BJP 2 Years : ಬಿಜೆಪಿ ಶಾಸಕಾಂಗ ಸಭೆ ದಿಢೀರ್‌ ರದ್ದು : ಆಪ್ತರ ಸಲಹೆ ಆಲಿಸಿದ ಸಿಎಂ ಯಡಿಯೂರಪ್ಪ

ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಮಾತು ಕೇಳಿಬಂದಿತ್ತು. ಅಲ್ಲದೇ ಹೈಕಮಾಂಡ್‌ ಅಗಸ್ಟ್‌ ಮೊದಲ ವಾರ ದೆಹಲಿಗೆ ಬರುವಂತೆ ಸಿಎಂ ಯಡಿಯೂರಪ್ಪಗೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಕರೆದಿದ್ದ ಶಾಸಕಾಂಗ ಸಭೆಯನ್ನು ಆಪ್ತರ ಸಲಹೆಯ ಹಿನ್ನೆಲೆಯಲ್ಲಿ ರದ್ದು ಮಾಡಿದ್ದಾರೆ. ಹೀಗಾಗಿ ಕೇವಲ ಬೋಜನ ಕೂಟಕ್ಕೆ ಆಹ್ವಾನ ನೀಡಲಾಗುತ್ತಿದೆ.

ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸುತ್ತಿದೆ. ಇದರ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ರಾಜೀನಾಮೆ ನೀಡ್ತಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಅಲ್ಲದೇ ಹೈಕಮಾಂಡ್‌ ಸೂಚನೆಯ ಹಿನ್ನೆಲೆಯಲ್ಲಿ ಯಡಿಯೂರಪ್ಪ ಜುಲೈ 25 ರಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ಕರೆದಿದ್ದರು. ಮಾತ್ರವಲ್ಲ ಬಿಜೆಪಿ ಶಾಸಕರಿಗೆ ಭೋಜನ ಕೂಟವನ್ನು ಆಯೋಜಿಸಿದ್ದರು. ಆದ್ರೀಗ ಶಾಸಕಾಂಗ ಸಭೆಯನ್ನು ದಿಢೀರ್‌ ರದ್ದು ಮಾಡಲಾಗಿದೆ. ಹೀಗಾಗಿ ಮುಖ್ಯ ಸಚೇತಕ ಸುನಿಲ್‌ ಕುಮಾರ್‌ ಅವರು ಶಾಸಕರನ್ನು ಜುಲೈ 25ರಂದು ಸಂಜೆ 7 ಗಂಟೆಗೆ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಭೋಜನ ಕೂಟಕ್ಕೆ ಶಾಸಕರನ್ನು ಆಹ್ವಾನಿಸಿದ್ದಾರೆ.

ಬಿಜೆಪಿ ಹೈಕಮಾಂಡ್‌ ಅಗಸ್ಟ್‌ ಮೊದಲ ವಾರದ ಯಡಿಯೂರಪ್ಪ ಅವರನ್ನು ದೆಹಲಿಗೆ ಬರುವಂತೆ ಸೂಚನೆಯನ್ನು ನೀಡಿದೆ. ಅಷ್ಟರಲ್ಲಿ ಶಾಸಕಾಂಗ ಸಭೆಯನ್ನುಕರೆದ್ರೆ ಸಮಸ್ಯೆ ಉದ್ಬವವಾಗಲಿದೆ. ಹೀಗಾಗಿ ಸಭೆಯನ್ನು ನಡೆಸದೇ ಕೇವಲ ಭೋಜನ ಕೂಟ ವ್ಯವಸ್ಥೆ ಮಾಡುವಂತೆ ಆಪ್ತರು ಯಡಿಯೂರಪ್ಪಗೆ ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಾಸಗಾಂಕ ಪಕ್ಷದ ಸಭೆಯನ್ನೇ ದಿಢೀರ್‌ ರದ್ದು ಮಾಡಿದ್ದಾರೆ.

ರಾಜ್ಯ ರಾಜಕೀಯದಲ್ಲಿ ದಿನಕ್ಕೊಂದು ಬದಲಾವಣೆ ನಡೆಯುತ್ತಿದ್ದು, ನಾಯಕತ್ವ ಬದಲಾವಣೆ ಮಾತುಗಳು ಬಲವಾಗಿ ಕೇಳಿಬರುತ್ತಿದೆ. ಯಡಿಯೂರಪ್ಪ ವಿರೋಧಿ ಪಾಳಯ ನಾಯಕತ್ವ ಬದಲಾವಣೆಗೆ ತಂತ್ರಗಳನ್ನು ಹೆಣೆಯುತ್ತಿದ್ರೆ ಯಡಿಯೂರಪ್ಪ ಆಪ್ತರು ಪ್ರತಿತಂತ್ರ ಹೆಣೆಯುತ್ತಿದ್ದಾರೆ. ಒಟ್ಟಿನಲ್ಲಿ ರಾಜ್ಯ ಸರಕಾರಕ್ಕೆ ಎರಡು ವರ್ಷ ಭರ್ತಿಯಾಗುತ್ತಲೇ ರಾಜ್ಯ ರಾಜಕೀಯದಲ್ಲಿ ಬದಲಾವಣೆ ನಡೆಯೋದು ಮಾತ್ರ ಗ್ಯಾರಂಟಿ.

Comments are closed.