Yaduveer Wodeyar: ಕೆ.ಆರ್.ಎಸ್ ಆಣೆಕಟ್ಟಿನಲ್ಲಿ ಬಿರುಕು….! ಮೊದಲ ಬಾರಿಗೆ ಮೌನ ಮುರಿದ ಯದುವೀರ ಒಡೆಯರ್…!!

ಕೆ.ಆರ್.ಎಸ್ ಆಣೆಕಟ್ಟು ಬಿರುಕು ಬಿಟ್ಟಿದೆ, ಅಪಾಯದ ಅಂಚಿನಲ್ಲಿದೆ ಎಂಬ ಚರ್ಚೆಗಳ ವೇಳೆ ಮೌನವಾಗಿದ್ದ ಮೈಸೂರು ಅರಮನೆಯಿಂದ ಮೊದಲ ಪ್ರತಿಕ್ರಿಯೆ ಹೊರಬಂದಿದ್ದು, ಈ ಬಗ್ಗೆ ನಾವು ಮಾಧ್ಯಮಗಳಲ್ಲಿ ಬಂದ ಸುದ್ದಿ ಗಮನಿಸಿದ್ದೇವೆ. ಆದರೆ ಸರ್ಕಾರದಿಂದ ನಮಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಮೈಸೂರಿನ ಯುವರಾಜ ಯದುವೀರ ಒಡೆಯರ್ ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಯದುವೀರ ಒಡೆಯರ್, ಕೆ.ಆರ್.ಎಸ್ ಆಣೆಕಟ್ಟಿನಲ್ಲಿ ಬಿರುಕು ಬಿಟ್ಟಿದೆ ಎಂಬ ಸುದ್ದಿಯನ್ನು ಮಾಧ್ಯಮದಲ್ಲಿ ನೋಡಿದ್ದೇವೆ. ಆದರೆ ಸರ್ಕಾರ ಮೈಸೂರು ಅರಮನೆಗೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ .

ಕೆಆರ್ಎಸ್ ಎಕ್ಸಫರ್ಟ್ಸ್ ಕಮಿಟಿ ಯಾವ ವರದಿ ನೀಡುತ್ತೆ ಅನ್ನೋದು ಮುಖ್ಯವಾಗುತ್ತದೆ. ಎಕ್ಸಫರ್ಟ್ಸ್ ಕಮಿಟಿ ಯಾವ ತೀರ್ಮಾನ ಕೈಗೊಳ್ಳುತ್ತದೆ ನೋಡೋಣ. ಒಂದೊಮ್ಮೆ ಆಣೆಕಟ್ಟಿನ ಬಳಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೇ , ನಿಲ್ಲಿಸಬೇಕಾಗುತ್ತದೆ.  ಸರ್ಕಾರ ಈ ಬಗ್ಗೆ ತನಿಖೆ ನಡೆಸಿ ಡ್ಯಾಂ ಸುರಕ್ಷತೆಗೆ ಕ್ರಮಕೈಗೊಳ್ಳಬೇಕು ಎಂದು ಯದುವೀರ ಹೇಳಿದ್ದಾರೆ.

ಮೈಸೂರು ಸಂಸ್ಥಾನದ ಎಲ್ಲ ಕೊಡುಗೆಗಳು ಹಿಂದೆಯೂ  ಉಪಯೋಗವಾಗಿದೆ. ಇಂದು ಉಪಯೋಗವಾಗುತ್ತಿದೆ. ಮುಂದು ಉಪಯೋಗವಾಗಲಿದೆ ಎಂಬುದು ನಮ್ಮ ಅಭಿಲಾಷೆ. ಹೀಗಾಗಿ ಎಕ್ಸಫರ್ಟ್ಸ್ ಕಮಿಟಿ ವರದಿ ಆಧರಿಸಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂಬ ವಿಶ್ವಾಸ ನಮಗಿದೆ ಎಂದಿದ್ದಾರೆ.

Comments are closed.