Child fell into washing machine: ನೀರು ತುಂಬಿದ ವಾಷಿಂಗ್‌ ಮೆಷಿನ್‌ ಗೆ ಬಿದ್ದ ಒಂದೂವರೆ ವರ್ಷದ ಮಗು

ದೆಹಲಿ: (Child fell into washing machine) ಸೋಪ್‌ ನೀರು ತುಂಬಿದ ವಾಷಿಂಗ್‌ ಮೆಷಿನ್‌ ಗೆ ಬಿದ್ದು ಒಂದೂವರೆ ವರ್ಷದ ಮಗು ಪವಾಡ ಸದೃಶ್ಯವಾಗಿ ಬದುಕುಳಿದು ಬಂದ ಘಟನೆ ದೆಹಲಿಯಲ್ಲಿ ನಡೆದಿದೆ. ಏಳು ದಿನ ಕೋಮಾದಲ್ಲಿ ಮತ್ತು ವೆಂಟಿಲೇಟರ್‌ನಲ್ಲಿ ಮತ್ತು ನಂತರ 12 ದಿನ ವಾರ್ಡ್‌ನಲ್ಲಿದ್ದು, ಈಗ ಮಗು ಆರೋಗ್ಯವಾಗಿ ಮನೆಗೆ ಹೋಗಿದೆ.

ಮನೆಯಲ್ಲಿ ಟಾಪ್ ಲೋಡಿಂಗ್ ವಾಷಿಂಗ್ ಮೆಷಿನ್ನ ಮುಚ್ಚಳ ತೆಗೆದಿದ್ದು, ಅದರೊಳಗಡೆ ಮಗು ಬಿದ್ದಿದೆ. ಮಗುವಿನ ತಾಯಿ ಕೋಣೆಯಿಂದ ಹೊರಗಡೆ ಬಂದಾಗ ಮಗು ಮೆಷಿನ್‌ ಒಳಗಡೆ ಬಿದ್ದಿರುವುದು ತಿಳಿದುಬಂದಿದೆ. ಮಗುವಿನ ತಾಯಿಯ ಪ್ರಕಾರ, ಮಗು ಕುರ್ಚಿಯ ಮೇಲೆ ಹತ್ತಿ ಯಂತ್ರಕ್ಕೆ ಜಾರಿರಬಹುದು. ಮೆಷಿನ್‌ನಲ್ಲಿ ಸೋಪ್‌ ನೀರಿದ್ದ ಕಾರಣದಿಂದಾಗಿ ಮಗುವಿನ ಎಲೆಕ್ಟ್ರೋಲೈಟ್ ಅಸಮತೋಲನ ಸೇರಿದಂತೆ ವಿವಿಧ ಅಂಗಗಳ ಕಾರ್ಯಚಟುವಟಿಕೆಗಳು ನಿಂತುಹೋಗಿದ್ದವು.

ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಶೀತ ಹಾಗೂ ಉಸಿರಾಟದ ತೊಂದರೆ ಇತ್ತು. ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದಂತೆ ಅವರನ್ನು ವಸಂತ್ ಕುಂಜ್‌ನಲ್ಲಿರುವ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ಏಳು ದಿನ ಕೋಮಾದಲ್ಲಿ ಮತ್ತು ವೆಂಟಿಲೇಟರ್‌ನಲ್ಲಿದ್ದು, ನಂತರ 12 ದಿನ ವಾರ್ಡ್‌ನಲ್ಲಿದ್ದ ಮಗು ಪವಾಡ ಸದೃಶ್ಯವಾಗಿ ಉಳಿದುಬಂದಿದ್ದು ಈಗ ಮನೆಗೆ ಹೋಗಿದೆ.

ವೈದ್ಯರ ಪ್ರಕಾರ, ಮಗುವನ್ನು ಆಸ್ಪತ್ರೆಗೆ ಕರೆತರುವಾಗ ಮಗುವಿಗೆ ಪ್ರಜ್ಞಾಹೀನತೆ, ಪ್ರತಿಕ್ರಿಯೆಯಿಲ್ಲ, ಶೀತ ಮತ್ತು ಉಸಿರಾಟದ ತೊಂದರೆ ಇತ್ತು. ಮಗುವಿಗೆ ಅಗತ್ಯವಾದ ಪ್ರತಿಜೀವಕಗಳು ಮತ್ತು ಐವಿ ದ್ರವದ ಬೆಂಬಲವನ್ನು ನೀಡಲಾಯಿತು, ನಂತರ ಅವರು ಚೇತರಿಸಿಕೊಳ್ಳಲು ಪ್ರಾರಂಭಿಸಿದರು ಎಂದು ಅವರು ಹೇಳಿದರು. ನಿಧಾನವಾಗಿ, ಅವನು ತನ್ನ ತಾಯಿಯನ್ನು ಗುರುತಿಸಲು ಪ್ರಾರಂಭಿಸಿದ್ದು, ನಂತರ ಮಗುವನ್ನು ವೆಂಟಿಲೇಟರ್ನಿಂದ ತೆಗೆದು ವಾರ್ಡ್‌ ಗೆ ಹಾಕಲಾಯಿತು ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ : Lathi charge by police: ಬಜರಂಗದಳ ಕಾರ್ಯಕರ್ತರ ಮೇಲೆ ಪೊಲೀಸರಿಂದ ಲಾಠಿ ಚಾರ್ಜ್‌: 12 ಮಂದಿಗೆ ಗಾಯ

ಇದನ್ನೂ ಓದಿ : Mumbai crime news: ಪ್ರೇಯಸಿಯನ್ನು ಕೊಂದು ಹಾಸಿಗೆಯ ಪೆಟ್ಟಿಗೆಯಲ್ಲಿ ಶವವನ್ನು ಬಚ್ಚಿಟ್ಟು ಪರಾರಿ

Child fell into washing machine: A one and a half year old child fell into a washing machine full of water

Comments are closed.