illegal psi recruitment case : ಬಾಯಿಗೆ ಬಂದದ್ದು ಮಾತನಾಡುವುದೇ ಕಾಂಗ್ರೆಸ್ಸಿಗರ ಕೆಲಸ : ಬಿ.ಸಿ ಪಾಟೀಲ್​

ಹಾವೇರಿ : illegal psi recruitment case :ಕಮಿಷನ್​ ದಂಧೆ ಆರೋಪದಲ್ಲಿ ಮಾಜಿ ಸಚಿವ ಕೆ.ಎಸ್​ ಈಶ್ವರಪ್ಪರ ತಲೆದಂಡ ಪಡೆಯುವಲ್ಲಿ ಯಶಸ್ವಿಯಾಗಿದ್ದ ಕಾಂಗ್ರೆಸ್​ ನಾಯಕರು ಇದೀಗ ಪಿಎಸ್​ಐ ನೇಮಕಾತಿ ಅಕ್ರಮದಲ್ಲಿ ಸಚಿವ ಡಾ.ಸಿ ಅಶ್ವತ್ಥ ನಾರಾಯಣ್​​ರ ತಲೆದಂಡ ಪಡೆಯಲು ಇನ್ನಿಲ್ಲದ ಕಸರತ್ತನ್ನು ಮಾಡುತ್ತಿದೆ. ಈ ಪ್ರಕರಣದಲ್ಲಿ ಡಾ.ಸಿ ಅಶ್ವತ್ಥ ನಾರಾಯಣರ ಸಹೋದರನ ಪಾತ್ರವಿದೆ ಎಂಬುದು ಕಾಂಗ್ರೆಸ್​ ನಾಯಕರ ವಾದವಾಗಿದೆ.


ಪಿಎಸ್​ಐ ನೇಮಕಾತಿ ಅಕ್ರಮದಲ್ಲಿ ಕಾಂಗ್ರೆಸ್​ಗೆ ಆಪಾದನೆ ಮಾಡುವುದೇ ಕೆಲಸವಾಗಿದೆ ಎಂದು ಸಚಿವ ಬಿ.ಸಿ ಪಾಟೀಲ್​ ಗುಡುಗಿದ್ದಾರೆ. ಹಾವೇರಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಕಾಂಗ್ರೆಸ್​ ನಾಯಕರು ಆಪಾದನೆ ಮಾಡುವುದೇ ನಮ್ಮ ಕೆಲಸ ಎಂಬಂತೆ ಬಾಯಿಗೆ ಬಂದದ್ದನ್ನು ಮಾತನಾಡುತ್ತಿದ್ದಾರೆ . ಆದರೆ ಈ ಹಗರಣಕ್ಕೂ ಬಿಜೆಪಿ ನಾಯಕರಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಹೇಳಿದ್ರು.


ಇನ್ನು ಧರ್ಮ ಸಂಘರ್ಷಗಳ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು, ಎಲ್ಲಿಯವರೆಗೆ ಧರ್ಮ ಎನ್ನುವುದು ಇರುತ್ತದೆಯೋ ಅಲ್ಲಿಯವರೆಗೆ ಧರ್ಮ ಯುದ್ಧ ನಡೆಯುತ್ತದೆ. ಸರ್ಕಾರದ ಆದೇಶ ಹಾಗೂ ನ್ಯಾಯಾಲಯದ ತೀರ್ಪಿಗೆ ದೇಶದ ಜನತೆ ತಲೆಬಾಗಲೇಬೇಕು. ನಮ್ಮ ದೇಶವನ್ನು ತಾಲಿಬಾನ್​ ಆಗಲು ನಾವು ಬಿಡುವುದಿಲ್ಲ. ತಾಲಿಬಾನ್​ ಸಂಸ್ಕೃತಿ ಕರ್ನಾಟಕದ ಒಳಗೆ ಕಾಲಿಡಲು ನಾವು ಅವಕಾಶ ನೀಡಿವುದಿಲ್ಲ. ನಮ್ಮ ದೇಶ ಎಂದಿಗೂ ನಮ್ಮ ಸಂಸ್ಕೃತಿಯನ್ನು ಹೊಂದುವ ಮೂಲಕ ನಮ್ಮ ದೇಶವಾಗಿಯೇ ಇರಲಿದೆ ಎಂದು ಹೇಳಿದರು.

ಇದನ್ನು ಓದಿ : Corona Death : ಕೊರೋನಾದಿಂದ ಕಂಗೆಟ್ಟವರಿಗೆ ಸಮಾಧಾನದ ಸುದ್ದಿ: ಏಪ್ರಿಲ್‌ನಲ್ಲಿ ದಾಖಲಾಯ್ತು ಅತಿ ಕಡಿಮೆ ಸಾವಿನ ಸಂಖ್ಯೆ

ಇದನ್ನೂ ಓದಿ : Corona Death : ಕೊರೋನಾದಿಂದ ಕಂಗೆಟ್ಟವರಿಗೆ ಸಮಾಧಾನದ ಸುದ್ದಿ: ಏಪ್ರಿಲ್‌ನಲ್ಲಿ ದಾಖಲಾಯ್ತು ಅತಿ ಕಡಿಮೆ ಸಾವಿನ ಸಂಖ್ಯೆ

bjp not involved in illegal psi recruitment case bc patil

Comments are closed.