basavaraj bommai : ಪಿಎಸ್​ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಮಹತ್ವದ ಹೇಳಿಕೆ ನೀಡಿದ ಸಿಎಂ ಬೊಮ್ಮಾಯಿ

ಬೆಂಗಳೂರು : basavaraj bommai: ರಾಜ್ಯದಲ್ಲಿ ನಡೆದಿರುವ ಪಿಎಸ್​ಐ ನೇಮಕಾತಿ ಅಕ್ರಮವು ದಿನಕ್ಕೊಂದು ಟ್ವಿಸ್ಟ್​ ಪಡೆದುಕೊಳ್ತಿದೆ. ಈ ಪ್ರಕರಣದಲ್ಲಿ ಬಗೆದಷ್ಟೂ ಮಾಹಿತಿಗಳು ದೊರೆಯುತ್ತಲೇ ಇದೆ. ಪ್ರಕರಣ ಸಂಬಂಧ ಕಾಂಗ್ರೆಸ್ ಶಾಸಕ ಪ್ರಿಯಾಂಕ್​ ಖರ್ಗೆ ರಿಲೀಸ್ ಮಾಡಿರುವ ಆಡಿಯೋ ವಿಚಾರವಾಗಿ ಇಂದು ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಯಿಸಿದರು. ಆರ್​,ಟಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​ ನಾಯಕ ಪ್ರಿಯಾಂಕ್​ ಖರ್ಗೆ ಪಿಎಸ್​ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಿಡುಗಡೆ ಮಾಡಿರುವ ಆಡಿಯೋ ಬಗ್ಗೆ ನಾವು ತನಿಖೆ ನಡೆಸುತ್ತೇವೆ. ಈ ಪ್ರಕರಣದಲ್ಲಿ ತಪ್ಪಿತಸ್ಥರು ಯಾರೇ ಇದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಶಾಸಕ ಪ್ರಿಯಾಂಕ್​ ಖರ್ಗೆ ಬಿಡುಗಡೆ ಮಾಡಿರುವ ಆಡಿಯೋವನ್ನು ನಾನು ಕೇಳಿಸಿಕೊಂಡಿಲ್ಲ. ಆಡಿಯೋದಲ್ಲಿ ಇಬ್ಬರ ನಡುವಿನ ಸಂಭಾಷಣೆಯ ಬಗ್ಗೆ ತನಿಖೆ ನಡೆಸಲಾಗುತ್ತದೆ. ಆಡಿಯೋದಲ್ಲಿರುವ ಆ ಇಬ್ಬರು ಯಾರು..? ಅವರ ಉದ್ದೇಶವೇನಾಗಿತ್ತು..? ಹೀಗೆ ಎಲ್ಲದರ ಬಗ್ಗೆ ತನಿಖೆ ನಡೆಯುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.


ಇದೇ ವೇಳೆ ಬೆಂಗಳೂರಿನ ಕೆಲವು ಶಾಲೆಗಳಿಗೆ ಬಂದ ಹುಸಿ ಬಾಂಬ್​ ಕರೆ ವಿಚಾರವಾಗಿಯೂ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಂತಿ ಕದಡಲು ಈ ರೀತಿಯ ಅನೇಕ ಪ್ರಯತ್ನಗಳು ನಡೆಯುತ್ತಲೇ ಇರುತ್ತದೆ. ಮೇಲ್ನೋಟಕ್ಕೆ ಇದು ಪಾಕಿಸ್ತಾನದಿಂದ ಬಂದ ಇ ಮೇಲ್​ನಂತಿದೆ. ಆದರೆ ಈ ವಿಚಾರದ ಬಗ್ಗೆ ನನಗೆ ಪೂರ್ಣ ಮಾಹಿತಿ ಇಲ್ಲ. ಪೊಲೀಸ್​ ಕಮಿಷನರ್​ ಜೊತೆಯಲ್ಲಿ ಈ ವಿಚಾರವಾಗಿ ಮಾತನಾಡುತ್ತೇನೆ. ಇ ಮೇಲ್ ಯಾವ ದೇಶದಿಂದ ಬಂದಿದೆ ಎಂಬುದನ್ನು ಶೀಘ್ರದಲ್ಲಿಯೇ ತಿಳಿದುಕೊಳ್ಳಲಾಗುತ್ತದೆ ಎಂದು ಹೇಳಿದರು.

ರಾಜ್ಯದಲ್ಲಿ 545 ಪಿಎಸ್​ಐ ಹುದ್ದೆಗಳ ನೇಮಕಾತಿ ಅಕ್ರಮದ ಬಗ್ಗೆ ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿರುವ ಬೆನ್ನಲ್ಲೇ 402 ಪಿಎಸ್​ಐ ಹುದ್ದೆಗಳಿಗೆ ನಡೆಯಬೇಕಿದ್ದ ಪರೀಕ್ಷೆಯಲ್ಲಿಯೂ ಅಕ್ರಮ ಎಸಗಿ ಹುದ್ದೆಗೆ ನೇಮಕಗೊಳ್ಳುವ ಬಗ್ಗೆ ಇಬ್ಬರು ಅನಾಮಧೇಯ ವ್ಯಕ್ತಿಗಳು ಮಾತನಾಡಿಕೊಂಡಿರುವ ಆಡಿಯೋವನ್ನು ಕಲಬುರಗಿಯಲ್ಲಿ ಪ್ರಿಯಾಂಕ್​ ಖರ್ಗೆ ಬಿಡುಗಡೆ ಮಾಡಿದ್ದರು.

ಇದನ್ನು ಓದಿ : Shivamogga Airport ಶಿವಮೊಗ್ಗದಲ್ಲಿ ಯಡಿಯೂರಪ್ಪ ವಿಮಾನ ನಿಲ್ದಾಣ 2023 ರಿಂದ ಆರಂಭ

ಇದನ್ನೂ ಓದಿ : JDS: 2023 ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಎಲ್ಲವೂ ಸುಲಭವಿಲ್ಲ: ಆಮ್ ಆದ್ಮಿ, ಎನ್‌ಸಿಪಿ ಸ್ಪರ್ಧೆಗೆ ಇಳಿಯಲಿದೆ

basavaraj bommai says investigate about audio over psi scam

Comments are closed.