Navjot Singh Sidhu Surrender : ನವಜೋತ್ ಸಿಂಗ್ ಸಿಧು 1 ವರ್ಷ ಜೈಲು : ನ್ಯಾಯಾಲಯಕ್ಕೆ ಶರಣಾದ ಮಾಜಿ ಕ್ರಿಕೆಟಿಗ

ನವದೆಹಲಿ : 34 ವರ್ಷಗಳ ಹಿಂದೆ ನಡೆದಿದ್ದ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ, ಕಾಂಗ್ರೆಸ್‌ ಹಿರಿಯ ನಾಯಕ ನವಜೋತ್‌ ಸಿಂಗ್‌ ಸಿಧುಗೆ ನ್ಯಾಯಾಲಯ ಒಂದು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ. ಈ ಹಿನ್ನೆಲೆಯಲ್ಲಿ ಪಂಜಾಬ್‌ನ ಪಟಿಯಾಲ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ ನವಜೋತ್ ಸಿಧು ಪರ ಹಾಜರಾದ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರಿಗೆ ನ್ಯಾಯಮೂರ್ತಿ ಎಎಂ ಖಾನ್ವಿಲ್ಕರ್ ಅವರು ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರನ್ನು ಸಂಪರ್ಕಿಸಲು ಹೇಳಿದರು. ಕಾನೂನಿನ ಘನತೆಗೆ ಶರಣಾಗುತ್ತೇನೆ ಎಂದು ಆದೇಶದ ನಂತರ ಸಿಧು ನಿನ್ನೆ ಟ್ವೀಟ್ ಮಾಡಿದ್ದರು. ಇಂದು ಮುಂಜಾನೆ, ಸಿಧು ಆರೋಗ್ಯದ ಆಧಾರದ ಮೇಲೆ ಶರಣಾಗಲು ಇನ್ನೂ ಕೆಲವು ವಾರಗಳ ಕಾಲಾವಕಾಶ ಕೋರಿದ್ದರು. ಆದರೆ ಅವರು ಪಟಿಯಾಲದ ನ್ಯಾಯಾಲಯದಲ್ಲಿ ಶರಣಾಗಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

1988 ರ ರಸ್ತೆಯಲ್ಲಿ ನಡೆದಿದ್ದ ದಾಂಧಲೆ ಪ್ರಕರಣದಲ್ಲಿ ಸಿಧುಗೆ ಸುಪ್ರೀಂ ಕೋರ್ಟ್ ಒಂದು ವರ್ಷದ ಕಠಿಣ ಜೈಲು ಶಿಕ್ಷೆ ವಿಧಿಸಿತ್ತು. ಸಿಧು ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಪರ ವಾದ ಮಂಡಿಸಿದ್ದಾರೆ. 2018 ರಲ್ಲಿ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 65 ವರ್ಷದ ಗುರ್ನಾಮ್ ಸಿಂಗ್ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಷಕರು ಮರು ವಿಚಾರಣೆಗೆ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು. ಇದೀಗ ಪ್ರಕರಣದ ವಿಚಾರಣೆಯನ್ನು ನಡೆಸಿರುವ ನ್ಯಾಯಾಲಯ ಸಿಧುಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಇದನ್ನೂ ಓದಿ : Hyderabad Gang Rape : ಹೈದ್ರಾಬಾದ್‌ ಗ್ಯಾಂಗ್‌ ರೇಪ್‌ : ಪೊಲೀಸರಿಂದ ನಕಲಿ ಎನ್‌ಕೌಂಟರ್‌

ಇದನ್ನೂ ಓದಿ : ಮಳೆ‌ ನಡುವೆ ಮತ್ತೆ ಉಸ್ತುವಾರಿ ಫೈಟ್ : ಬೆಂಗಳೂರಿನ ಹೊಣೆ ಯಾರಿಗೆ ನೀಡ್ತಾರೆ ಸಿಎಂ

Navjot Singh Sidhu Surrender Court Road Rage Case

Comments are closed.