JP Nadda : ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಉಡುಪಿಗೆ ಆಗಮನ

ಉಡುಪಿ : ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ ನಡ್ಡಾ (JP Nadda) ಉಡುಪಿಗೆ ಆಗಮಿಸಲಿದ್ದಾರೆ. ಮುಂದಿನ ವಾರ (ಫೆ.20)ರಂದು ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಕೃಷ್ಣಾನೂರಿಗೆ ಆಗಮಿಸಲಿದ್ದಾರೆ. ಇವರ ಆಗಮನಕ್ಕಾಗಿ ಉಡುಪಿ ಜಿಲ್ಲೆಯ ಭಾರತೀಯ ಜನತಾ ಪಾರ್ಟಿಯ ಬೂತ್‌ ಅಧ್ಯಕ್ಷರು ಭರ್ಜರಿ ತಯಾರಿಯನ್ನು ನಡೆಸಿದ್ದಾರೆ.

ಭಾರತೀಯ ಜನತಾ ಪಾರ್ಟಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ ನಡ್ಡಾ ಅವರು ದಿನಾಂಕ ಫೆಬ್ರವರಿ 20, 2023 ರಂದು ಉಡುಪಿ ಜಿಲ್ಲೆಗೆ ಆಗಮಿಸಲಿದ್ದು, ಬೆಳಿಗ್ಗೆ 10.00 ಗಂಟೆಗೆ ಎಂ.ಜಿ.ಎಂ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ 226 ಬೂತ್ ಗಳ ಪ್ರತಿ ಬೂತ್ ನ ಅಧ್ಯಕ್ಷರು ಹಾಗೂ 12 ಮಂದಿ ಸದಸ್ಯರು ಭಾಗವಹಿಸಲಿದ್ದಾರೆ. ಹೀಗಾಗಿ ಅಂದಿನ ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಪಾರ್ಟಿಯ ಬೆಂಬಲಿಗರು ಶೇ.100 ರಷ್ಟು ಹಾಜಾರಾಗಿ ಒಗ್ಗಟ್ಟು ಪ್ರದರ್ಶಿಸಲಿದ್ದಾರೆ.

ಜೆಪಿ ನಡ್ಡಾ ಅವರ ಪೂರ್ಣ ಹೆಸರು ಜಗತ್‌ ಪ್ರಕಾಶ್‌ ನಡ್ಡಾ. ಜಗತ್ ಪ್ರಕಾಶ್ ನಡ್ಡಾ ಒಬ್ಬ ಭಾರತೀಯ ರಾಜಕಾರಣಿ ಮತ್ತು ಪ್ರಸ್ತುತ ಭಾರತೀಯ ಜನತಾ ಪಕ್ಷದ ರಾಷ್ಟ್ರಾಧ್ಯಕ್ಷರಾಗಿದ್ದಾರೆ. ಕೇಂದ್ರ ಸರಕಾರದ ಮಾಜಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿರುವ ಇವರು, ಹಿಮಾಚಲ ಪ್ರದೇಶದ ರಾಜ್ಯಸಭಾ ಸದಸ್ಯರಾಗಿದ್ದಾರೆ. ಈ ಹಿಂದೆ ಅವರು ಹಿಮಾಚಲ ಪ್ರದೇಶ ಸರಕಾರದಲ್ಲಿ ಸಚಿವರಾಗಿದ್ದರು. ನಡ್ಡಾರವರು 2012ರಲ್ಲಿ ವಿಧಾನಸಭೆಗೆ ಸ್ಪರ್ಧಿಸಲಿಲ್ಲ, ಬದಲಿಗೆ ಭಾರತೀಯ ಸಂಸತ್ತಿನ ಮೇಲ್ಮನೆಯ ರಾಜ್ಯಸಭೆಗೆ ಆಯ್ಕೆಯಾದರು. 2014ರಲ್ಲಿ ಕ್ಯಾಬಿನೆಟ್ ಪುನರಚನೆಯ ಸಮಯದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಆರೋಗ್ಯ ಸಚಿವರಾಗಿ ನಡ್ಡಾ ಅವರನ್ನು ಆಯ್ಕೆ ಮಾಡಿದರು. 2019ರಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದರು.

ಇದನ್ನೂ ಓದಿ : ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳಿಂದ ಆಫರ್ ಇದೆ : ಆದ್ರೆ ಫ್ಯಾನ್ಸ್ ಪಕ್ಷಕ್ಕೆ ನನ್ನ ಬೆಂಬಲ ಎಂದ ಕಿಚ್ಚ ಸುದೀಪ್

ಇದನ್ನೂ ಓದಿ : Former MP Ramya : ಚನ್ನಪಟ್ಟಣದಿಂದ ಮಾಜಿ ಸಂಸದೆ ರಮ್ಯಾ ಸ್ಪರ್ಧೆ ಮಾಡಲ್ಲ” ಎಂದ ಸಂಸದ ಡಿ.ಕೆ.ಸುರೇಶ್

ಇದನ್ನೂ ಓದಿ : Sudeep invited by Ramya: ರಾಜಕೀಯಕ್ಕೆ ನಟ ಸುದೀಪ್‌ ಎಂಟ್ರಿ: ಕಾಂಗ್ರೆಸ್‌ ಗೆ ಬರುವಂತೆ ರಮ್ಯಾ ಮೂಲಕ ಆಹ್ವಾನ?

ಈ ಹಿಂದೆ ಉಡುಪಿ ಭಾರತೀಯ ಜನತಾ ಪಾರ್ಟಿಯು ಡಿಸೆಂಬರ್ 25 ರಂದು ನಡೆದ “ಬೂತ್ ಸಂಗಮ” ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ಅದರಂತೆ “ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಆಗಮನದ ಈ ಕಾರ್ಯಕ್ರಮದಲ್ಲಿಯೂ ಭಾಗವಹಿಸಿ ಬಿಜೆಪಿ ಪಕ್ಷವನ್ನು ತಳಮಟ್ಟದಿಂದಲೇ ಬಲಪಡಿಸಲು ಕಂಕಣಬದ್ಧರಾಗಿದ್ದಾರೆ.

ಇದನ್ನೂ ಓದಿ : Narenda Modi : ರಾಜಭವನದಲ್ಲಿ ಪ್ರಧಾನಿ ಮೋದಿ ಭೇಟಿ ಮಾಡಿದ ಅನಿಲ್ ಕುಂಬ್ಳೆ, ಮಯಾಂಕ್ ಅಗರ್ವಾಲ್

Bharatiya Janata Party National President JP Nadda will arrive in Udupi.

Comments are closed.