IND vs SL : ದೀಪಕ್‌ ಚಹರ್, ‌ ಭುವನೇಶ್ವರ್ ಪರಾಕ್ರಮ: ಸರಣಿ ಕೈವಶ ಮಾಡಿಕೊಂಡ ಟೀಂ ಇಂಡಿಯಾ

ಕೊಲಂಬೋ : ಶ್ರೀಲಂಕಾ ವಿರುದ್ದ ಎರಡನೇ ಏಕದಿನ ಪಂದ್ಯದಲ್ಲಿ ಭಾರತದ ಬೌಲರ್‌ಗಳಾದ ದೀಪಕ್‌ ಚಹರ್‌ ಮತ್ತು ಭುವನೇಶ್ವರ್‌ ಕುಮಾರ್‌ ದಾಖಲೆಯ ಜೊತೆಯಾಟದ ನೆರವಿನಿಂದ ರೋಚಕ ಗೆಲುವು ಸಾಧಿಸಿ, ಸರಣಿಯನ್ನು ಕೈವಶ ಮಾಡಿಕೊಂಡಿದೆ.

ಮೊದಲ ಏಕದಿನ ಪಂದ್ಯವನ್ನು ಸುಲಭವಾಗಿ ಜಯಿಸಿದ್ದ ಟೀಂ ಇಂಡಿಯಾ ಎರಡನೇ ಪಂದ್ಯದಲ್ಲಿ ಎಡವಿತ್ತು. ಸೋಲಿನ ಸುಳಿಗೆ ಸಿಲುಕಿದ್ದಾಗಲೇ ಭಾರತಕ್ಕೆ ಆಸರೆಯಾಗಿದ್ದು ವೇಗದ ಬೌಲರ್‌ಗಳಾದ ದೀಪಕ್‌ ಚಹರ್‌ ಹಾಗೂ ಭುವೇಶ್ವರ್‌ ಕುಮಾರ್.‌ 193 ರನ್ ಗಳಿಸಿದ್ದಾಗ ಭಾರತ 7ನೇ ವಿಕೆಟ್‌ ಕಳೆದುಕೊಂಡಿತ್ತು. ಸೂರ್ಯ ಕುಮಾರ್‌ ಯಾದವ್‌ ಔಟಾಗುತ್ತಲೇ ಭಾರತಕ್ಕೆ ಸೋಲು ಖಚಿತ ಅನ್ನೋದು ದೃಢವಾಗಿತ್ತು. ಆದರೆ ಮುರಿಯದ 8ನೇ ವಿಕೆಟಿಗೆ ದೀಪಕ್ ಚಹರ್ ಮತ್ತು ಭುವನೇಶ್ವರ್ ಕುಮಾರ್ 84 ಎಸೆತಗಳಲ್ಲಿ 84 ರನ್ ಜೊತೆಯಾಟ ಆಡಿ ಭಾರತ ಸರಣಿ ಗೆಲ್ಲುವಂತೆ ಮಾಡಿದರು.

ಶ್ರೀಲಂಕಾ ನೀಡಿದ್ದ 276 ರನ್ ಗಳ ಗುರಿಯನ್ನು ಪಡೆದ ಭಾರತ ತಂಡ ಆರಂಭಿಕ ಆಘಾತ ಅನುಭವಿಸಿತ್ತು. ಪ್ರಥ್ವಿಶಾ 13 ರನ್‌ ಗಳಿಸಿ ಔಟಾದ್ರೆ ಇಶಾನ್‌ ಕಿಶನ್‌ ಕೇವಲ 1 ರನ್‌ಗೆ ಪೆವಿಲಿಯನ್‌ ಹಾದಿ ಹಿಡಿದಿದ್ದರು. ನಂತರ ಧವನ್‌ 29 (38 ಎಸೆತ 6 ಬೌಂಡರಿ) ಮತ್ತು ಮನೀಶ್‌ ಪಾಂಡೆ 37 (31ಎಸೆತ 3 ಬೌಂಡರಿ) ಉತ್ತಮ ಜೊತೆಯಾಟ ನೀಡಿದ್ರು. ಕೆಟ್ಟ ಹೊಡೆತ ಕ್ಕೆ ಧವನ್‌ ಔಟಾದ್ರೆ ಪಾಂಡೆ ಅನಗತ್ಯ ರನೌಟ್‌ ಗೆ ಬಲಿಯಾದ್ರು. ನಂತರ ಹಾರ್ದಿಕ್‌ ಪಾಂಡ್ಯ ಸೊನ್ನೆ ಸುತ್ತಿದ್ರೆ, ಕೃನಾಲ್‌ ಪಾಂಡ್ಯ 35 (44 ಎಸೆತ 6 ಬೌಂಡರಿ) ಗಳಿಸಿದ್ರು. ನಂತರ ಸೂರ್ಯ ಕುಮಾರ್‌ ಯಾದವ್‌ 53(44 ಎಸೆತ 6 ಬೌಂಡರಿ) ಜೊತೆಯಾದ ದೀಪಕ್‌ ಚಹರ್‌ ಉತ್ತಮ ಹೊಡೆತಕ್ಕೆ ಮುಂದಾದ್ರು ಭಾರತಕ್ಕೆ ಗೆಲುವಿನ ಆಸೆ ಮೂಡಿಸಿದ್ರು. ಆದ್ರೆ ಸೂರ್ಯ ಕುಮಾರ್‌ ಯಾದವ್‌ ಔಟಾಗುತ್ತಲೇ ಸೋಲು ಖಚಿತವಾಗಿತ್ತು.

ಸೂರ್ಯ ಕುಮಾರ್ ಯಾದವ್, ದೀಪಕ್ ಚಹರ್ ಅವರ ಅರ್ಧಶತಕದಿಂದ 49.1 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 277 ರನ್ ಹೊಡೆದು ಜಯಗಳಿಸಿತು. ಭಾರತಕ್ಕೆ ಆರಂಭದಲ್ಲಿಯೇ ಆಘಾತ ಎದುರಾಗಿತ್ತು. ಪ್ರಥ್ವಿ ಶಾ ಹಾಗೂ ಇಶಾನ್‌ ಕಿಶನ್‌ ಬಹುಬೇಗನೇ ಪೆವಿಲಿಯನ್‌ ಹಾದಿ ಹಿಡಿದಿದ್ದರು.

ಸೋಲಿನತ್ತ ಮುಖ ಮಾಡಿದ್ದ ಟೀಂ ಇಂಡಿಯಾ ಮೂರು ವಿಕೆಟ್‍ಗಳಿಂದ ಎರಡನೇ ಪಂದ್ಯವನ್ನು ಕೊನೆಯ ಓವರಿನಲ್ಲಿ ರೋಚಕವಾಗಿ ಜಯಗಳಿಸಿದೆ. ಈ ಮೂಲಕ ಇನ್ನು ಒಂದು ಪಂದ್ಯ ಇರುವಂತೆಯೇ ಏಕದಿನ ಸರಣಿಯನ್ನು ಗೆದ್ದುಕೊಂಡಿದೆ. ಟೀಂ ಇಂಡಿಯಾ ಪರ ಸೂರ್ಯಕುಮಾರ್ ಯಾದವ್ 53 ರನ್(44 ಎಸೆತ, 6 ಬೌಂಡರಿ), ಮನೀಷ್ ಪಾಂಡೆ 37 ರನ್ (31 ಎಸೆತ, 3 ಬೌಂಡರಿ) ಹೊಡೆದು ಔಟಾದರು. ದೀಪಕ್ ಚಹರ್ ಔಟಾಗದೇ 69 ರನ್(82 ಎಸೆತ, 7 ಬೌಂಡರಿ, 1 ಸಿಕ್ಸರ್), ಭುವನೇಶ್ವರ್ ಕುಮಾರ್ ಔಟಾಗದೇ 19 ರನ್(28 ಎಸೆತ, 2 ಬೌಂಡರಿ) ಬಾರಿಸಿದ್ದಾರೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ ತಂಡಕ್ಕೆ ಉತ್ತಮ ಆರಂಭ ದೊರಕಿತ್ತು. ಆವಿಷ್ಕಾ ಫೆರ್ನಾಂಡೋ 50 ರನ್(71 ಎಸೆತ, 4 ಬೌಂಡರಿ, 1 ಸಿಕ್ಸರ್), ಮಿನೋದ್ ಭನುಕಾ 36 ರನ್ (42 ಎಸೆತ, 6 ಬೌಂಡರಿ) ೭೭ರನ್‌ ಜೊತೆಯಾಟ ನೀಡಿದ್ರು. ಅಲ್ಲದೇ ನಂತರದಲ್ಲಿ ಧನಂಜಯ ಡಿಸಿಲ್ವಾ 32 ರನ್(45 ಎಸೆತ, 1 ಬೌಂಡರಿ), ಚರಿತ್ ಅಸಲಂಕಾ 65 ರನ್(68 ಎಸೆತ, 6 ಬೌಂಡರಿ) ಬಾರಿಸಿದ್ರೆ, ಕೊನೆಯಲ್ಲಿ ಚಮಿಕಾ ಕರುಣರತ್ನೆ 44 ರನ್(33 ಎಸೆತ, 5 ಬೌಂಡರಿ) ಅದ್ಬುತ ಬ್ಯಾಟಿಂಗ್‌ ನೆರವಿನಿಂದ ಶ್ರೀಲಂಕಾ ತಂಡ ಒಟ್ಟು 50 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 275 ರನ್ ಗಳಿಸಿತು.

ಭಾರತ ತಂಡದ ಪರ ಭುವನೇಶ್ವರ್‌ ಕುಮಾರ್‌ 54/3, ಯಜುವೇಂದ್ರ ಚಹಲ್‌ 50/3, ದೀಪಕ್‌ ಚಹರ್‌ 53/2 ವಿಕೆಟ್‌ ಪಡೆದುಕೊಂಡರು. ಮೂರು ಏಕದಿನ ಸರಣಿಯಲ್ಲಿ ಭಾರತ 2-0 ಅಂತರದಿಂದ ಕೈವಶ ಮಾಡಿಕೊಂಡಿದ್ದು, ಅಂತಿಮ ಏಕದಿನ ಪಂದ್ಯ ಶುಕ್ರವಾರ ಕೊಲಂಬೋದಲ್ಲಿ ನಡೆಯಲಿದೆ.

Comments are closed.