ಉಸ್ತುವಾರಿಯನ್ನು ಸಿಎಂ ಬೊಮ್ಮಾಯಿ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಹೀಗಾಗಿ ಬೆಂಗಳೂರಿನ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕೆ ಈಗ ಬೆಂಗಳೂರು ಉಸ್ತು ವಾರಿಯನ್ನು ಯಾವುದಾದರೂ ಒಬ್ಬ ಶಾಸಕರಿಗೆ ನೀಡುವಂತೆ ಸಿಎಂಗೆ ಒತ್ತಡ ಹೇರಲಾರಂಭಿಸಿದ್ದಾರಂತೆ.

ಯಾರಾದರೂ ಸರಿ ಬೆಂಗಳೂರಿಗೆ ಉಸ್ತುವಾರಿ ಸಚಿವರನ್ನು (Incharge Ministers fight) ನೇಮಕ ಮಾಡುವಂತೆ ಬಿಜೆಪಿ ಶಾಸಕರು ಆಗ್ರಹಿಸಿದ್ದು, ಬೆಂಗಳೂರು ಮಳೆ ಅನಾಹುತ ಹಿನ್ನೆಲೆ ಬಿಬಿಎಂಪಿ ವಿರುದ್ಧ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ. ಸರ್ಕಾರದ ವಿರುದ್ಧ ಜನಾಭಿಪ್ರಾಯ ಮೂಡುತ್ತಿದೆ. ಯಾರಿಗಾದರೂ ಜವಾಬ್ದಾರಿ ನೀಡಿದರೆ ಸಮಸ್ಯೆಗಳು ಒಂದಷ್ಟು ಪರಿಹಾರ ಆಗುತ್ತದೆ ಎಂದು ಶಾಸಕರು ಸಿಎಂಗೆ ಮನವರಿಕೆ ಮಾಡಿಸುತ್ತಿದ್ದಾರಂತೆ.

ಅಲ್ಲದೇ ಸಿಎಂ ನೀವೇ ಉಸ್ತುವಾರಿ ಆಗಿರುವುದರಿಂದ ಸಮಯ ನಿಮಗೆ ಸಮಯ‌ ಸಾಲುತ್ತಿಲ್ಲ. ಅನಾಹುತಗಳು ನಡೆದಾಗ ತಕ್ಷಣ ಸ್ಥಳಕ್ಕೆ ತೆರಳಲು ಸಾಧ್ಯವಿಲ್ಲ. ಮೇಜರ್ ಘಟನೆಗಳು ನಡೆದಾಗ ತಕ್ಷಣ ಸರಕಾರದ ಪರವಾಗಿ ಮಾತನಾಡುವವರು, ಸರ್ಕಾರದ ಪರವಾಗಿ ಹೇಳಿಕೆ ನೀಡುವವರು ಬೇಕು. ಈ ಕಾರಣಕ್ಕಾಗಿ ಯಾರನ್ನಾದರೂ ಸರಿ ಒಬ್ಬರನ್ನು ಉಸ್ತುವಾರಿ ಸಚಿವರನ್ನಾಗಿ ನೇಮಿಸಿ ಎಂದು ಬೆಂಗಳೂರು ಬಿಜೆಪಿ ಶಾಸಕರು ಸಿಎಂಗೆ ದುಂಬಾಲು ಬಿದ್ದಿದ್ದಾರಂತೆ.

ಇನ್ನು ಒಂದೆಡೆ ಶಾಸಕರು ಉಸ್ತುವಾರಿ ನೇಮಿಸುವಂತೆ ದುಂಬಾಲು ಬಿದ್ದಿದ್ದರೇ ಇನ್ನೊಂದೆಡೆ ಉಸ್ತುವಾರಿ ಸಚಿವರಾಗಲು ಬೆಂಗಳೂರಿನ ಸಚಿವರು ಪೈಪೋಟಿ ಆರಂಭಿಸಿದ್ದಾರಂತೆ. ಸಚಿವರಾದ ಡಾ ಅಶ್ವತ್ಥ ನಾರಾಯಣ, ವಿ ಸೋಮಣ್ಣ, ಆರ್ ಅಶೋಕ್, ಮುನಿರತ್ನ, ಎಸ್ ಟಿ ಸೋಮಶೇಖರ್ ಉಸ್ತುವಾರಿಗಾಗಿ ಪೈಪೋಟಿಗಿಳಿದಿದ್ದು ಯಾರಿಗೇ ಸಚಿವ ಸ್ಥಾನ ನೀಡಿದರೂ ಸಮಸ್ಯೆ ತಪ್ಪಿದ್ದಲ್ಲ. ಯಾರಿಗೂ ನೀಡಿದರೂ ಉಳಿದ ಸಚಿವರು, ಶಾಸಕರು ಮುನಿಸಿಕೊಳ್ಳೋದು ಗ್ಯಾರಂಟಿ. ಅದೇ ಕಾರಣಕ್ಕೆ ಸಿಎಂ ಉಸ್ತುವಾರಿ ನೇಮಿಸಿದೇ ಸುಮ್ಮನಾಗಿದ್ದರು. ಈಗ ಮಳೆ ಅವಾಂತರದ ನಡುವೆ ಉಸ್ತುವಾರಿ ನೇಮಕ ಅನಿವಾರ್ಯವಾಗಿದ್ದು, ಇದಕ್ಕೆ ಸಿಎಂ ಹೇಗೆ ಸ್ಪಂದಿಸುತ್ತಾರೆ ಅನ್ನೋದು ಸದ್ಯದ ಕುತೂಹಲ.

ಇದನ್ನೂ ಓದಿ : ಮತ್ತೊಮ್ಮೆ ಸಿಎಂ ಸ್ಥಾನಕ್ಕೇರಲು ಎಚ್.ಡಿ.ಕುಮಾರಸ್ವಾಮಿ ಸರ್ಕಸ್ : ದೇವಮೂಲೆಗಾಗಿ ಮಾಗಡಿಗೆ ಶಿಫ್ಟ್‌

ಇದನ್ನೂ ಓದಿ : ಶಾಸಕರು ಗೋಣಿಚೀಲದಲ್ಲಿ ಹಣ ತರ್ತಾರೆ ! ಹರೀಶ್‌ ಪೂಂಜಾಗೆ ಮುಳುವಾಗುತ್ತಾ ಇಡಿ(ED)ಯ ಪಿಎಂಎಲ್‌ಎ ಕಾಯ್ಡೆ ?

Bangalore Incharge Ministers fight

Comments are closed.